Wednesday, July 9, 2025
HomeSpecialViral News: ಬ್ರೇಕಪ್ ಆಗಿದೆ, ಆ ನೋವಿನಿಂದ ಹೊರ ಬರಲು ಒಂದು ವಾರ ರಜೆ ಕೊಡಿ...

Viral News: ಬ್ರೇಕಪ್ ಆಗಿದೆ, ಆ ನೋವಿನಿಂದ ಹೊರ ಬರಲು ಒಂದು ವಾರ ರಜೆ ಕೊಡಿ ಎಂದು ಕೇಳಿದ ಉದ್ಯೋಗಿ…!

ಇಂದಿನ ಆಧುನಿಕ ಯುಗದಲ್ಲಿ ಇಬ್ಬರ ನಡುವೆ ಪ್ರೀತಿ ಎಷ್ಟು ಬೇಗ ಹುಟ್ಟುತ್ತೋ ಅಷ್ಟೇ ಬೇಗ ಬ್ರೇಕಪ್ ಸಹ ಆಗುತ್ತಿರುತ್ತದೆ. ಅದರಲ್ಲೂ ಕೆಲವರಂತೂ ಬ್ರೇಕಪ್ ನಿಂದ ಡಿಪ್ರೆಷನ್ ಗೆ ಹೋಗಿಬಿಡುತ್ತಾರೆ. (Viral News) ಆ ಬ್ರೇಕಪ್ ನಿಂದ ಹೊರಬರಲು ತುಂಬಾನೆ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಈ ಖಿನ್ನೆತೆಯಿಂದ ಕೆಲವು ಆತ್ಮಹತ್ಯೆಗೂ ಶರಣಾಗಿದ್ದಾರೆ. ಇದೀಗ ಓರ್ವ ಉದ್ಯೋಗಿ ಬ್ರೇಕಪ್ ನೋವಿನಿಂದ ಹೊರಬರಲು ಒಂದು ವಾರದ ರಜೆಯನ್ನು ತೆಗೆದುಕೊಂಡಿದ್ದಾನೆ. Gen Z ಎಂಬ ಕಂಪನಿಯ ಉದ್ಯೋಗಿ ಈ ರಜೆಯನ್ನು ತೆಗೆದುಕೊಂಡಿದ್ದು, (Viral News) ಈ ಸಂಬಂಧ ಪೋಸ್ಟ್ ಒಂದು ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.

viral leave by employee 1

ಸೋಷಿಯಲ್ ಮಿಡಿಯಾದಲ್ಲಿ ಈ ರೀತಿಯ ಕೆಲವೊಂದು ಪೋಸ್ಟ್ ಗಳು ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಕಂಪೆನಿ ಮ್ಯಾನೇಜರ್‌ Gen Z ಉದ್ಯೋಗಿಯ ಬ್ರೇಕಪ್‌ ಲೀವ್‌ ಸ್ಟೋರಿಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೃಷ್ಣ ಮೋಹನ್ ಎಂಬುವವರು ತಮ್ಮ @KiMoJiRa ಎಂಬ ಹೆಸರಿನ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ನನ್ನ ತಂಡದ Gen Z ಸದಸ್ಯರೊಬ್ಬರು ಇದ್ದಕ್ಕಿಂದ್ದಂತೆ ಒಂದು ವಾರದ ಕಾಲ ರಜೆ ಕೇಳಿದರು. ಇದು ಮೀಟಿಂಗ್ ಹಾಗೂ ಪ್ಲಾನಿಂಗ್ ಗಳು ಮಾಡಬೇಕಾದ ನಿರ್ಣಾಯಕ ಸಮಯವಾಗಿದ್ದರಿಂದ ರಜೆ ತೆಗೆದುಕೊಳ್ಳಬೇಡಿ ಅಂತಾ ಹೇಳಿದ್ದೆ. ಆದರೆ ಹಠ ಹಿಡಿದು ರಜೆ ಕೇಳಿದ್ದ. ಬ್ರೇಕಪ್ ಆದ ಕಾರಣಕ್ಕೆ ಬ್ರೇಕಪ್ ನೋವನ್ನು ಮರೆಯಲು ಬೆಟ್ಟ ಗುಡ್ಡ ಇರುವ ಸ್ಥಳಕ್ಕೆ ಪ್ರವಾಸ ಹೋಗಬೇಕೆಂದು ರಜೆ ತೆಗೆದುಕೊಂಡಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ: Click Here https://x.com/KiMoJiRa/status/1854042918937321477

ಇನ್ನೂ ಈ ಪೋಸ್ಟ್ ಅನ್ನು ನವೆಂಬರ್‍ 6 ರಂದು ಹಂಚಿಕೊಂಡಿದ್ದು, ಸಾವಿರಗಟ್ಟಲೇ ವೀಕ್ಷಣೆ ಕಂಡಿದೆ, ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಈ ಪೈಕಿ ಓರ್ವ ನಿಮ್ಮ ಪ್ರಕಾರ ಆತ ತನ್ನ ಮಾನಸಿಕ ನೆಮ್ಮದಿಗಾಗಿ ರಜೆ ಕೇಳಿದ್ದು ತಪ್ಪೆ ಎಂದು ಕಾಮೆಂಟ್ ಮಾಡಿದ್ದರೇ, ಮತ್ತೋರ್ವ ಮಾನಸಿಕ ಆರೋಗ್ಯವನ್ನು ಸುಧಾರಿಸಲು ರಜೆ ಕೇಳಿದ್ದಾನೆ ಎಂತಲೂ, ಮತ್ತೋರ್ವ ಬ್ರೇಕಪ್ ಕಾರಣದಿಂದ ರಜೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೀಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular