Independence Day – 78ನೇ ಸ್ವಾತಂತ್ಯ್ರ ದಿನಾಚರಣೆಯ ಅಂಗವಾಗಿ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕು ಎಲ್ಲೋಡು ಗ್ರಾಮದಲ್ಲಿ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಮಯದಲ್ಲಿ ಬ್ರಾಹ್ಮಣ ಸಂಘದ ಕಾರ್ಯ ಚಟುವಟಿಕೆಗಳಿಂದ ವಯೋ ಸಹಜ ಕಾರಣದಿಂದ ನಿವೃತ್ತಿಯಾದ ಎ. ರಾಮಚಂದ್ರರಾವ್ ದಂಪತಿಗಳನ್ನು ಹಾಗೂ ಪಿ. ಎನ್. ಪ್ರಭಾಕರರಾವ್ ದಂಪತಿಗಳನ್ನು ಸನ್ಮಾನಿಸಲಾಯಿತು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪ್ರಸಿದ್ದ ಎಲ್ಲೋಡು ಗ್ರಾಮದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಸ್ವಾತಂತ್ಯ್ರ ದಿನಾಚರಣೆ (Independence Day) ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಸಿ.ಪಿ. ಸೂರ್ಯಪ್ರಕಾಶ್, 1952 ರಲ್ಲಿ ಸ್ಥಾಪನೆಗೊಂಡ ಸಂಘವು ಹಲವಾರು ಹಿರಿಯರ ಪರಿಶ್ರಮದಿಂದ ಬೃಹದಾಕಾರವಾಗಿ ಬೆಳೆದು ನಿಂತಿದೆ, ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ (Independence Day) ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಕಾಲದಿಂದಲೂ ಸಹ ನೀರು, ಊಟ ಹಾಗೂ ವಸತಿಗಳನ್ನು ಒದಗಿಸಿ ಭಕ್ತರ ಮೆಚ್ಚುಗೆಗೆ ಪಾತ್ರರಾಗುತ್ತಿರುವುದು (Independence Day) ರಾಜ್ಯದ ಮತ್ತು ಹೊರ ರಾಜ್ಯದಲ್ಲೂ ಹೆಸರುಗಳಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿ, ಸಂಘವು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯಮಟ್ಟದಲ್ಲಿ ಪ್ರಖ್ಯಾತವಾಗಲು ಇಳಿ ವಯಸ್ಸಿನಲ್ಲಿಯೂ ಇಂತಹ ಹಿರಿಯರ ಸಲ್ಲಿಸಿದ ಸೇವೆಯು ಅನನ್ಯವಾದದು ಎಂದು ತಿಳಿಸಿ ಸನ್ಮಾನಿತರಾದ ಹಿರಿಯರಿಗೆ ಉತ್ತಮ ಆರೋಗ್ಯ ಲಭಿಸಲಿ ಎಂದು ಶುಭ ಕೋರಿದರು.
ಬಳಿಕ ಆಶೀರ್ವಚನ ನುಡಿಗಳನ್ನು (Independence Day) ತಿಳಿಸಿದ ಸಂಘದ ಪ್ರಧಾನ ಪೋಷಕರಾದ ವೇದ ಬ್ರಹ್ಮಶ್ರೀ ಮಂಕಾಲ ಶ್ರೀಹರಿ ಶರ್ಮಾಜಿ ರವರು ದಾನಿಗಳು ಹಾಗೂ ಭಕ್ತಾದಿಗಳು ನೀಡುವ ಸೇವೆಯು ನಮ್ಮ ಸಂಘದಲ್ಲಿ ಯಾವುದೇ ಲೋಪವಾಗದೆ ಅನಾದಿಕಾಲದಿಂದಲೂ ಸದ್ವಿನಿಯೋಗವಾಗಿ ನಡೆದುಕೊಂಡು ಬರುತ್ತಿದ್ದು ಜಾತ್ರಾ ಸಮಯದಲ್ಲಿ ನಮ್ಮ ಸಂಘದಿಂದ ಬೇರೆ ಬೇರೆ ಊರುಗಳಿಂದ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಬೇದ ಭಾವವಿಲ್ಲದೆ ಅನ್ನದಾನ ಮಾಡುತ್ತಿರುವುದು ಹೆಮ್ಮೆ ಪಡಬೇಕಾದ ವಿಷಯವಾಗಿದ್ದು ಇವೆಲ್ಲವೂಗಳನ್ನು ನಿರ್ವಹಿಸುವ ಸಂಘದ ಈ ಹಿರಿಯರನ್ನು (Independence Day) ಸನ್ಮಾನಿಸುವ ಕಾರ್ಯಕ್ರಮವು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಸ್ತುತವಾಗಿದೆ ಹಾಗೂ ಸಮಯೋಚಿತವೂ ಆಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ (Independence Day) ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾರಾಯಣ್ ರಾವ್, ಸಹ ಕಾರ್ಯದರ್ಶಿ ಬಿ. ಆರ್. ಶ್ರೀನಿವಾಸ್, ಖಜಾಂಚಿ ಸಿ.ಪಿ. ರಾಘವೇಂದ್ರ, ಸ್ಥಳೀಯ ದೇವಸ್ಥಾನದ ಅರ್ಚಕರು, ಪುರೋಹಿತರು ಹಾಗೂ ಸಂಘದ ನಿರ್ದೇಶಕರಾದ ವೇದ ಬ್ರಹ್ಮಶ್ರೀ ವೇಣುಗೋಪಾಲ ಶರ್ಮ ಹಾಗೂ ಜ್ವಾಲಾ ಪ್ರಸಾದ್ ಶರ್ಮ, ಮತ್ತು ನಿರ್ದೇಶಕರಾದ ಎ. ಆದಿಶೇಷ, ಬಿ. ಆರ್. ವೆಂಕಟೇಶ್, ಆರ್. ರಘುನಾಥ್ ರಾವ್, ವಿಶೇಷ ಕಾರ್ಯನಿರ್ವಾಹಕರಾದ ಸಿ.ಎಸ್. ಶ್ರೀನಾಥ್, ಸಿ. ಎಸ್. ವೆಂಕಟರಾವ್, ಸಿ. ಕೆ. ಮುರಳಿಧರ್, ಸಿ. ಎಸ್. ಶೇಷಗಿರಿ ರಾವ್, ಸಿ.ಎಸ್. ಲಕ್ಷ್ಮೀನಾರಾಯಣರಾವ್, ಎ. ಶ್ರೀಧರ್, ಕೆ. ಶ್ರೀನಿವಾಸಮೂರ್ತಿ, ಸೋನಗಾನಹಳ್ಳಿ ಚಂದ್ರಶೇಖರ್, ಹಂಪಸಂದ್ರ ನಾಗಭೂಷಣರಾವ್, ರಾಹುಲ್ ಭಾರ್ಗವ್, ಪ್ರಜ್ವಲ್ ಭಾರ್ಗವ್, ವಿಜ್ಞೇಶ್, ಶ್ರೀವತ್ಸ ಮಹಿಳಾ ಕಾರ್ಯನಿರ್ವಾಹಕರಾದ ಶ್ರೀಮತಿ ಗೀತಮ್ಮ , ಶ್ರೀಮತಿ ವಿಜಯಮ್ಮ, ಶ್ರೀಮತಿ ಗಿರಿಜಾ, ಶ್ರೀಮತಿ ಕವಿತಾ, ಶ್ರೀಮತಿ ರಾಮ ಲಕ್ಷ್ಮಮ್ಮ, ಶ್ರೀಮತಿ ಕಮಲಮ್ಮ, ಶ್ರೀಮತಿ ಅನುರಾಧ, ಶ್ರೀಮತಿ ಅರ್ಚನಾ, ಕುಮಾರಿ ಸಿ.ಎಸ್. ಸಂಜನಾ, ಎನ್. ಸಹನಾ ಸೇರಿದಂತೆ ಅನೇಕ ವಿಪ್ರ ಬಾಂಧವರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.