Rishab Shetty – ಕಾಂತಾರ ಸಿನೆಮಾದ ಬಳಿಕ ಕನ್ನಡದ ನಟ ರಿಷಭ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕಾಂತಾರ ಸಿನೆಮಾದ ಬಳಿಕ ಅವರಿಗೆ ಬಿಗ್ ಬಜೆಟ್ ಸಿನೆಮಾಗಳ ಆಫರ್ ಗಳೂ ಸಹ ಹರಿದು ಬರುತ್ತಿವೆ. ಈಗಾಗಲೇ ತೆಲುಗಿನ ಜೈ ಹನುಮಾನ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ರಿಷಭ್ ಹನುಮಾನ್ ಪಾತ್ರ ಪೋಷಣೆ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಬಿಗ್ ಬಜೆಟ್ ಸಿನೆಮಾದಲ್ಲಿ ನಟಿಸಲಿದ್ದಾರೆ. ಐತಿಹಾಸಿಕ ಕಥೆಯನ್ನು ಆಧರಿಸಿ ಸೆಟ್ಟೇರಲಿರುವ ಛತ್ರಪತಿ ಶಿವಾಜಿ ಮಹರಾಜ್ (Chhatrapati Shivaji Maharaj) ಎಂಬ ಸಿನೆಮಾದಲ್ಲಿ (Rishab Shetty) ಛತ್ರಪತಿ ಶಿವಾಜಿ ಮಹಾರಾಜ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡದ ಸ್ಟಾರ್ ನಟ ರಿಷಭ್ ಶೆಟ್ಟಿ ಕಾಂತಾರ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇದೀಗ ಅವರು ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನೆಮಾಗಳಲ್ಲೂ ನಟಿಸುತ್ತಿದ್ದಾರೆ. ಡೈರೆಕ್ಟರ್ ಸಂದೀಪ್ ಸಿಂಗ್ ಅವರ ಹಿಸ್ಟಾರಿಕಲ್ ಡ್ರಾಮಾ ಸಿನಿಮಾದಲ್ಲಿ ರಿಷಬ್ ನಟಿಸಲಿದ್ದಾರೆ. ಸದ್ಯ ಶಿವಾಜಿ ಮಹಾರಾಜ್ ಲುಕ್‌ನಲ್ಲಿ ಖಡ್ಗ ಹಿಡಿದು ರಿಷಬ್ ಕಾಣಿಸಿಕೊಂಡಿರುವ ಲುಕ್ ರಿವೀಲ್ ಆಗಿದೆ. ಈ ಪೋಸ್ಟರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅದಷ್ಟೇ ಅಲ್ಲ, ಛತ್ರಪತಿ ಶಿವಾಜಿ ಮಹಾರಾಜ್ ಕುರಿತಾದ ಈ ಬಯೋಪಿಕ್ ಸಿನಿಮಾವು 2027ರ ಜನವರಿ 21ರಂದು ಬಿಡುಗಡೆಯಾಗುವುದಾಗಿ ಕೂಡ ಚಿತ್ರತಂಡ ಅನೌನ್ಸ್ ಮಾಡಿದೆ. ಸದ್ಯ ಈ ಸಿನೆಮಾದ ಪೋಸ್ಟರ್ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಪೋಸ್ಟರ್ ಇಲ್ಲಿದೆ ನೋಡಿ: Click Here
ಈ ಸಿನೆಮಾದ ಬಗ್ಗೆ ರಿಷಭ್ ಶೆಟ್ಟಿ ಮಾತನಾಡಿದ್ದು, ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್ ಸಿನೆಮಾದ ಬಗ್ಗೆ ನಿರ್ದೇಶಕ ಸಂದೀಪ್ ಸಿಂಗ್ ಹೇಳಿದ ಕೂಡಲೇ ಒಪ್ಪಿಕೊಂಡೆ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರ ತುಂಬಾ ಅದ್ಬುತವಾದುದು ಆದ್ದರಿಂದ ಕಥೆಯನ್ನು ಕೇಳುತ್ತಿದ್ದಂತೆ ಯೋಚನೆ ಮಾಡದೆ ಒಪ್ಪಿಕೊಂಡೆ. ಶಿವಾಜಿಯವರ ಪಾತ್ರದಲ್ಲಿ ನಟಿಸುವುದು ತುಂಬಾನೆ ಗೌರವ. ಅದನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಶಿವಾಜಿ ಮಹರಾಜರು ರಾಷ್ಟ್ರ ಮಟ್ಟದ ಹಿರೋ. ಶತಮಾನಗಳ ಕಾಲ ಅವರ ಪ್ರಭಾವ ತುಂಭಾನೆ ಇತ್ತು. ಅಂತಹ ನಾಯಕ ಪಾತ್ರಕ್ಕೆ ಜೀವ ತುಂಬುತ್ತಿರುವುದು ನನಗೆ ದೊರೆತ ದೊಡ್ಡ ಅವಕಾಶ ಹಾಗೂ ಗೌರವ ಎಂದು ಹೇಳಿದ್ದಾರೆ.