Bangalore: ಈವೆಂಟ್ ಮೇನೇಜ್ ಮೆಂಟ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ, ದಂಪತಿಯನ್ನು ಅರೆಸ್ಟ್ ಮಾಡಿದ CCB ಪೊಲೀಸರು…!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪಾ, ಬರ್ತ್‌ಡೇ ಸೇರಿದಂತೆ ಹಲವು ಈವೆಂಟ್ ಗಳ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂದೆ ನಡೆಯುತ್ತಿರುವ ಕುರಿತು ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹುದೇ ಪ್ರಕರಣವೊಂದನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಈವೆಂಟ್ ಮೇನೇಜ್ ಮೆಂಟ್ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನ್ನು (Bangalore) ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

CCB police arrested high tech prostitution couple 1

ಈವೆಂಟ್ ಮೇನೇಜ್ ಮೆಂಟ್ ಹೆಸರನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಪ್ರಕಾಶ್ ಹಾಗೂ ಪಾರಿಜಾತ ಎಂಬ ದಂಪತಿ ತಮ್ಮ ಹೆಸರುಗಳನ್ನು ರಾಕೇಶ್ ಹಾಗೂ ಪೂಜಾ ಎಂದು ಬದಲಿಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಈ ಆರೋಪಿಗಳು ಬಡ ಹೆಣ್ಣುಮಕ್ಕಳನ್ನು ಟಾರ್ಗೆಟ್ ಮಾಡಿ ಉದ್ಯೋಗ ಕೊಡಿಸುವ ನೆಪದಲ್ಲಿ ಅವರನ್ನು ಕರೆತರುತ್ತಿದ್ದರು. ಉತ್ತರ ಕರ್ನಾಟಕ ಭಾಗದ ಬಡ ಹೆಣ್ಣು ಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕೆಲಸ ಕೊಡಿಸುವ ಬದಲು ಹಣದ ಆಮಿಷ ತೋರಿಸಿ, ಬಳಿಕ ವೇಶ್ಯಾವಾಟಿಕೆಗೆ ದೂರುತ್ತಿದ್ದರು ಎನ್ನಲಾಗಿದೆ.

CCB police arrested high tech prostitution couple 0

ಇನ್ನೂ ಆರೋಪಿ ಪ್ರಕಾಶ್, ಪಾರಿಜಾತ ದಂಪತಿ ಕರ್ನಾಟಕದ ಹೆಣ್ಣುಮಕ್ಕಳನ್ನು ಕರೆದೊಯ್ದು ತಮಿಳುನಾಡು, ಪಾಂಡಿಚೇರಿ ರೆಸಾರ್ಟ್​ಗಳಲ್ಲಿ ದಂಧೆ ನಡೆಸ್ತಿದ್ದರು. ಮದುವೆ ಈವೆಂಟ್​ ಮ್ಯಾನೇಜ್ಮೆಂಟ್ ಹೆಸರಿನಲ್ಲಿ ಪ್ರತಿ ವಾರಕ್ಕೊಮ್ಮೆ ಬೆಂಗಳೂರಿನಿಂದ ತಮಿಳುನಾಡಿಗೆ ಕರೆದೊಯ್ದು ದಂಧೆ ನಡೆಸುತ್ತಿದ್ದರಂತೆ. ರೆಸಾರ್ಟ್‌ಗಳಿಗೆ ಬರುತ್ತಿದ್ದ ಹೊರ ರಾಜ್ಯದ ಶ್ರೀಮಂತರು, ಉದ್ಯಮಿಗಳಿಗೆ ಈ ಬಡ ಹೆಣ್ಣು ಮಕ್ಕಳನ್ನು ಪಾರ್ಟಿಯ ಹೆಸರಲ್ಲಿ ದಂಧೆಗೆ ಇಳಿಸುತ್ತಿದ್ದರಂತೆ. ಐಷಾರಾಮಿ ವೇಶ್ಯಾವಾಟಿಕೆ ಪಾರ್ಟಿಯಲ್ಲಿ ಮದ್ಯ ಸಹ ಒದಗಿಸುತ್ತಿದ್ದರು ಎನ್ನಲಾಗಿದೆ.  ಹೈಟೆಕ್ ವೇಶ್ಯಾವಾಟಿಕೆ ಪಾರ್ಟಿಗೆ ಬರುವಂತಹ ಒಬ್ಬರಿಗೆ ತಲಾ 25 ರಿಂದ 50 ಸಾವಿರದವರೆಗೂ ಬೆಲೆ ನಿಗಧಿ ಮಾಡಲಾಗುತ್ತಿತ್ತಂತೆ. ಇನ್ನೂ ಈ ಕುರಿತು ಖಚಿತ ಮಾಹಿತಿಯನ್ನು ಪಡೆದುಕೊಂಡ ಸಿಸಿಬಿ ಪೊಲೀಸರು ಧಾಳಿ ನಡೆಸಿ ನಾಲ್ವರು ಯುವತಿಯರನ್ನು ರಕ್ಷಿಸಿ, ಆರೋಪಿ ದಂಪತಿಯನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

Next Post

Dr B R Ambedkar: ದಲಿತ ಸಂಘಟನೆಗಳ ಒಕ್ಕೂಟದಿಂದ ಧಮ್ಮ ಚಕ್ರ ಪ್ರವರ್ತನ ದಿನ ಆಚರಣೆ….!

Sun Oct 13 , 2024
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದಿಂದ 68ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆಯನ್ನು ಡಾ.ಬಿ.ಆರ್.ಅಂಬೇಡ್ಕರ್ (Dr B R Ambedkar) ರವರ ಪುತ್ಥಳಿಯ ಬಳಿ ಆಚರಣೆ ಮಾಡಿದರು. ಪಟ್ಟಣದಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಯ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಸೇರಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ (Dr B R Ambedkar) ರವರ ಪುತ್ಥಳಿಗೆ ಹೂವಿನ ಹಾರವನ್ನು ಹಾಕಿ ಪುಷ್ಪನಮನಗಳನ್ನು ಸಲ್ಲಿಸಿ ಗೌರವಿಸಿದರು. ನಂತರ ಈ ವೇಳೆ ಮಾತನಾಡಿದ […]
Ambedkar Dharma pavarthana dina
error: Content is protected !!