Local News – ಸಂಸ್ಕೃತ ಭಾಷೆ ಕಲಿಕೆಯು ಮನುಷ್ಯನನ್ನು ಸುಸಂಸ್ಕೃತನನ್ನಾಗಿಸುತ್ತದೆ. ಎಲ್ಲ ವಿದ್ಯಾರ್ಥಿಗಳು ಸಂಸ್ಕೃತವನ್ನು ಹೆಚ್ಚು ಹೆಚ್ಚು ಓದುವುದರ ಮೂಲಕ ಸಂಸ್ಕೃತ ಭಾಷೆಯನ್ನು ನಮ್ಮದಾಗಿಸಿಕೊಳ್ಳಬೇಕು ಇತರರಿಗೂ ಈ ವಿದ್ಯೆಯನ್ನು (Local News) ಮುಟ್ಟಿಸಬೇಕು ಎಂದು ನಿವೃತ್ತ ಸಂಸ್ಕೃತ ಶಿಕ್ಷಕ ಸದಾಶಿವ ಕೆ ಭಟ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದ (Local News) ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ಶ್ರೀ ಶಂಕರ ಭಾರತಿ ಸಂಸ್ಕೃತ ಪಾಠಶಾಲೆ ಇವುಗಳ ಸಹಯೋಗದಲ್ಲಿ ಆಯೋಜಿಸಿದ ಅಸ್ಮಾಕಂ ಸಂಸ್ಕೃತಂ ಕಾರ್ಯಕ್ರಮದಲ್ಲಿ ಅವರು (Local News) ಮಾತನಾಡಿದರು. ಸಂಸ್ಕೃತದಿಂದ ಸಾಕಷ್ಟು ಪ್ರಯೋಜನಗಳು ಇವೆ. ಸಂಸ್ಕೃತ ಅತ್ಯಂತ ಸಮೃದ್ಧವಾದ ಭಾಷೆ. ಅದರ ಆಳವಾದ ಅಧ್ಯಯನದಿಂದ ನಮ್ಮ ಜ್ಞಾನ (Local News) ವಿಸ್ತಾರವಾಗುತ್ತದೆ. ಮುಖ್ಯವಾಗಿ ಹೇಳಬೇಕು ಎಂದರೆ ಅನೇಕ ಭಾಷೆಗಳಿಗೆ ಸಂಸ್ಕೃತವೇ ಮೂಲ ಎಂದು ವಿವರವಾಗಿ ತಿಳಿಸಿದರು.
ಬಳಿಕ ಸೋಮೇನಹಳ್ಳೀ ಶಂಕರ (Local News) ಭಾರತಿ ಸಂಸ್ಕೃತ ಪಾಠಶಾಲೆ ಮುಖ್ಯ ಶಿಕ್ಷಕ ಬಾಲಸುಬ್ರಹ್ಮಣ್ಯಂ ಮಾತನಾಡಿ, ನಮ್ಮ ದೇಶದಲ್ಲಿ ಪರಕೀಯರು ಬರುವ ಮೊದಲು ಎಲ್ಲರಿಗೂ ಸಂಸ್ಕೃತ ಭಾಷೆಯನ್ನು ಮಾತನಾಡುತ್ತಿದ್ದರು. ಪಾಶ್ಚಿಮಾತ್ಯ ಸಂಸ್ಕೃತಿ ಬಂದಮೇಲೆ ಸಂಸ್ಕೃತ ಭಾಷೆ ಮರೆತು ಹೋಗಿದ್ದಾರೆ. (Local News) ಪುರಾತನ ಸಾವಿರಾರು ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿ ಇವೆ ಇವುಗಳನ್ನು ಗಣಿತ, ವಿಜ್ಞಾನ, ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಬಳಸುತ್ತಿದ್ದಾರೆ. ಸೋಮೇನಹಳ್ಳಿ ಸಂಸ್ಕೃತ ಶಾಲೆಗೆ ರಾಜ್ಯಮಟ್ಟದ ಉತ್ತಮ ಶಾಲೆ ಪ್ರಶಸ್ತಿಯನ್ನು ಎರಡು ಬಾರಿ ಪಡೆದುಕೊಂಡ ಹೆಮ್ಮೆ ಇದೆ. (Local News) ಎಲ್ಲರೂ ಸಂಸ್ಕೃತ ಭಾಷೆಯನ್ನು ಅದ್ಯಯನ ಮಾಡಬೇಕು ಎಂದು ತಿಳಿಸಿದರು.
ಸೋಮೇನಹಳ್ಳಿ (Local News) ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ಮುಖ್ಯರಸ್ತೆಯಲ್ಲಿ ಭಿತ್ತಿ ಪತ್ರಗಳು ಹಿಡಿದು ಸಂಸ್ಕೃತ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಮಂಜುನಾಥ, ಸೋಮೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮ್ ಮೋಹನ್, ಪಿ.ಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗಲಿಂಗಪ್ಪ ಸೇರಿದಂತೆ ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.