King Cobra: ವಾಹ್, ನಿನ್ನ ಧೈರ್ಯಕ್ಕೆ ಮೆಚ್ಚಲೇ ಬೇಕು, ನಾಗಿನಿ ಡ್ಯಾನ್ಸ್ ಮಾಡುತ್ತಾ ಕಿಂಗ್ ಕೋಬ್ರಾಗೆ ಮುತ್ತಿಟ್ಟ ಯುವತಿ….!

King Cobra – ಹಾವುಗಳಲ್ಲಿ ಕಿಂಗ್ ಕೋಬ್ರಾ ಅಪಾಯಕಾರಿ ವಿಷಪೂರಿತ ಹಾವು ಎಂದು ಹೇಳಬಹುದು. ಈ ಹಾವನ್ನು ಕಂಡರೇ ದೊಡ್ಡ ದೊಡ್ಡ ಪ್ರಾಣಿಗಳೇ ಭಯ ಪಡುತ್ತವೆ. ಆದರೆ ಇಲ್ಲೊಬ್ಬಳು ಯುವತಿ ಈ ಕಿಂಗ್ ಕೋಬ್ರಾಗೆ ಮುತ್ತಿಟ್ಟಿದ್ದಾಳೆ. ಕಿಂಗ್ ಕೋಬ್ರಾ ಬಳಿ ಮಲಗಿ ವಿಚಿತ್ರವಾಗಿ ನೃತ್ಯ ಮಾಡುತ್ತಾ, ಯಾವುದೇ ಭಯವಿಲ್ಲದೇ ಹೆಡೆ ಎತ್ತಿದ ನಾಗರ ಹಾವಿಗೆ (King Cobra) ನಾಲಿಗೆಯಿಂದ ಮುತ್ತಿಡುತ್ತಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರು ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ.

women kisses king cobra

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಹಾವುಗಳಿಗೆ ಸಂಬಂಧಿಸಿದಂತಹ ವಿಡಿಯೋಗಳು ಕ್ಷಣದಲ್ಲೇ ವೈರಲ್ ಆಗುತ್ತಿರುತ್ತವೆ. ಹಾವುಗಳಲ್ಲಿ ಕಪ್ಪು ನಾಗರ ತುಂಬಾನೆ ಡೇಂಜರ್‍ ಅಂತಾ ಹೇಳಬಹುದು. ಈ ಹಾವುಗಳು ಸಾಮಾನ್ಯವಾಗಿ ತುಂಬಾ ಉದ್ದವಾಗಿರುತ್ತದೆ. ಇದರ ಹೆಡೆ ಸಹ ತುಂಬಾನೆ ದೊಡ್ಡದಾಗಿರುತ್ತದೆ. ಈ ಹಾವಿನ ವಿಷ ತುಂಬಾನೆ ಅಪಾಯಕಾರಿ. ಹಾವು ಕಚ್ಚಿದ 45 ನಿಮಿಷಗಳಲ್ಲೇ ಕಚ್ಚಿದ ವ್ಯಕ್ತಿ ಮೃತಪಡುತ್ತಾನೆ. ಒಂದು ಬಾರಿಗೆ ಈ ಹಾವು 600 ಮಿಲಿ ಗ್ರಾಂ ವಿಷವನ್ನು ಹೊರಹಾಕುತ್ತದೆ. ಅಂತಹ ಹಾವಿನೊಂದಿಗೆ ಇಲ್ಲೊಬ್ಬಳು ಮಹಿಳೆ ಆಟವಾಡಿದ್ದಾಳೆ. ಓರ್ವ ಯುವತಿ ವಿಚಿತ್ರವಾಗಿ ನೃತ್ಯ ಮಾಡುವುದರ ಜೊತೆಗೆ ನಾಗರಹಾವಿನ ಹೆಡೆಗೆ ನಾಲಿಗೆಯಿಂದ ಮುತ್ತಿಡುತ್ತಾಳೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಸದ್ಯ ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಓರ್ವ ಯುವತಿ ನಾಗರಹಾವಿನ ಹೆಡೆಗೆ ನಾಲಿಗೆಯಿಂದ ಮುತ್ತಿಡುತ್ತಾಳೆ. ಕೂಡಲೇ ಆ ಹಾವು ಆಕೆಯನ್ನು ನೋಡಲು ಶುರು ಮಾಡುತ್ತದೆ. ತನ್ನ ನಾಲಿಗೆಯನ್ನು ಆಡಿಸುತ್ತಾ ಆ ನಾಗರಹಾವು ತನ್ನ ಕಡೆ ಬರುವಂತೆ ಮಾಡುತ್ತಿರುತ್ತಾಳೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಅನೇಕರು ಈ ವಿಡಿಯೋ ರಾಜಸ್ಥಾನದಲ್ಲಿ ನಡೆದಿದೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋವನ್ನು Lucky_udaan4090 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ವೀಕ್ಷಣೆಯನ್ನು ಕಂಡಿದೆ. ಈ ವಿಡಿಯೋ ನೋಡಿದ ಅನೇಕರು ಶಾಕ್ ಆಗುವುದರ ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top