Thursday, November 21, 2024

Bank Jobs: ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ನಲ್ಲಿವೆ 85 ಹುದ್ದೆಗಳು, ಅರ್ಜಿ ಸಲ್ಲಿಸಲು ನ.27 ಕೊನೆ….!

ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇದೀಗ ಹೊಸದಾಗಿ ಅಧಿಸೂಚನೆ (Bank Jobs) ಹೊರಡಿಸಿದ್ದು, ಸಹಾಯಕ ವ್ಯವಸ್ಥಾಪಕರು, ಪ್ರಥಮ ದರ್ಜೆ ಸಹಾಯಕರು/ಮೇಲ್ವಿಚಾರಕರು, ಕಿರಿಯ ಸಹಾಯಕರು, ಸಹಾಯಕರು/ಅಟೆಂಡರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು 85 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಧಿಸೂಚನೆಯಲ್ಲಿ ಹೊರಡಿಸಿರುವ ಹುದ್ದೆಗಳ ಸಂಖ್ಯೆ, ವೇತನ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಈ ಮುಂದೆ ತಿಳಿಸಲಾಗಿದೆ.

ಹುದ್ದೆಗಳು ಹಾಗೂ ವೇತನದ ವಿವರ:

  • ಸಹಾಯಕ ವ್ಯವಸ್ಥಾಪಕರು – 4 ಹುದ್ದೆ, ವೇತನ – Rs.36000-67550
  • ಪ್ರಥಮ ದರ್ಜೆ ಸಹಾಯಕರು/ಮೇಲ್ವಿಚಾರಕರು – 18 ಹುದ್ದೆ, ವೇತನ27650-52650
  • ಕಿರಿಯ ಸಹಾಯಕರು – 53 ಹುದ್ದೆ, ವೇತನ21400-42000
  • ಸಹಾಯಕರು/ಅಟೆಂಡರ್ 10 ಹುದ್ದೆ, ವೇತನ18600-32600

DCC Bank Recruitment 85 posts 1

ಹುದ್ದೆವಾರು ವಿದ್ಯಾರ್ಹತೆ ವಿವರ:

  • ಸಹಾಯಕ ವ್ಯವಸ್ಥಾಪಕರು: ಸ್ನಾತಕೋತ್ತರ ಪದವಿ ಪಾಸಾಗಿರಬೇಕು. ಇಂಗ್ಲಿಷ್‌, ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು, ಕಂಪ್ಯೂಟರ್ ಜ್ಞಾನ ಇರಬೇಕು.
  • ಪ್ರಥಮ ದರ್ಜೆ ಸಹಾಯಕರು/ಮೇಲ್ವಿಚಾರಕರು : ಪದವಿ ಪಾಸಾಗಿರಬೇಕು. ಇಂಗ್ಲಿಷ್‌, ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು, ಕಂಪ್ಯೂಟರ್ ಜ್ಞಾನ ಇರಬೇಕು.
  • ಕಿರಿಯ ಸಹಾಯಕರು : ಪದವಿ ಪಾಸಾಗಿರಬೇಕು. ಇಂಗ್ಲಿಷ್‌, ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು, ಕಂಪ್ಯೂಟರ್ ಜ್ಞಾನ ಇರಬೇಕು.
  • ಸಹಾಯಕರು/ಅಟೆಂಡರ್ / ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಕನ್ನಡ ಓದಲು, ಬರೆಯಲು, ಮಾತನಾಡಲು ಗೊತ್ತಿರಬೇಕು, ಕಂಪ್ಯೂಟರ್ ಜ್ಞಾನ ಇರಬೇಕು.

ವಯೋಮಿತಿ: ಅಭ್ಯರ್ಥಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗೆ 3 ವರ್ಷ ಮತ್ತು ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಿರಬೇಕು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಪ.ಜಾ, ಪ.ಪಂ, ಪ್ರವರ್ಗ 1, ವಿಕಲಚೇತನ ಮತ್ತು ನಿವೃತ್ತ ಸೇವಾ ಅಭ್ಯರ್ಥಿಗೆ 750 ರೂ. ಅರ್ಜಿ ಶುಲ್ಕ ಹಾಗೂ ಇತರೆ ಅಭ್ಯರ್ಥಿಗಳಿಗೆ 1500 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.  ಈ ಹುದ್ದೆಗಳ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ chikkamagalurudccbank.com ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಪ್ರಮುಖ ಲಿಂಕ್ ಗಳು:

ನೋಟಿಫಿಕೇಶನ್ – Click Here

ಅರ್ಜಿ ಲಿಂಕ್ / ವೆಬ್ಸೈಟ್ – Click Here

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!