Viral Video: ವಿಚ್ಚೇದನ ಪಡೆದ ಖುಷಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಮಹಿಳೆ, ವೈರಲ್ ಆದ ವಿಡಿಯೋ….!

ಇತ್ತೀಚಿಗೆ ಮದುವೆಗಳು ಎಷ್ಟು ಬೇಗ ನಡೆಯುತ್ತೆವೆಯೋ ಅಷ್ಟೇ ಬೇಗ ವಿಚ್ಚೇದನಗಳು ಸಹ ನಡೆಯುತ್ತಿರುತ್ತವೆ. ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದಲೂ ವಿಚ್ಚೇದನ ಪಡೆಯುತ್ತಿರುತ್ತಾರೆ. ವಿಚ್ಚೇದನ ಪಡೆದುಕೊಂಡ ಬಳಿಕ ಅನೇಕರು ನೋವು, ಒಂಟಿತನ, ಹತಾಶೆಯಿಂದ ಬಳಲುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ವಿಚ್ಚೇದನ ಪಡೆದುಕೊಂಡಿದ್ದು, ಆ ಖುಷಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video) ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ನಡೆದಿರೋದು ಪಾಕಿಸ್ತಾನದಲ್ಲಿ ಎಂದು ಹೇಳಲಾಗಿದೆ.

Divorce Celebrations 0

ಕೆಲವು ತಿಂಗಳುಗಳ ಹಿಂದೆಯಷ್ಟೆ ಪಾಕಿಸ್ತಾನಿ ಮಹಿಳೆಯೊಬ್ಬರು ವಿಚ್ಚೇದನ ಪಡೆದುಕೊಂಡು ಭರ್ಜರಿಯಾಗಿ ಪಾರ್ಟಿ ಮಾಡಿದ ಸುದ್ದಿಯೊಂದು ಭಾರಿ ಸದ್ದು ಮಾಡಿತ್ತು. ಇದೀಗ ಅಂತಹುದೇ ಘಟನೆಯೊಂದು ಭರ್ಜರಿಯಾಗಿ ಸುದ್ದಿಯಾಗುತ್ತಿದೆ. ಪಾಕಿಸ್ತಾನದ ಮಹಿಳೆಯೊಬ್ಬರು ಹ್ಯಾಪಿ ಡಿವೋರ್ಸ್ ಎಂದು ಬರೆದಿರುವಂತಹ ಕೇಕ್ ಕಟ್ ಮಾಡಿ, ತಮ್ಮ ಮದುವೆಯ ಪೊಟೋಗಳನ್ನು ಹರಿದು ಹಾಕಿ ಜೊತೆಗೆ ನಿಕಾ ದುಪಟ್ಟಾವನ್ನು ಹರಿದು ಹಾಕಿ ವಿಚ್ಚೇದನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ಈ ವಿಡಿಯೋವನ್ನು ನ.4 ರಂದು ಹಂಚಿಕೊಂಡಿದ್ದು, ವಿಡಿಯೋ ಸಾವಿರಗಟ್ಟಲೇ ವೀಕ್ಷಣೆ ಕಂಡಿದೆ ಜೊತೆಗೆ ಸಾಲು ಸಾಲು ಕಾಮೆಂಟ್ ಗಳು ಹರಿದುಬರುತ್ತಿವೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಗಂಡನಿಂದ ಡಿವೋರ್ಸ್ ಸಿಕ್ಕ ಸಂತೋಷದಲ್ಲಿ ಹ್ಯಾಪಿ ಡಿವೋರ್ಸ್ ಎಂದು ಬರೆದಿರುವಂತಹ ಕೇಕ್ ಕಟ್ ಮಾಡಿ, ನಂತರ ಮದುವೆಯ ಪೊಟೋಗಳನ್ನು, ನಿಕಾ ದುಪಟ್ಟಾವನ್ನು ಹರಿದು ಹಾಕಿ ಸಂಭ್ರಮಿಸುವ ದೃಶ್ಯಗಳನ್ನು ಕಾಣಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಈ ಪೈಕಿ ಒಬ್ಬರು ಪುರುಷರೂ ಸಹ ಆದಷ್ಟು ಶೀಘ್ರವಾಗಿ ಈ ರೀತಿಯ ಸಂಭ್ರಮಾಚರಣೆಗಳನ್ನು ಮಾಡಬೇಕು ಎಂತಲೂ, ಮತ್ತೋರ್ವ ವಿಚ್ಚೇದನ ಪಡೆಯುವುದು ಸಹಜ ಆದರೇ ಈ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿ ವಿಡಿಯೋ ಹಂಚಿಕೊಳ್ಳುವ ಅವಶ್ಯಕತೆಯಿತ್ತಾ ಎಂದು ಕಾಮೆಂಟ್ ಗಳ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top