ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದಿಂದ 68ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆಯನ್ನು ಡಾ.ಬಿ.ಆರ್.ಅಂಬೇಡ್ಕರ್ (Dr B R Ambedkar) ರವರ ಪುತ್ಥಳಿಯ ಬಳಿ ಆಚರಣೆ ಮಾಡಿದರು. ಪಟ್ಟಣದಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಯ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಸೇರಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ (Dr B R Ambedkar) ರವರ ಪುತ್ಥಳಿಗೆ ಹೂವಿನ ಹಾರವನ್ನು ಹಾಕಿ ಪುಷ್ಪನಮನಗಳನ್ನು ಸಲ್ಲಿಸಿ ಗೌರವಿಸಿದರು.
ನಂತರ ಈ ವೇಳೆ ಮಾತನಾಡಿದ ದಲಿತ ಮುಖಂಡ ಬಾವನ್ನರವರು ಡಾ.ಬಿ.ಆರ್ ಅಂಬೇಡ್ಕರ್ (Dr B R Ambedkar) ರವರು ನಾನು ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಿ ಬೌದ್ಧ ಧಮ್ಮವನ್ನು ಸ್ವೀಕರಿಸಿದರು. ಅವರ ಹಾದಿಯಂತೆ ಅವರ ಆಶಯಗಳಂತೆ ಅಂಬೇಡ್ಕರ್ ರವರ ಅನುಯಾಯಿಗಳು ಪಾಲನೆ ಮಾಡಿದರೆ ಮಾತ್ರ ಅವರ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ (Dr B R Ambedkar) ದಲಿತ ಕಲಾ ಮಂಡಳಿಯವರಿಂದ ಕ್ರಾಂತಿ ಗೀತೆಗಳನ್ನು ಹಾಡಿದರು. ನಂತರ ಎಲ್ಲಾರು ಸಿಹಿಯನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಬೌದ್ಧ ದಮ್ಮ ಪ್ರವರ್ತನ ದಿನವನ್ನು ಸಂತೋಷ ಸಂಭ್ರಮದಿಂದ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಚೆಂಡೂರು ರಮಣ, ಜೀವಿಕಾ ನಾರಾಯಣಸ್ವಾಮಿ, ಕೋರೇನಹಳ್ಳಿ ನರಸಿಂಹಪ್ಪ, ಈಶ್ವರಪ್ಪ, ಚಲಪತಿ, ಮಾದೇಶ, ಬೋಗೇನಹಳ್ಳಿ ಕೃಷ್ಣಪ್ಪ, ಬ್ಯಾಂಕ್ ಸುಬ್ಬರಾಯಪ್ಪ, ನರಸಿಂಹಪ್ಪ, ಎಂ.ಸಿ. ಚಿಕ್ಕನರಸಿಂಹಪ್ಪ, ಗಾಂಧಿ ಶ್ರೀನಿವಾಸ್, ರಾಮಾಂಜಿ, ವರ್ಲಕೊಂಡ ರಾಜು, ಎಲ್ಲೋಡು ಗಂಗಾಧರಪ್ಪ, ಅಮರಾವತಿ, ಇಸ್ಕೂಲಪ್ಪ, ಗಂಗಪ್ಪ, ಸೇರಿದ್ದಂತೆ ಇನ್ನೀತರರು ಭಾಗವಹಿಸಿದ್ದರು.