Friday, November 22, 2024

Singing Computation: ವಿದ್ಯಾರ್ಥಿಗಳು ಕಲಾ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಮುಂದಾಗಿ: ಪ್ರೆಸ್ ಸುಬ್ಬರಾಯಪ್ಪ

Singing Computation – ನೃತ್ಯ, ಗಾಯನ, ಸಂಗೀತ, ಚಿತ್ರಕಲೆ ಸೇರಿದಂತೆ ಇನ್ನಿತರ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಪರೀಕ್ಷಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕಲ್ಪಿಸಿಕೊಡಲಾಗುತ್ತಿದೆ ಎಂದು ಗುಡಿಬಂಡೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ತಿಳಿಸಿದರು.

Kasapa Singing program 1

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆ ಮತ್ತು ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯನ್ನು (Singing Computation) ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯವನ್ನು ಬೆಳೆಸಿದ ಮಹನೀಯರನ್ನು ಸದಾ ನೆನೆಯಬೇಕಿದೆ. ನಾಡಿನ ಅನೇಕ ಕವಿಗಳು ತಮ್ಮಲ್ಲಿನ ವಿಧ್ವತ್ತಿನ ಮೂಲಕ ಕಥೆ, ಕವನ, ಕಾದಂಬರಿ, ನಾಟಕ, ವಿಮರ್ಶೆ ಸೇರಿದಂತೆ ಅನೇಕ ಸಾಹಿತ್ಯ (Singing Computation) ಪ್ರಕಾರಗಳ ಮೂಲಕ ಕೃಷಿ ಮಾಡಿ ಭಾಷೆಯನ್ನು ಬೆಳೆಸುವ ಹಾಗೂ ಉಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದೂ ನಾವೆಲ್ಲ ಭಾಷೆಯ ಬೆಳವಣಿಗೆಯಲ್ಲಿ ಕೈಜೋಡಿಸಬೇಕಿದೆ ಎಂದರು.

ಈ ವೇಳೆ (Singing Computation) ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಮಾತನಾಡಿ ಮಾತೃ ಭಾಷೆಯ ಬಗ್ಗೆ ಅಭಿಮಾನ ಶೂನ್ಯರಾಗಿ, ಅನ್ಯ ಭಾಷೆಗಳನ್ನು ಪ್ರೀತಿಸುವ ಧೋರಣೆಯನ್ನು ಬದಿಗಿರಿಸಿ ಮೊದಲು ಕನ್ನಡ ಭಾಷೆಗೆ ನೀಡಬೇಕಾದ ಗೌರವ ನೀಡುವುದನ್ನು ಎಲ್ಲಿಯವರೆಗೆ ಕಲಿಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಭಾಷೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಹೆಚ್ಚು ಹೆಚ್ಚಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜತೆಗೆ ತಮ್ಮ ಓದಿನಲ್ಲಿ ವಿಡಂಬನೆಯೊಂದಿಗೆ ಚುಟುಕು ಕವನಗಳು, ಸಾಹಿತ್ಯವನ್ನು ರಚಿಸುವತ್ತಾ ಗಮನಹರಿಸಬೇಕು. (Singing Computation) ಮೊದಲು ನಮಗೆ ಜನ್ಮ ನೀಡಿದ ತಾಯಿಯನ್ನು ಅಮ್ಮ ಎಂದು ಕರೆಯುವಂತೆ ಅಗಬೇಕು. ಅದನ್ನು ರೂಢಿಸಿಕೊಂಡು ನಂತರ ಅಕ್ಕಪಕ್ಕದವರನ್ನು ನಮ್ಮವರೆಂದು ಪರಿಗಣಿಸಿದಲ್ಲಿ ಅಭ್ಯಂತರವಿಲ್ಲ ಎಂದರು.

ಬಳಿಕ (Singing Computation)  ಕನ್ನಡ ಉಪನ್ಯಾಸಕ ಡಿ. ಮೋಹನ್ ಕುಮಾರ್ ಮಾತನಾಡಿ ಮೊದಲು ನಮಗೆ ಜನ್ಮ ನೀಡಿದ ತಾಯಿಯನ್ನು ಅಮ್ಮ ಎಂದು ಕರೆಯುವಂತೆ ಅಗಬೇಕು. ಅದನ್ನು ರೂಢಿಸಿಕೊಂಡು ನಂತರ ಅಕ್ಕಪಕ್ಕದವರನ್ನು ನಮ್ಮವರೆಂದು ಪರಿಗಣಿಸುವುದರಲ್ಲಿ ಯಾರ ಅಭ್ಯಂತರವೂ ಇಲ್ಲ. ಅಲ್ಲದೇ ವಿದ್ಯಾರ್ಥಿಗಳು ಕನ್ನಡ ನಾಡಿನ ಪ್ರಖ್ಯಾತ ಬರಹಗಾರರ ಕೃತಿಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನಂತರ ಮನಸ್ಸನ್ನು ಬರಹದ ಕಡೆ ವರ್ಗಾಯಿಸಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಕತೆ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

Kasapa Singing program 0

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ರೀತಿಯ (Singing Computation) ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.  ಈ (Singing Computation) ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ರವೀಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಬಿ. ಮಂಜುನಾಥ್, ಹಿಂದುಳಿದ ವರ್ಗಗಳ ಪ್ರತಿನಿಧಿ ಆರ್. ಶ್ರೀನಿವಾಸ್, ಕಾಲೇಜಿನ ಉಪನ್ಯಾಸಕರಾದ ಆರ್. ಜಿ. ಸೋಮಶೇಖರ್, ರಾಮಣ್ಣ, ಮಂಜು ಭಾರ್ಗವಿ, ನರೇಶ್, ನೂರುಲ್ಲಾ, ಅನಂತ್ ಕುಮಾರ್‍ ಸೇರಿದಂತೆ ಹಲವರು ಇದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!