Aunty Love: ಶ್ರಾವಣ ಆದ ಮೇಲೆ ಮದುವೆಯಾಗ್ತೀನಿ ಅಂತಾ ಆಂಟಿಗೆ ವಂಚನೆ ಮಾಡಿದ ಯುವಕ, ದೂರು ದಾಖಲು…!

Aunty Love – ಪ್ರೀತಿ ಯಾರಿಗೆ ಯಾವಾಗ ಹುಟ್ಟುತ್ತದೆ ಎಂಬುದು ಹೇಳೋಕೆ ಆಗೊಲ್ಲ, ಹದಿಹರೆಯದ ಯುವತಿಯರು ಮುದುಕರನ್ನು ಪ್ರೀತಿಸಿ ಮದುವೆಯಾದ ಅನೇಕ ಘಟನೆಗಳನ್ನು ನೋಡಿದ್ದೇವೆ. ಜೊತೆಗೆ ಮೋಸ, ವಂಚನೆ ಸಹ ನಡೆದಿರುತ್ತದೆ. ಇದೀಗ ಆಂಟಿಯೊಬ್ಬಳಿಗೆ (Aunty Love) ಪ್ರೀತಿಸಿದ ಯುವಕನೋರ್ವ ಮೋಸ ಮಾಡಿದ್ದಾನೆ. ಶ್ರಾವಣ ಮುಗಿದ ಬಳಿಕ ಮದುವೆಯಾಗುತ್ತೇನೆ ಎಂದು ಮೋಸ ಮಾಡಿದ್ದಾನೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

boy left aunty in bangalore 1

ಪ್ರೀತಿ ಎಂಬುದು ಮಾಯೆ ಎಂದು ಹೇಳುತ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ಆಂಟಿಯೊಬ್ಬಳನ್ನು (Aunty Love) ಪ್ರೀತಿಸಿ ವಂಚನೆ ಮಾಡಿದ ಘಟನೆಯೊಂದು ನಡೆದಿದೆ. ಈ ವರ್ಷದ ಆಷಾಡ ಕಳೆದು ಶ್ರಾವಣ ಬಂದ ಬಳಿಕ ಮದುವೆಯಾಗ್ತೀನಿ ಎಂದು ಹೇಳಿ ಆಕೆಯನ್ನು ಮೋಸ ಮಾಡಿದ್ದಾನೆ. ಆರೋಪಿಯನ್ನು ಪ್ರಜ್ವಲ್ ಎಂದು ಗುರ್ತಿಸಲಾಗಿದೆ. (Aunty Love)  ಗಂಡನಿಂದ ದೂರವಿದ್ದ 2 ಮಕ್ಕಳ ತಾಯಿ ಮೋಸ ಹೋಗಿದ್ದಾಳೆ. ಇನ್ನೂ ಸಂತ್ರಸ್ತೆ (Aunty Love) ಮಹಿಳೆ ಕಳೆದ 13 ವರ್ಷಗಳ ಹಿಂದೆಯೇ ಗಂಡನನ್ನು ಬಿಟ್ಟು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಳು. ತನ್ನ ಗಂಡ ಹಲ್ಲೆ ಮಾಡುತ್ತಿದ್ದ ಎಂದು ಗಂಡನಿಂದ ಬೇರೆಯಾಗಿ 8 ತಿಂಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದು ಜೀವನ ಸಾಗಿಸಲು ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಜೊತೆಗೆ ಬೇಸರ ಕಳೆಯಲು (Aunty Love) ರೀಲ್ಸ್ ಮಾಡುತ್ತಿದ್ದಳು. ರೀಲ್ಸ್ ಮೂಲಕ ಆರೋಪಿ ಪ್ರಜ್ವಲ್ ಪರಿಚಯವಾಗಿದೆ.

boy left aunty in bangalore 0

ಈ ನಡುವೆ ಮಹಿಳೆ (Aunty Love) ಮಾಡುತ್ತಿದ್ದ ಪ್ರತಿಯೊಂದು ರೀಲ್ಸ್ ಗೂ ಪ್ರಜ್ವಲ್ ಹಾರ್ಟ್ ಎಮೋಜಿಗಳಿಂದ ಕಾಮೆಂಟ್ ಮಾಡುತ್ತಿದ್ದ, ಇದು ಇಬ್ಬರ ನಡುವೆ ಸ್ನೇಹ ಹಾಗೂ ಪ್ರೀತಿಯಾಗಿ ಬದಲಾಗಿದೆ. ಆಕೆಗೆ ಮದುವೆ ಆಗಿರುವ ಬಗ್ಗೆ ಗೊತ್ತಿದ್ದರೂ ತನಗೆ ಬಾಳು ಕೊಡ್ತೀನಿ ಅಂತಾ ಹೇಳಿದ್ದನಂತೆ. ಜೊತೆಗೆ ಯುವಕನ ತಾಯಿ (Aunty Love)  ಬಳಿಯೂ ಈ ವಿಚಾರ ಪ್ರಸ್ತಾಪಿಸಿದ್ದನಂತೆ. ನಾನು ನೋಡಲು ಚೆನ್ನಾಗಿಲ್ಲ, ನಿನಗೆ ಮದುವೆಯಾಗಿದ್ದರೂ ಪರವಾಗಿಲ್ಲ ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಈ ಆಷಾಡ ಮುಗಿಯಲಿ, ಶ್ರಾವಣ ಮಾಸದ ಬಳಿಕ ಮದುವೆಯಾಗ್ತೀನಿ (Aunty Love) ಅಂತಾ ಕಳೆದ ಮೂರು ತಿಂಗಳಿಂದ ಗುಟ್ಟಾಗಿ ಸಂಸಾರ ಮಾಡಿದ್ದಾನೆ ಜೊತೆಗೆ ಮಹಿಳೆಯ ಇಬ್ಬರೂ ಮಕ್ಕಳನ್ನು ಸಹ ಚೆನ್ನಾಗಿ ನೋಡಿಕೊಳ್ಳತ್ತಿದ್ದನಂತೆ, ಅದು ಏನಾಯ್ತೋ ಏನೋ ಇದ್ದಕ್ಕಿಂದ್ದಂತೆ ಪ್ರಜ್ವಲ್ ಆಕೆಯಿಂದ ದೂರವಾಗಲು ಶುರುಮಾಡಿದ್ದನಂತೆ. ನನಗೆ ನೀನು ಬೇಡ. ನಿನ್ನ ಹಳೇ ಗಂಡನನ್ನು ಕರ್ಕೊಂಡು ಬಾ, ನಿನ್ನ ಮೇಲೆ ನನಗೆ ಅನುಮಾನವಿದೆ ಎಂದು ಹೇಳಿದ್ದಾನಂತೆ. ಇದರಿಂದ ಪ್ರಜ್ವಲ್ ನನಗೆ ಬೇಕೆ ಬೇಕು ಎಂದು ಪಟ್ಟು ಹಿಡಿದ (Aunty Love)  ಮಹಿಳೆ ಅವನ ಜೊತೆ ಮದುವೆಯಾಗದೇ ಇದ್ದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾಳಂತೆ. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

Anganawadi Food: ಅಂಗನವಾಡಿಯಿಂದ ಕೊಟ್ಟ ಪೌಷ್ಟಿಕ ಆಹಾರದಲ್ಲಿ ಸತ್ತ ಇಲಿ ಪತ್ತೆ ಆರೋಪ

Sun Aug 11 , 2024
Anganawadi Food – ಚಿಕ್ಕಬಳ್ಳಾಪುರದ ಗುಡಿಬಂಡೆ  ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡಾಚಾರ್ಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ವಿತರಿಸಲಾದ ಬೆಲ್ಲದ (Anganawadi Food) ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಗರ್ಭಿಣಿ ಸ್ತ್ರೀಯರು, ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾದ ಪೌಷ್ಟಿಕ (Anganawadi Food) ಆಹಾರ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಗರುಡಾಚಾರ್ಲಹಳ್ಳಿ ಗ್ರಾಮದ ನಿವಾಸಿ ರತ್ನಮ್ಮ ಎಂಬುವರಿಗೆ ನೀಡಿದ ಎರಡು (Anganawadi Food) ಆಹಾರ ಪೊಟ್ಟಣಗಳ […]
death rat found in anganawadi food
error: Content is protected !!