ತಂದೆ, ಅಜ್ಜಿಯ ಸಮಾಧಿ ತೊಳೆದ ವಿಶೇಷ ವಿಡಿಯೋ ಹಂಚಿಕೊಂಡ ನಟ ರಕ್ಷಕ್ ಬುಲೆಟ್….!

ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ನಟ ರಕ್ಷಕ್ ಬುಲೆಟ್ ಆಗಾಗ ಸುದ್ದಿಯಾಗುತ್ತಿರುವ ನಟ ಎಂದೇ ಹೇಳಬಹುದು. ಸಾಕಷ್ಟು ಬಾರಿ ಅವರು ಸತ್ಯಕ್ಕೆ ದೂರವಾದ ಮಾತನ್ನು ಹೇಳುವ ಮೂಲಕ ಚರ್ಚೆಗೆ ಗುರಿಯಾಗುತ್ತಾರೆ. ಅದರ ಜೊತೆಗೆ ಬಿಲ್ಡಪ್ ಹೆಚ್ಚಾಗಿಯೇ ತೋರಿಸುತ್ತಾರೆ. ಈ ಕಾರಣದಿಂದ ಅನೇಕ ಬಾರಿ ಅವರು ಟ್ರೋಲ್ ಸಹ ಆಗಿದ್ದಾರೆ. ಇದೀಗ ರಕ್ಷಕ್ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Rakshak bullet viral video

ಕನ್ನಡದ ಹಾಸ್ಯ ನಟ ದಿವಂಗತ ಬುಲೆಟ್ ಪ್ರಕಾಶ್ ರವರ ಪುತ್ರ ರಕ್ಷಕ್ ಬುಲೆಟ್ ಕನ್ನಡದ ಬಿಗ್ ಬಾಸ್ ಸೀಸನ್ 10 ರ ಮೂಲಕ ಸುದ್ದಿಯಾದರು. ಈ ಸೀಸನ್ ಬಳಿಕ ರಕ್ಷಕ್ ಕ್ರೇಜ್ ಕೊಂಚ ಹೆಚ್ಚಾಯ್ತು ಎಂದೇ ಹೇಳಬಹುದು. ಇನ್ನೂ ರಕ್ಷಕ್ ಟ್ರೋಲ್ ಗಳ ಮೂಲಕವೇ ಹೆಚ್ಚು ಫೇಮಸ್ ಆದರು ಎಂದು ಹೇಳಬಹುದಾಗಿದೆ. ಅವರು ಕೊಡುವಂತಹ ಬಿಲ್ಡಪ್ ಕಾರಣದಿಂದ ಹೆಚ್ಚು ಟ್ರೋಲ್ ಆದರು ಎಂದೇ ಹೇಳಬಹುದು. ಆದರೆ ಇದೀಗ ರಕ್ಷಕ್ ಹಂಚಿಕೊಂಡ ವಿಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರಕ್ಷಕ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಒಂದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಕ್ಷಕ್ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: https://www.instagram.com/p/C8zSe0BPOPu/

ನಟ ರಕ್ಷಕ್ ಹಂಚಿಕೊಂಡ ವಿಡಿಯೋದಲ್ಲಿ ತಮ್ಮ ತಂದೆ ಬುಲೆಟ್ ಪ್ರಕಾಶ್ ಹಾಗೂ ಅಜ್ಜಿ ಗೌರಮ್ಮ ರವರ ಸಮಾಧಿಯನ್ನು ತೊಳೆದಿದ್ದಾರೆ. ಗೌರಮ್ಮ ಹಾಗೂ ಬುಲೆಟ್ ಪ್ರಕಾಶ್ ಸಮಾಧಿ ಅಕ್ಕಪಕ್ಕದಲ್ಲೇ ಇದೆ. ಈ ಸ್ಥಳಕ್ಕೆ ರಕ್ಷಕ್ ಭೇಟಿ ನೀಡಿದ್ದಾರೆ. ನನಗೆ ಎಷ್ಟೆ ಖುಷಿಯಾಗಲಿ ಅಥವಾ ಬೇಸರವಾಗಲಿ ನಾನು ಇಲ್ಲಿಗೆ ಬಂದು ಐದು ನಿಮಿಷ ಕುಳಿತು ನನ್ನ ಮನಸ್ಸಿನ ಮಾತನ್ನು ಹೇಳಿದಾಗ ತುಂಬಾ ಖುಷಿಯಾಗುತ್ತದೆ. ನಾವು ಕ್ಲೀನ್ ಆಗಿದ್ದಂತೆ, ಇವರು ಕ್ಲೀನ್ ಆಗಿರಬೇಕು. ಆದ್ದರಿಂದ ವಾರಕ್ಕೊಮ್ಮೆ ಬಂದು ಸಮಾಧಿ ತೊಳೆದು ಹೋಗುತ್ತೇನೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇನ್ನೂ ರಕ್ಷಕ್ ಮೂರೇ ವರ್ಷದಲ್ಲಿ ಹೇಗೆ ಬೆಳೆದ ಎಂದು ಎಲ್ಲರೂ ಕೇಳುತ್ತಾರೆ. ಆದರೆ ಅದರ ಹಿಂದೆ ಶ್ರಮವೊಂದಿದೆ. ನಮ್ಮ ಅಜ್ಜಿ, ತಂದೆಯನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದೇನೆ. ಮಗು ರೀತಿ ನೋಡಿಕೊಂಡಿದ್ದೇನೆ. ಊದಿನ ಕಡ್ಡಿ ಹಚ್ಚಿ, ಅವರಿಷ್ಟದ ತಿಂಡಿಯನ್ನು ಇಟ್ಟು, ನಮಸ್ಕಾರ ಮಾಡಿಕೊಂಡು ಹೋಗುತ್ತೇನೆ. ದೊಡ್ಡವರ ಆರ್ಶಿವಾದ ಇದ್ದರೇ ಬೆಳೆಯುತ್ತೀರಾ, ದೊಡ್ಡವರ ಆರ್ಶಿವಾದವೇ ಇದಕ್ಕೆ ಕಾರಣ ಎಂದು ರಕ್ಷಕ್ ಹೇಳಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top