HomeNationalGhaziabad - ಜ್ಯೂಸ್ ನಲ್ಲಿ ಮೂತ್ರ ಬೆರಸಿ ಮಾರಾಟ, ಇಷ್ಟೊಂದು ಕೀಳು ಮಟ್ಟಕ್ಕಿಳಿಯಬೇಕಾ? ವಿಡಿಯೋ ವೈರಲ್…!

Ghaziabad – ಜ್ಯೂಸ್ ನಲ್ಲಿ ಮೂತ್ರ ಬೆರಸಿ ಮಾರಾಟ, ಇಷ್ಟೊಂದು ಕೀಳು ಮಟ್ಟಕ್ಕಿಳಿಯಬೇಕಾ? ವಿಡಿಯೋ ವೈರಲ್…!

ಇಂದಿನ ಕಾಲದಲ್ಲಿ ಸ್ಟ್ರೀಟ್ ಪುಡ್ಸ್, ಫಾಸ್ಟ್ ಪುಡ್ಸ್, ಜ್ಯೂಸ್, ಪಾನೀಪೂರಿ ಹೀಗೆ ಅನೇಕ ತಿನ್ನಿಸುಗಳು ತುಂಬಾನೆ ಫೇಮಸ್ ಎಂದು ಹೇಳಬಹುದು. ಆದರೆ ಕೆಲವೊಂದು ಕಡೆ ಈ ಆಹಾರ ಜ್ಯೂಸ್ ಗಳನ್ನು ಕಲಬೆರಕೆ ಮಾಡುವಂತಹ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಹಣ್ಣಿನ ಜ್ಯೂಸ್ ಮಾರುವ ಅಂಗಡಿಯಲ್ಲಿ ಮೂತ್ರವನ್ನು ಜ್ಯೂಸ್ ನಲ್ಲಿ ಬೆರೆಸಿ ಮಾರುತ್ತಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆತನನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

juice mixed with urine in ghaziabad 1

ಕೆಲ ಕಿಡಿಗೇಡಿಗಳು ಅಕ್ರಮವಾಗಿ ಹಣ ಸಂಪಾದನೆ ಮಾಡೋಕೋ ಅಥವಾ ಬೇರೆ ಉದ್ದೇಶಕ್ಕೋ ತಿಳಿಯದು ತಿನ್ನುವ ಆಹಾರವನ್ನು ಸಹ ಕಲಬೆರಕೆ ಮಾಡುತ್ತಾರೆ. ಅದರಲ್ಲೂ ಈ ಘಟನೆಯಲ್ಲಿ ದುಷ್ಟರು ಜ್ಯೂಸ್ ನಲ್ಲಿ ಮೂತ್ರ ಬೆರೆಸಿದ್ದಾರೆ. ಹಣ್ಣು ಜ್ಯೂಸ್ ಮಾರುವ ದುಷ್ಟನೋರ್ವ ಜ್ಯೂಸ್ ನಲ್ಲಿ ಮನುಷ್ಯರ ಮೂತ್ರ ಹಾಕಿ ಮಾರಾಟ ಮಾಡಿದ್ದಾನೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಈ ಘಟನೆ ಘಾಜಿಯಾಬಾದ್ ಎಂಬ ಜಿಲ್ಲೆ ವ್ಯಾಪ್ತಿಯ ಬಾರ್ಡರ್‍ ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ 15 ವರ್ಷದ ಬಾಲಕ ಹಾಗೂ 29 ವರ್ಷದ ವ್ಯಕ್ತಿಯೋರ್ವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/ghaziabadpolice/status/1834617796417695798

ಹಣ್ಣುಗಳ ರಸದಲ್ಲಿ ಮೂತ್ರ ಬೆರೆಸಿ ಮಾರಾಟ ಮಾಡುತ್ತಿರುವ ಬಗ್ಗೆ ವಿಡಿಯೋ ವೈರಲ್ ಆಗಿದೆ, ಈ ಕುರಿತು ಪೊಲೀಸರಿಗೆ ಮಾಹಿತಿ ಮುಟ್ಟಿದೆ. ಸ್ಥಳೀಯರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜ್ಯೂಸ್ ಮಾರುತ್ತಿದ್ದ ಅಮೀರ್‍ (29) ಎಂಬಾತನನ್ನು ಬಂಧಿಸಲಾಗಿದೆ ಎಂದು ಅಂಕುರ್‍ ವಿಹಾರ್‍ ಪ್ರದೇಶದ ಅಸಿಸ್ಟೆಂಟ್ ಪೊಲೀಸ್ ಕಮಿಷನರ್‍ ಭಾಸ್ಕರ್‍ ವರ್ಮಾ ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ ನಡೆಸಿದಾಗ ಮೂತ್ರ ತುಂಬಿದ ಪ್ಲಾಸ್ಟಿಕ್ ಡಬ್ಬಾ ಒಂದು ಕಾಣಿಸಿದೆ. ಈ ಸಂಬಂಧ ಅಮೀರ್‍ ಹಾಗೂ ಆತನ ಸಹಚರನನ್ನು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular