ಮೇ.13 ರಂದು ಆಂಧ್ರಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ನಡೆದಿದ್ದು, ಮತಗಟ್ಟೆಯಲ್ಲಿ ವೈ.ಎಸ್.ಆರ್. ಕಾಂಗ್ರೇಸ್ ಶಾಸಕ ಎ.ಶಿವಕುಮಾರ್ ಮತಗಟ್ಟೆಯಲ್ಲಿ ಮತದಾರರೊಬ್ಬರಿಗೆ ಕಪಾಳಕ್ಕೆ ಬಾರಿಸಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಶಾಸಕ ಮತದಾರರನಿಗೆ ಕೆನ್ನೆಗೆ ಬಾರಿಸಿದ ಬಳಿಕ ಆ ವ್ಯಕ್ತಿ ಶಾಸಕನ ಕೆನ್ನೆಗೂ ಬಾರಿಸಿದ ಘಟನೆ ನಡೆದಿದೆ.
ಸಾಮಾನ್ಯವಾಗಿ ಚುನಾವಣೆ ಎಂದ ಕೂಡಲೇ ಎಲ್ಲಾ ಕಡೆ ಶಾಂತಿಯುವವಾಗಿ ಚುನಾವಣೆ ನಡೆಯೊಲ್ಲ. ಕೆಲವೊಂದು ಕಡೆ ಘರ್ಷಣೆಗಳೂ ಸಹ ನಡೆಯುತ್ತಿರುತ್ತದೆ. ಸದ್ಯ ಆಂಧ್ರಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ನಿಮಿತ್ತ ಮೇ.13 ರಂದು ಮತದಾನ ನಡೆದಿದೆ. ಈ ಸಮಯದಲ್ಲಿ ವೈ.ಎಸ್.ಆ.ರ್ ಕಾಂಗ್ರೇಸ್ ನ ಶಾಸಕ ಎ.ಶಿವಕುಮಾರ್ ಮತಗಟ್ಟೆಯಲ್ಲಿ ನಿಂತಿದ್ದ ಓರ್ವ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಬಳಿಕ ಆ ವ್ಯಕ್ತಿ ಸಹ ಶಾಸಕರ ಕೆನ್ನೆಗೆ ಬಾರಿಸಿದ್ದಾನೆ. ಈ ಸಮಯದಲ್ಲಿ ಶಿವಕುಮಾರ್ ಬೆಂಬಲಿಗರು ಮತದಾರನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಇತರ ಮತದಾರರು ಇಬ್ಬರ ಘರ್ಷಣೆ ತಡೆಯಲು ಪ್ರಯತ್ನಿಸಿದ್ದರೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಾತ್ರ ಮತದಾರನ ರಕ್ಷಣೆ ಬರಲಿಲ್ಲ ಎನ್ನಲಾಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಓರ್ವ ರಾಜಕಾರಣಿ ಮತದಾರರ ಜತೆ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲಿ ಎಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಆಕ್ರೋಷ ಸಹ ವ್ಯಕ್ತವಾಗಿದೆ.
ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ಶಿವಕುಮಾರ್ ಹಾಗೂ ಮತದಾರ ಇಬ್ಬರೂ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಆಂಧ್ರ ಪ್ರದೇಶದ ಚುನಾವಣೆಯ ಮತದಾನ ಪ್ರಕ್ರಿಯೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾಗಿದೆ. ನಾಲ್ಕನೇ ಹಂತದ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭಾ ಚುನಾವಣೆಗೂ ಮತದಾನ ನಡೆಯುತ್ತಿದೆ. ಈ ಹಿಂದೆ ಸಹ ಆಂಧ್ರಪ್ರದೇಶದಲ್ಲಿ ಚುನಾವಣೆ ನಡೆದಾಗ ಕೆಲವೊಂದು ಕಡೆದ ಹಿಂಸಾಚಾರದಂತಹ ಘಟನೆಗಳು ನಡೆದಿತ್ತು. ಚುನಾವಣಾ ಮತದಾನದ ಹಿಂದಿನ ದಿನ ಸಹ ವೈ.ಎಸ್.ಆರ್.ಪಿ ಪಕ್ಷ ತನ್ನ ಪೋಲ್ ಏಜೆಂಟರನ್ನು ಅಪರಿಸಿದೆ ಎಂದು ಟಿಪಿಪಿ ಆರೋಪ ಮಾಡಿತ್ತು.