Tuesday, January 13, 2026
HomeStateFans : ಮಿತಿಮೀರಿದ ಅಭಿಮಾನ, ಕೈ, ಕುತ್ತಿಗೆ, ಎದೆ, ಬೈಕ್ ಮೇಲೆ ಕೈದಿ ನಂಬರ್ 6106,...

Fans : ಮಿತಿಮೀರಿದ ಅಭಿಮಾನ, ಕೈ, ಕುತ್ತಿಗೆ, ಎದೆ, ಬೈಕ್ ಮೇಲೆ ಕೈದಿ ನಂಬರ್ 6106, ಪುಷ್ಠದ ಭಾಗದ ಮೇಲೂ ಕೈದಿ ನಂಬರ್?

Fans-ರೇಣುಕಾಸ್ವಾಮಿ ಕೊಲೆ ಆರೋಪದ ಮೇರೆಗೆ ದರ್ಶನ್ ತೂಗುದೀಪ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿದೆ. ಸದ್ಯ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಗೆ 6106 ಕೈದಿ ನಂಬರ್‍ ಕೊಟ್ಟಿದ್ದು, ಅಭಿಮಾನಿಗಳು ಈ ನಂಬರ್‍ ಅನ್ನು ವಾಹನಗಳ ಮೇಲೆ ಅಂಟಿಸಿಕೊಂಡಿದ್ದಾರೆ. ಈ ಸುದ್ದಿ ಭಾರಿ ಸದ್ದು ಮಾಡಿತ್ತು, ಇದೀಗ ದರ್ಶನ್ ಅಭಿಮಾನಿಗಳು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಬಹುದಾಗಿದೆ. ಕೈ, ಎದೆ, ಕುತ್ತಿಗೆ ಹಾಗೂ ಪುಷ್ಠದ ಮೇಲೂ ಕೈದಿ ನಂಬರ್‍ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮತ್ತೋರ್ವ ಅಭಿಮಾನಿ ಪುಟ್ಟ ಮಗುವಿಗೆ ಕೈದಿ ನಂಬರ್‍ 6106 ಎಂದು ಡ್ರೆಸ್ ತೊಡಿಸಿ ಪೊಟೋಶೂಟ್ ಮಾಡಿಸಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

Darshan fans khaidi number 6106 1

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನಟಿ ಪವಿತ್ರಾಗೌಡಗೆ ಸೋಷಿಯಲ್ ಮಿಡಿಯಾ ಮೂಲಕ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂದು ರೇಣುಕಾಸ್ವಾಮಿ ರನ್ನು ಕಿಡ್ನಾಪ್ ಮಾಡಿಸಿ ಭೀಕರವಾಗಿ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಒಟ್ಟು 17 ಮಂದಿ ಭಾಗಿಯಾಗಿದ್ದು, ಎಲ್ಲರೂ ಈಗ ಜೈಲು ಪಾಲಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಗೆ ವಿಚಾರಣಾಧೀನ ಕೈದಿಯಾಗಿ 6106 ನಂಬರ್‍ ಕೊಡಲಾಗಿದೆ. ಈ ನಂಬರ್‍ ಇದೀಗ ಟ್ರೆಂಡಿಂಗ್ ನಲ್ಲಿದೆ. ಡಿ ಬಾಸ್ ಅಭಿಮಾನಿಗಳು ಆತನ ಮೇಲಿನ ಅಭಿಮಾನದಿಂದ ತಮ್ಮ ಬೈಕ್ ಗಳಿಗೆ, ಕಾರ್‍ ಗಳಿಗೆ ದರ್ಶನ್ ಕೈದಿ ನಂಬರ್‍ ಹಾಕಿಕೊಂಡಿದ್ದರು. ಈ ಸಂಬಂಧ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿತ್ತು.

ಇನ್ನೂ ದರ್ಶನ್ ಅಭಿಮಾನಿಗಳು ಬೈಕ್ ಗಳು, ಬಸ್ ಗಳು ಆಟೋಗಳು, ಗೂಡ್ಸ್ ವಾಹನಗಳು ಸೇರಿದಂತೆ ಹಲವು ಕಡೆ ಡಿ ಬಾಸ್ ಸ್ಟಿಕರ್‍ ಗಳನ್ನು ತೆಗೆದು ಕೈದಿ ನಂಬರ್‍ 6106 ಹಾಗೂ ಕೈ ಕೋಳ ಸ್ಟಿಕರ್‍ ಅಂಟಿಸಿಕೊಂಡಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟ ಅಭಿಮಾನಿಗಳು ಕೈದಿ ನಂಬರ್‍ 6106 ನಂಬರ್‍ ಅನ್ನು ಕೈ, ಎದೆ, ಭುಜ, ಕುತ್ತಿಗೆ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಓರ್ವ ಯುವತಿ ಮತ್ತೊಂದು ಹೆಜ್ಜೆ ಮುಂದಿಟ್ಟು ತನ್ನ ಪುಷ್ಠ ಭಾಗದ ಮೇಲೆ ಖೈದಿ ನಂ 6106 ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ. ಇನ್ನೂ ಮಹಿಳೆ ತನ್ನ ಪುಷ್ಠ ದ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ನಿಜವೇ ಅಥವಾ ಎಡಿಟ್ ಮಾಡಿದ್ದಾರೆಯೇ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ.

Darshan fans khaidi number 6106 0

ಇನ್ನೂ ಡಿ ಬಾಸ್ ಅಭಿಮಾನಿಯೋಬ್ಬರು ತನ್ನ ಪುಟ್ಟ ಕಂದಮ್ಮನಿಗೆ ಪೊಟೋಶೂಟ್ ಮಾಡಿಸಿದ್ದಾನೆ. ಈ ಪೊಟೋಶೂಟ್ ನಲ್ಲಿ ಜೈಲು ಕೈದಿಗಳಿಗೆ ನೀಡುವಂತಹ ಬಿಳಿ ಬಟ್ಟೆಯನ್ನು ಹಾಕಿ, ಅದರ ಮೇಲೆ 6106 ಎಂದು ಹಾಕಿಸಿದ್ದಾರೆ. ಈ ಪೊಟೋ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮಗುವಿಗೆ ಕೈದಿ ನಂಬರ್‍ ಕೊಟ್ಟು ಪೊಟೋಶೂಟ್ಸ್ ಮಾಡಿಸಿದ್ದಕ್ಕೆ ನೆಟ್ಟಿಗರು ಆಕ್ರೋಷ ಹೊರಹಾಕಿದ್ದಾರೆ. ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ತಮ್ಮ ಆಕ್ರೋಷ ಹೊರಹಾಕುತ್ತಿದ್ದಾರೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular