HomeNationalDiwali 2024: ದೀಪಾವಳಿಯಂದು ತೋಬಾ ತೋಬಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಅಮೇರಿಕನ್ ಅಂಬಾಸಿಡರ್…..!

Diwali 2024: ದೀಪಾವಳಿಯಂದು ತೋಬಾ ತೋಬಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಅಮೇರಿಕನ್ ಅಂಬಾಸಿಡರ್…..!

Diwali 2024 – ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ನಾನಾ ಕಡೆ ದೀಪಾವಳಿ ಹಬ್ಬವನ್ನು ಸಂಭ್ರಮ ಹಾಗೂ ಸಡಗರಿಂದ ಆಚರಿಸುತ್ತಾರೆ.  ಕಿರಿಯರು ಹಿರಿಯರು ಎಲ್ಲರೂ ಸೇರಿ ಈ ಬೆಳಕಿನ ಹಬ್ಬವನ್ನು ಅದ್ದೂರಿಯಾಗಿ (Diwali 2024)ಆಚರಿಸುತ್ತಾರೆ. ಬೀದಿ ಬೀದಿಯಲ್ಲೂ ಪಟಾಕಿ ಸದ್ದು ಕೇಳಿಸುತ್ತಿರುತ್ತದೆ. ಈ ದೀಪಾವಳಿ ಹಬ್ಬಕ್ಕೆ (Diwali 2024) ಸಂಬಂಧಿಸಿದಂತೆ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡು‌ತ್ತಿರುತ್ತದೆ. ಇದೀಗ ಅಂತಹುದೇ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. ಅಮೇರಿಕಾದ ರಾಯಭಾರಿ ಎರಿಕೆ ಗಾರ್ಸೆಟ್ಟಿ (Eric Garcetti) ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

US envoy Eric Garcetti dances to Tauba Tauba 1

ದೆಹಲಿಯ ಎಂಬಸಿಯಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಅಮೇರಿಕಾದ ರಾಯಭಾರಿ ಎರಿಕ್ ಗಾರ್ಸೆಟ್ಟಿ (Eric Garcetti)ತನ್ನ ತಂಡದೊಂದಿಗೆ ಸೇರಿ ಅದ್ಬುತವಾದ ನೃತ್ಯ ಮಾಡುತ್ತಾ (Diwali 2024) ದೀಪಾವಳಿಯನ್ನು ಸಂಭ್ರಮಿಸಿದ್ದಾರೆ. ದೀಪಾವಳಿ ಹಬ್ಬದ ನಿಮಿತ್ತ ಎರಿಕ್ ಗಾರ್ಸೆಟ್ಟಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ಜೊತೆಗೆ ಭಾರತೀಯ ಸಂಗೀತ ಹಾಗೂ ನೃತ್ಯ ಮಾಡುತ್ತಾ ಎಂಜಾಯ್ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾ ಭಾರಿ ಸದ್ದು ಮಾಡುತ್ತಿದೆ. ಇತ್ತೀಚಿಗೆ ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡಿದ ತೋಬಾ ತೋಬಾ (Tauba Tauba) ಹಾಡಿಗೆ ಎರಿಕ್ ನೃತ್ಯ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here

ತೋಬಾ ತೋಬಾ (Tauba Tauba)  ಹಾಡಿಗೆ ಅಮೇರಿಕಾದ ರಾಯಭಾರಿ ಎರಿಕೆ ಗಾರ್ಸೆಟ್ಟಿ (Eric Garcetti) ಅದ್ಬುತವಾದ ಸ್ಟೆಪ್ ಗಳನ್ನು ಹಾಕಿದ್ದಾರೆ. ಜೊತೆಗೆ ಎಕ್ಸ್ ಪ್ರೆಷನ್ ಸಹ ನೀಡಿದ್ದಾರೆ. ಈ ವೇಳೆ ಆತನ ಮುಖವನ್ನು ಗಮನಿಸಿದರೇ ತುಂಬಾ ಸಂತೋಷದಿಂದ ಇರುವುದು ತಿಳಿಯುತ್ತದೆ. ಈ ವಿಡಿಯೋವನ್ನು ಖ್ಯಾತ ಮಾದ್ಯಮ ಸಂಸ್ಥೆ ANI ಪೋಸ್ಟ್ ಮಾಡಿದೆ. ಅಮೇರಿಕಾದ ರಾಯಭಾರಿ ಎರಿಕೆ ಗಾರ್ಸೆಟ್ಟಿ ಭಾರತೀಯ ಸಂಸ್ಕೃತಿಯ ಮೇಲೆ ಗೌರವ ಪ್ರದರ್ಶಿಸಿದ್ದು ಮಾತ್ರವಲ್ಲದೇ, ಭಾರತದಲ್ಲಿ ಆತ ಎಷ್ಟು ಸಂತೋಷದಿಂದ ಜೀವಿಸುತ್ತಿದ್ದಾರೆ ಎಂಬುದನ್ನು ಸಹ ತೋರಿಸುತ್ತದೆ. ಅವರ ಪ್ರಯತ್ನಗಳೇ ಭಾರತ-ಅಮೇರಿಕಾದ ನಡುವಣ ಸ್ನೇಹ, ಸಾಂಸ್ಕೃತಿಕ ಸಂಬಂಧಗಳನ್ನು ಮತಷ್ಟು ವೃದ್ದಿ ಮಾಡುತ್ತದೆ ಎಂದು ಹೇಳಬಹುದಾಗಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular