Moodbidri Inspector Sandesh ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಸಂತ್ರಸ್ತೆ ಸಹೋದರಿಯಿಂದಲೇ ಗಂಭೀರ ಆರೋಪ, ಕೊನೆಗೂ ಸಸ್ಪೆಂಡ್ ಆದ ಇನ್ಸ್‌ಪೆಕ್ಟರ್ ಸಂದೇಶ್

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ (Moodbidri Inspector Sandesh) ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳದ ಆರೋಪಗಳು ಈಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿವೆ. ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಪ್ರಕರಣದಲ್ಲಿ ಈಗ ಸಂತ್ರಸ್ತೆಯ ಸ್ವಂತ ಸಹೋದರಿಯೇ ಇನ್ಸ್‌ಪೆಕ್ಟರ್ ಪರವಾಗಿ ಬ್ಯಾಟ್ ಬೀಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದು ಕೇವಲ ಲೈಂಗಿಕ ಕಿರುಕುಳದ ಪ್ರಕರಣವೋ ಅಥವಾ ಕೌಟುಂಬಿಕ ದ್ವೇಷದ ಸಂಚೋ ಎನ್ನುವ ಅನುಮಾನ ಈಗ ದಟ್ಟವಾಗಿದೆ.

Moodbidri Police Inspector Sandesh sexual harassment allegation controversy Karnataka

Moodbidri Inspector Sandesh – ಅಕ್ಕನ ವಿರುದ್ಧವೇ ತಿರುಗಿಬಿದ್ದ ತಂಗಿ

ಈ ಇಡೀ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದೇ ಸಂತ್ರಸ್ತೆಯ ಸಹೋದರಿ ನೀಡಿದ ಹೇಳಿಕೆಯಿಂದ. ಇನ್ಸ್‌ಪೆಕ್ಟರ್ ಸಂದೇಶ್ ಅವರು ಸಂಪೂರ್ಣ ನಿರಪರಾಧಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ಸಹೋದರಿ ಕೌಟುಂಬಿಕ ಕಲಹದ ದ್ವೇಷದಿಂದಾಗಿ ಇನ್ಸ್‌ಪೆಕ್ಟರ್ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಸಂದೇಶ್ ಅವರು ನ್ಯಾಯದ ಪರವಾಗಿದ್ದಾರೆ ಮತ್ತು ತಮ್ಮ ತಂಗಿ ಅವರ ಕೆಲಸ ತೆಗೆಸಬೇಕೆಂದು ಶಪಥ ಮಾಡಿ ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಠಾಣೆಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಸಕ ಉಮಾನಾಥ್ ಕೋಟ್ಯಾನ್ ಅವರ ಖಡಕ್ ಪತ್ರ ಮತ್ತು ಇಲಾಖೆಯ ನಡೆ

ಇನ್ನೊಂದೆಡೆ ಈ ಪ್ರಕರಣ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ. ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದು, ಇನ್ಸ್‌ಪೆಕ್ಟರ್ ಸಂದೇಶ್ ಅವರನ್ನು ತಕ್ಷಣವೇ ಅಮಾನತ್ತಿನಲ್ಲಿಟ್ಟು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇಂತಹ ಘಟನೆಗಳಿಂದ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ಬರುತ್ತದೆ (Moodbidri Inspector Sandesh) ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ, ತನಿಖಾ ಜವಾಬ್ದಾರಿಯನ್ನು ಎಸಿಪಿ ಶ್ರೀಕಾಂತ್ ಅವರಿಗೆ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಸಂತ್ರಸ್ತ ಮಹಿಳೆಯು ಮೊದಲೇ ಎಸಿಪಿ ಶ್ರೀಕಾಂತ್ ಅವರು ಇನ್ಸ್‌ಪೆಕ್ಟರ್ ಸಂದೇಶ್ ಅವರ ಪರವಾಗಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದ್ದರು.

ಇನ್ಸ್‌ಪೆಕ್ಟರ್ ಸಂದೇಶ್ ನೀಡಿದ ಸ್ಪಷ್ಟನೆ ಮತ್ತು ಕಾಂಪೌಂಡ್ ಹಾರಿದ ರಹಸ್ಯ

ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಇನ್ಸ್‌ಪೆಕ್ಟರ್ ಸಂದೇಶ್ ಅವರು ನಿರಾಕರಿಸಿದ್ದಾರೆ. ಕಳೆದ ವರ್ಷ ತಾವು ಈ ಸ್ಟೇಷನ್‌ಗೆ ಬಂದಾಗಿನಿಂದಲೂ ಕೆಲವು ಕೌಟುಂಬಿಕ ಜಗಳಗಳ ವಿಚಾರದಲ್ಲಿ (Moodbidri Inspector Sandesh) ಕಠಿಣ ಕ್ರಮ ಕೈಗೊಂಡಿದ್ದೇ ಈ ದೂರುಗಳಿಗೆ ಕಾರಣ ಎಂದು ಅವರು ಹೇಳಿದ್ದಾರೆ. ಕಿಡ್ನಿ ಟ್ರಾನ್ಸ್‌ಪ್ಲಾಂಟ್ ವಿಚಾರದಲ್ಲಿ ನಡೆದ ವಂಚನೆ ಪ್ರಕರಣದ ತನಿಖೆ ನಡೆಸಿದ್ದರಿಂದ ತಮ್ಮ ಮೇಲೆ ದ್ವೇಷ ಸಾಧಿಸಲಾಗುತ್ತಿದೆ ಎಂಬುದು ಅವರ ವಾದ.

Moodbidri Police Inspector Sandesh sexual harassment allegation controversy Karnataka

ಇನ್ನು ವೈರಲ್ ಆಗಿರುವ ಕಾಂಪೌಂಡ್ ಹಾರುವ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ತಮ್ಮ ಸಂಬಂಧಿಕರ ಮನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲಿ ದಂಪತಿಗಳ ನಡುವೆ ಜಗಳವಾಗಿದ್ದಾಗ ಆತಂಕದಿಂದ ತಾವು ಕಾಂಪೌಂಡ್ ಹಾರಿ ಒಳಹೋಗಿದ್ದಾಗಿ ಮತ್ತು ಅಲ್ಲಿ ಡ್ಯಾನ್ಸ್ ಮಾಡಿದ್ದು ಕೇವಲ ಆತ್ಮೀಯತೆಯ ಸಂಕೇತ ಎಂದು ಸಮರ್ಥಿಸಿಕೊಂಡಿದ್ದಾರೆ. Read this also : ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ: 8 ವರ್ಷ ತಾಯಿಯ ಜೊತೆ ಸಂಬಂಧ, ಈಗ ಮಗಳ ಮೇಲೂ ಕಣ್ಣು?

ಕೊನೆಗೂ ಸಸ್ಪೆಂಡ್ ಆದ ಇನ್ಸ್‌ಪೆಕ್ಟರ್ ಸಂದೇಶ್

ಮಹಿಳೆಯರನ್ನು ಅಸಭ್ಯವಾಗಿ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ (Moodbidri Inspector Sandesh) ವಿರುದ್ಧ ಈಗ ರಾಜ್ಯ ಮಹಿಳಾ ಆಯೋಗವು ಸಿಡಿದೆದ್ದಿದ್ದು, ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಅಲ್ಲದೇ ಈ ಪ್ರಕರಣ ಸಂಬಂಧ ವರದಿ ನೀಡುವಂತೆ ಮಂಗಳೂರ ನಗರ ಪೊಲೀಸ್ ಕಮಿಷನರ್​ಗೆ ಪತ್ರ ಬರೆದಿದೆ. ಇದರ ಬೆನ್ನಲ್ಲೇ ಇನ್ಸ್​ಪೆಕ್ಟರ್​​ ಸಂದೇಶನನ್ನು ಅಮಾನತು ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Eldon – Artist Portfolio WordPress Theme Buny – Kids Store and Baby Shop WordPress Theme Leadinjection – Landing Page Theme Retro Portfolio – One Page Vintage Template CL Team – Team Showcase WordPress Plugin xLander – Premium Landing Page Template Kylo – Portfolio WordPress Theme Solarva – Ecology & Solar Energy Theme Sellegance – Responsive and Clean OpenCart Theme AlbumsList v3.2 | Gallery Module for Gmedia plugin