Diwali Offer: ದೀಪಾವಳಿ ಹಬ್ಬದ ಲಿಮಿಟೆಡ್ ಆಫರ್, 699 ರೂಪಾಯಿಗೆ ಜಿಯೋ ಭಾರತ್ 4ಜಿ ಪೋನ್…..!

Diwali Offer – ಭಾರತ ಮಾತ್ರವಲ್ಲದೇ ಹಲವು ದೇಶಗಳಲ್ಲಿ ಆಚರಿಸುವಂತಹ ದೀಪಾವಳಿ ಹಬ್ಬಕ್ಕೆ ಅನೇಕ ಕಂಪನಿಗಳು ಆಫರ್‍ ಗಳನ್ನು ನೀಡುತ್ತವೆ. ಅದೇ ರೀತಿ ಜಿಯೋ ಕಂಪನಿ ಸಹ ಭರ್ಜರಿ ಆಫರ್‍ ಒಂದನ್ನು ನೀಡಿದೆ. ದೀಪಾವಳಿ ಹಬ್ಬಕ್ಕೆ ಈಗಾಗಲೇ ಹಲವು ಆಫರ್‍ ಗಳನ್ನು ಬಿಡುಗಡೆ ಮಾಡಿರುವ ಜಿಯೋ ಇದೀಗ ಭಾರತ್ 4ಜಿ ಪೋನ್ ಬೆಲೆಯಲ್ಲಿ ಭಾರಿ ಕಡಿತ ಮಾಡಿದೆ. ಕೇವಲ 699 ರೂಪಾಯಿಗೆ ಜಿಯೋ ಭಾರತ್ 4ಜಿ ಮೊಬೈಲ್ (Diwali Offer) ಲಭ್ಯವಾಗಲಿದೆ. ರೀಲಿಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗೆ ಬಂಪರ್‍ ಆಫರ್‍ ಕೊಟ್ಟಿದೆ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಜಿಯೋ ಭಾರತ್ 4ಜಿ ಪೋನ್ ಬೆಲೆಗಳ ಮೇಲೆ ಶೇ.30 ರಷ್ಟು ಕಡಿತಗೊಳಿಸಲಾಗಿದೆ ಎನ್ನಲಾಗಿದೆ. ಆ ಮೂಲಕ ಕೇವಲ 699 ರೂಪಾಯಿಗೆ ಇದೀಗ ಜಿಯೋ ಭಾರತ್ 4ಜಿ ಫೋನ್ ಸಿಗಲಿದೆ. ಜೊತೆಗೆ ಈ ಪೋನ್ ರಿಚಾರ್ಜ್ ಬೆಲೆ ಕೇವಲ 123 ರೂಪಾಯಿ ಮಾತ್ರ. ತಿಂಗಳ ಪ್ಲಾನ್ ನಲ್ಲಿ ಅನ್ ಲಿಮಿಟೆಡ್ ಕರೆಗಳು,14 ಜಿಬಿ ಉಚಿತ ಡೇಟಾ ಸಿಗಲಿದೆ. ಜಿಯೋದ ಮಾಸಿಕ 123 ರೂಪಾಯಿಗಳ ರೀಚಾರ್ಜ್ ಪ್ಲಾನ್ ಇತರೆ ಟೆಲಿಕಾಂ ಕಂಪನಿಗಳ ಆಪರೇಟರ್‍ ಗಳಿಗಿಂತ ಶೇ.40 ರಷ್ಟು ಕಡಿಮೆಯಾಗಿದೆ. ಇತರೆ ಟೆಲಿಕಾಂ ಕಂಪನಿಗಳ ಫೀಚರ್‍ ಪೋನ್ ಗಳ ಮಾಸಿಕ ರೀಚಾರ್ಜ್ ಕನಿಷ್ಟ 199 ರೂಪಾಯಿಯಿದೆ. ಜಿಯೋ ಗ್ರಾಹಕರಿಗೆ ಪ್ರತಿ ರೀಚಾರ್ಜ್‌ನಲ್ಲಿ ತಿಂಗಳಿಗೆ 76 ರೂಪಾಯಿ ಉಳಿತಾಯವಾಗಲಿದೆ.

JioBharat Diwali Dhamaka offers 1

ಇನ್ನೂ ತಿಂಗಳಿಗೆ 76 ರೂಪಾಯಿ ಉಳಿತಾಯ ಮಾಡಿದರೇ, ಒಟ್ಟು 9 ತಿಂಗಳಲ್ಲಿ ಜಿಯೋ ಪೋನ್ ಖರೀದಿಸಿದ ಹಣ ವಾಪಸ್ಸು ಬಂದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ರೀಚಾರ್ಜ್‌ಗೆ ಹೆಚ್ಚಿನ ಹಣ ರೀಚಾರ್ಜ್ ಮಾಡುವ ತಲೆನೋವಿನಿಂದ ದೂರವಾಗಬಹುದಾಗಿದೆ. ಇನ್ನೂ ಈ ಪೋನ್ ನಲ್ಲಿ 455 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಚಲನಚಿತ್ರ ಪ್ರೀಮಿಯರ್‌ಗಳು ಮತ್ತು ಹೊಸ ಚಲನಚಿತ್ರಗಳು, ವೀಡಿಯೊ ಶೋಗಳು, ಲೈವ್ ಸ್ಪೋರ್ಟ್ಸ್ ಕಾರ್ಯಕ್ರಮಗಳು, ಜಿಯೋ ಸಿನೆಮಾ ಮುಖ್ಯಾಂಶಗಳು, ಡಿಜಿಟಲ್ ಪಾವತಿಗಳು, ಕ್ಯೂಆರ್ ಕೋಡ್ ಸ್ಕ್ಯಾ‌ನ್‌ಗಳು ಲಭ್ಯವಿದೆ. ಈ ಮೊಬೈಲ್ ಹತ್ತಿರದ ಮೊಬೈಲ್ ಅಂಗಡಿಗಳು, ಜಿಯೋ ಮಾರ್ಟ್ ಅಥವಾ ಅಮೇಜಾನ್ ನಿಂದ ಖರೀದಿ ಮಾಡಬಹುದಾಗಿದೆ.

Leave a Comment

Your email address will not be published. Required fields are marked *

Scroll to Top