ನಮ್ಮ ರಾಷ್ಟ್ರಗೀತೆಯಾದ ಜನ ಗಣ ಮನ ಗೀತೆ ಪ್ರಸಾರವಾದಾಗ ಎದ್ದು ನಿಂತು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಲ್ಲಿಯಾದರೂ ರಾಷ್ಟ್ರಗೀತೆ ಪ್ರಸಾರವಾದಾಗ ಎದ್ದು ನಿಲ್ಲುವುದು ನಮ್ಮ ಆದ್ಯ ಕರ್ತವ್ಯ. ಆದರೆ ಅನೇಕರು ರಾಷ್ಟ್ರಗೀತೆ ಕೇಳಿದರೂ ಸಹ ಗೌರವ ಕೊಡುವುದಿಲ್ಲ. ಆದರೆ ಇಲ್ಲೊಬ್ಬ ಕೂಲಿ ಕೆಲಸ ಮಾಡುವ ವ್ಯಕ್ತಿ ಮಾತ್ರ ತನ್ನ ಕೆಲಸದ ನಡುವೆ ರಾಷ್ಟ್ರಗೀತೆ ಕೇಳಿಸಿದ್ದು, ಅದನ್ನು ಕೇಳಿದ ಕೂಡಲೇ ಕೆಲಸ (Viral Video) ನಿಲ್ಲಿಸಿ ಗೌರವ ಸೂಚಿಸಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.
ಶಾಲಾ ಹಂತದಿಂದಲೇ ಮಕ್ಕಳಿಗೆ ರಾಷ್ಟ್ರಗೀತೆಯನ್ನು ಗೌರವಿಸುವ ಬಗ್ಗೆ ಅರಿವು ಮೂಡಿಸುತ್ತಾ ಬರುತ್ತಾರೆ. ಆದರೆ ಕೆಲ ಪ್ರಬುದ್ದರು ಎನ್ನಿಸಿಕೊಳ್ಳುವವರೂ ಸಹ ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದರೂ ತಮಗೆ ಏನೂ ಸಂಬಂಧವಿಲ್ಲ ಎಂಬಂತೆ ರಾಷ್ಟ್ರಗೀತೆಗೆ ಅಗೌರವ ತೋರುತ್ತಾರೆ. ಆದರೆ ಇಲ್ಲೊಂದು ಘಟನೆ ಎಲ್ಲರನ್ನೂ ಮೆಚ್ಚಿಸಿದೆ. ಜೊತೆಗೆ ಕೆಲವರು ಆ ಪೈಂಟರ್ ನನ್ನು ನೋಡಿ ಗೇಲಿ ಮಾಡಿ ನಕ್ಕಿದ್ದಾರೆ. ಆ ಕಾಮೆಂಟ್ ಗಳನ್ನು ನೋಡಿದರೇ ವಿದ್ಯಾವಂತರಿಗೆ ಮೂಲಭೂತ ಶಿಕ್ಷಣ ಕಲಿಸಬೇಕಾದ ಅವಶ್ಯಕತೆ ಎದ್ದು ಕಾಣಿಸುತ್ತಿದೆ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಈ ಸಂಬಂಧ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಕಾಲೇಜಿನಲ್ಲಿ ರಾಷ್ಟ್ರಗೀತೆ ಪ್ರಸಾರ ಆಗುತ್ತಿದ್ದರೇ, ವಿದ್ಯಾರ್ಥಿಗಳು ಓಡಾಡಿಕೊಂಡು ಮಾತನಾಡುತ್ತಾ ನಿಂತುಕೊಂಡಿರುತ್ತಾರೆ. ಅಲ್ಲೇ ಪಕ್ಕದ ಕಟ್ಟಡವೊಂದರಲ್ಲಿ ಪೈಂಟ್ ಕೆಲಸ ಮಾಡುತ್ತಿರುವ ವ್ಯಕ್ತಿಯೋರ್ವ ತನ್ನ ಕೆಲಸವನ್ನು ಪಕ್ಕಕ್ಕಿಟ್ಟು ಎದ್ದು ನಿಂತು ರಾಷ್ಟ್ರ ಗೀತೆಗೆ ಗೌರವ ಸಲ್ಲಿಸುತ್ತಾನೆ. ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ವ್ಯಕ್ತಿಯನ್ನು ಕಂಡು ಮತ್ತೊಂದು ಕಡೆಯಿದ್ದ ನಾಚಿಕೆಗೇಡಿನ ವಿದ್ಯಾರ್ಥಿಗಳು ಅವರನ್ನು ಗೇಳಿ ಮಾಡುತ್ತಾ ನಗುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೆ ಹಂಚಿಕೊಂಡ ಈ ವಿಡಿಯೋ ಸುಮಾರು 12.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ. ಅನೇಕರು ಪೈಂಟರ್ ಕೆಲಸವನ್ನು ಶ್ಲಾಘಿಸುತ್ತಿದ್ದರೇ, ವಿದ್ಯಾರ್ಥಿಗಳು ನಡೆದುಕೊಂಡ ರೀತಿಗೆ ಟೀಕೆ ಮಾಡುತ್ತಿದ್ದಾರೆ.