ಮತದಾರನ ಮೇಲೆ ವೈ.ಎಸ್.ಆರ್ ಕಾಂಗ್ರೇಸ್ ಶಾಸಕ ದರ್ಪ, ಮತಗಟ್ಟೆಯಲ್ಲಿ ಮತದಾರನ ಕೆನ್ನೆಗೆ ಬಾರಿದ ಶಾಸಕ ಶಿವಕುಮಾರ್….!

ಮೇ.13 ರಂದು ಆಂಧ್ರಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ನಡೆದಿದ್ದು, ಮತಗಟ್ಟೆಯಲ್ಲಿ ವೈ.ಎಸ್.ಆರ್‍. ಕಾಂಗ್ರೇಸ್ ಶಾಸಕ ಎ.ಶಿವಕುಮಾರ್‍ ಮತಗಟ್ಟೆಯಲ್ಲಿ ಮತದಾರರೊಬ್ಬರಿಗೆ ಕಪಾಳಕ್ಕೆ ಬಾರಿಸಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಶಾಸಕ ಮತದಾರರನಿಗೆ ಕೆನ್ನೆಗೆ ಬಾರಿಸಿದ ಬಳಿಕ ಆ ವ್ಯಕ್ತಿ ಶಾಸಕನ ಕೆನ್ನೆಗೂ ಬಾರಿಸಿದ ಘಟನೆ ನಡೆದಿದೆ.

ysrcp mla shivakumar slapped voter 1

ಸಾಮಾನ್ಯವಾಗಿ ಚುನಾವಣೆ ಎಂದ ಕೂಡಲೇ ಎಲ್ಲಾ ಕಡೆ ಶಾಂತಿಯುವವಾಗಿ ಚುನಾವಣೆ ನಡೆಯೊಲ್ಲ. ಕೆಲವೊಂದು ಕಡೆ ಘರ್ಷಣೆಗಳೂ ಸಹ ನಡೆಯುತ್ತಿರುತ್ತದೆ. ಸದ್ಯ ಆಂಧ್ರಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ನಿಮಿತ್ತ ಮೇ.13 ರಂದು ಮತದಾನ ನಡೆದಿದೆ. ಈ ಸಮಯದಲ್ಲಿ ವೈ.ಎಸ್.ಆ.ರ್‍ ಕಾಂಗ್ರೇಸ್ ನ ಶಾಸಕ ಎ.ಶಿವಕುಮಾರ್‍ ಮತಗಟ್ಟೆಯಲ್ಲಿ ನಿಂತಿದ್ದ ಓರ್ವ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಬಳಿಕ ಆ ವ್ಯಕ್ತಿ ಸಹ ಶಾಸಕರ ಕೆನ್ನೆಗೆ ಬಾರಿಸಿದ್ದಾನೆ. ಈ ಸಮಯದಲ್ಲಿ ಶಿವಕುಮಾರ್‍ ಬೆಂಬಲಿಗರು ಮತದಾರನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದ ಇತರ ಮತದಾರರು ಇಬ್ಬರ ಘರ್ಷಣೆ ತಡೆಯಲು ಪ್ರಯತ್ನಿಸಿದ್ದರೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಾತ್ರ ಮತದಾರನ ರಕ್ಷಣೆ ಬರಲಿಲ್ಲ ಎನ್ನಲಾಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಓರ್ವ ರಾಜಕಾರಣಿ ಮತದಾರರ ಜತೆ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲಿ ಎಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಆಕ್ರೋಷ ಸಹ ವ್ಯಕ್ತವಾಗಿದೆ.

ysrcp mla shivakumar slapped voter 2

ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ಶಿವಕುಮಾರ್‍ ಹಾಗೂ ಮತದಾರ ಇಬ್ಬರೂ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಆಂಧ್ರ ಪ್ರದೇಶದ ಚುನಾವಣೆಯ ಮತದಾನ ಪ್ರಕ್ರಿಯೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾಗಿದೆ. ನಾಲ್ಕನೇ ಹಂತದ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭಾ ಚುನಾವಣೆಗೂ ಮತದಾನ ನಡೆಯುತ್ತಿದೆ. ಈ ಹಿಂದೆ ಸಹ ಆಂಧ್ರಪ್ರದೇಶದಲ್ಲಿ ಚುನಾವಣೆ ನಡೆದಾಗ ಕೆಲವೊಂದು ಕಡೆದ ಹಿಂಸಾಚಾರದಂತಹ ಘಟನೆಗಳು ನಡೆದಿತ್ತು. ಚುನಾವಣಾ ಮತದಾನದ ಹಿಂದಿನ ದಿನ ಸಹ ವೈ.ಎಸ್.ಆರ್‍.ಪಿ ಪಕ್ಷ ತನ್ನ ಪೋಲ್ ಏಜೆಂಟರನ್ನು ಅಪರಿಸಿದೆ ಎಂದು ಟಿಪಿಪಿ ಆರೋಪ ಮಾಡಿತ್ತು.

Leave a Comment

Your email address will not be published. Required fields are marked *

Scroll to Top