American Teacher – ಅಪ್ರಾಪ್ತ ವಿದ್ಯಾರ್ಥಿಯನ್ನು ಬಳಸಿಕೊಂಡ ಶಿಕ್ಷಕಿಯೊಬ್ಬರು ತಾಯಿಯಾಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ ಘಟನೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. 13 ವರ್ಷ ವಿದ್ಯಾರ್ಥಿಯನ್ನು ನಾಲ್ಕು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ. ಐದನೇ ತರಗತಿಯ ಬಾಲಕನೊಂದಿಗೆ 34 ವರ್ಷದ ಲಾರಾ ಕ್ಯಾರನ್ ಎಂಬ ಶಿಕ್ಷಕಿ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾಳೆ. 13 ವರ್ಷದ ವಿದ್ಯಾರ್ಥಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಅಮೇರಿಕಾದ ನ್ಯೂಜೆರ್ಸಿಯ ಮಿಡಲ್ ಟೌನ್ ಶಿಪ್ ಎಲಿಮೆಂಟರಿ ಎಂಬ ಶಾಲೆಯಲ್ಲಿ 34 ವರ್ಷದ ಲಾರಾ ಕ್ಯಾರನ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅದೇ ಶಾಲೆಯ 13 ವರ್ಷ ವಯಸ್ಸಿನ ವಿದ್ಯಾರ್ಥಿ ಹಾಗೂ ಆತನ ಸಹೋದರನ ಜೊತೆಗೆ ಆತ್ಮೀಯವಾಗಿದ್ದಳು. ಜೊತೆಗೆ ಬಾಲಕನ ಕುಟುಂಬದೊಂದಿಗೂ ಲಾರಾ ಒಳ್ಳೆಯ ಸಂಬಂಧ ಹೊಂದಿದ್ದಳು. ಕಳೆದ 2016 ರಿಂದ 2020 ರವರೆಗೂ ಶಿಕ್ಷಕಿ ಲಾರಾ ಕ್ಯಾರೆನ್ ವಿದ್ಯಾರ್ಥಿಯ ಮನೆಯಲ್ಲಿ ಜೊತೆಗೆ ವಾಸವಿದ್ದಳು. ಈ ಸಮಯದಲ್ಲಿ 13 ವರ್ಷದ ವಿದ್ಯಾರ್ಥಿಯನ್ನು ಲಾರಾ ಕ್ಯಾರನ್ ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ. ನಾಲ್ಕು ವರ್ಷಗಳ ಕಾಲ ಬಾಲಕನೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎನ್ನಲಾಗಿದೆ.
ಅಂದೊಂದು ದಿನ ರಾತ್ರಿ ಎಲ್ಲರೂ ಮಲಗಿದ್ದಾರೆ. ಬೆಳಿಗ್ಗೆ ವಿದ್ಯಾರ್ಥಿಯ ಸಹೋದರ ಎದ್ದು ನೋಡಿದಾಗ ಆತನ ತಮ್ಮ ಜೊತೆಗೆ ಇರಲಿಲ್ಲವಂತೆ. ಬಳಿಕ ಹುಡುಕಾಡಿದಾಗ ಆತ ಲಾರಾ ಕೋಣೆಯಲ್ಲಿ ಮಲಗಿದ್ದನ್ನು ನೋಡಿದ್ದಾನೆ. ನಂತರ ಬಾಲಕನನ್ನು ಲಾರಾ ಲೈಂಗಿಕವಾಗಿ ದುರ್ಬಳಕೆ ಮಾಡುವುದರ ಬಗ್ಗೆ ಅನುಮಾನ ಬಂದಿದೆ. ಈ ಬಗ್ಗೆ ವಿದ್ಯಾರ್ಥಿಯ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಶಿಕ್ಷಕಿಯನ್ನು ವಿಚಾರಣೆ ನಡೆಸಿದಾಗ ಶಿಕ್ಷಕಿ ತನಗೆ ಲೈಂಗಿಕ ಕಿರುಕುಳ ನೀಡಿದ್ದನ್ನೂ ವಿದ್ಯಾರ್ಥಿ ಸಹ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಇನ್ನೂ ಲಾರಾಗೆ 28 ವರ್ಷ ವಯಸ್ಸಾಗಿದ್ದಾಗ ಅಂದರೇ 2019 ರಲ್ಲಿ ಮಗುವಿಗೆ ಜನ್ಮ ನೀಡಿದ್ದಳಂತೆ. ವಿದ್ಯಾರ್ಥಿಗೆ ಆಗ 13 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಆದರೆ ಈ ಪ್ರಕರಣ ಕಳೆದ ಡಿಸೆಂಬರ್ 2024 ರಲ್ಲಿ ಬಹಿರಂಗಗೊಂಡಿದ್ದು, ವಿದ್ಯಾರ್ಥಿಯ ತಂದೆ ಪೋಸ್ಟ್ ಮಾಡಿದ ಪೊಟೋ ಈ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ. ವಿದ್ಯಾರ್ಥಿಯ ತಂದೆ ತನ್ನ ಮತ್ತು ಮಗನನ್ನು ಹೋಲುವ ಗಂಡು ಮಗುವಿನ ಚಿತ್ರವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಪೊಟೋಗೆ ಸಂಬಂಧಿಸಿದ ಅನುಮಾನಗಳೂ ಸಹ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದ್ದು, ಸದ್ಯ ಶಿಕ್ಷಕಿಯ ವಿರುದ್ದ ಲೈಂಗಿಕ ಕಿರುಕುಳ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.