-
ನಮ್ಮ ಸರ್ಕಾರ ಅಲ್ಲಾಡಿಸೋಕೂ ನಿಮ್ಮ ಕೈಯಲ್ಲಿ ಆಗಲ್ಲ ಎಂದ ಡಿಕೆಶಿ, ತಿರುಕನ ಕನಸು ಕಾಣಬೇಡಿ ಎಂದು ಕೌಂಟರ್
ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣದ ಸದ್ದು ಜೋರಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಶುರು ಮಾಡಿದೆ. ಇದೀಗ ಈ ಪಾತ್ರೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ. 10 ವರ್ಷ ನಾವೇ ಸರ್ಕಾರದಲ್ಲಿ ಇರುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳುತ್ತಾರೆ. ಆದರೆ ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಸವಾಲಾಕಿದ್ದಾರೆ.
ಕೆಂಗೇರಿ ಬಳಿ ಕೆಂಪಮ್ಮ ದೇವಾಲಯದಲ್ಲಿ ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಚಾಲನೆ ನೀಡಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ನಿಮ್ಮ ಪಾಪದ ಕೊಡ ತುಂಬಿದೆ, ನಮ್ಮ ಪಾದಯಾತ್ರೆ ಮೈಸೂರು ತಲುಪವವರೆಗೂ ಈ ಸರ್ಕಾರದ ವಿಕೆಟ್ ಗಳು ಬೀಳಬೇಕು. ಅದು ನಾಯಕನಿಂದಲೇ ಶುರುವಾಗಬೇಕು ಎಂದಿದ್ದಾರೆ. ನೀವು ಮುಡಾದ ಬಗ್ಗೆ ಮಾತನಾಡುತ್ತಿದ್ದೀರಾ, ಅದರ ಬಗ್ಗೆ ನಿಮಗೆ ಮಾತನಾಡೋಕೆ ಯಾವ ನೈತಿಕೆಯಿದೆ. 14 ಸೈಟ್ ಏಕೆ, ಎಷ್ಟು ಬೇಕಾದರೂ ಕಾನೂನು ಪ್ರಕಾರ ಪಡೆದುಕೊಳ್ಳಲಿ, ಆದರೆ ಇವರು ಕಾನೂನು ಮೀರಿ ಸೈಟ್ ಪಡೆದುಕೊಂಡಿದ್ದಾರೆ ಎಂದು ಗುಡುಗಿದರು.
ಇನ್ನೂ ಸಿದ್ದರಾಮಯ್ಯನವರ ಬಗ್ಗೆ ಸಹ ಮಾತನಾಡಿದರು. ಸಿದ್ದರಾಮಯ್ಯನವರೇ ಅದು ಯಾರಿಗೆ ಸೇರಿದ ಆಸ್ತಿ, ಮುಡಾ ಸರ್ಕಾರದ ಆಸ್ತಿ, ಬಡಾವಣೆಯಾಗಿರುವ ಆಸ್ತಿಯನ್ನು ನಿಮ್ಮ ಬಾಮೈದನ ಹೆಸರಿಗೆ ಹೇಗೆ ಮಾರಾಟ ಮಾಡಬಹುದು, ಅದಕ್ಕೆ ಅವಕಾಶವಿದೆಯೇ? ಇದನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಬರೆಯಲಾಗದೆಯೇ, ಸರ್ಕಾರದ ಜಮೀನನ್ನು ನಿಮ್ಮ ಬಾಮೈದನ ಹೆಸರಿಗೆ ಹೇಗೆ ದಾಖಲಾತಿ ಮಾಡಿಕೊಟ್ಟರು. ಸಿದ್ದರಾಮಯ್ಯನವರು ನನದೆ ಇದು ಯಾವುದು ಗೊತ್ತಿಲ್ಲ ಅಂತಾರೆ, 64 ಕೋಟಿ ಕೊಡಿ ಎಂದು ಹೇಳ್ತಾರೆ. ಅಲ್ಲಿ ನಡೆದ ಘಟನೆ ನಿಮ್ಮ ಗಮನಕ್ಕೆ ಬರದೇ ಆಗಿದೆಯೇ, ನಿಮ್ಮ ಪ್ರಭಾವ ಇಲ್ಲ ಎನ್ನುವುದಕ್ಕೆ ಸಾಧ್ಯವಿದೆಯೇ ಎಂದು ಪ್ರಶ್ನೆಗಳನ್ನು ಮಾಡಿದ್ದಾರೆ.
ನಮ್ಮ ಸರ್ಕಾರ ಅಲ್ಲಾಡಿಸೋಕೂ ನಿಮ್ಮ ಕೈಯಲ್ಲಿ ಆಗಲ್ಲ ಎಂದ ಡಿಕೆಶಿ
ಇನ್ನೂ ರಾಜ್ಯ ಸರ್ಕಾರ ಬೀಳಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆಗೆ ಟಕ್ಕರ್ ಕೊಡಲು ರಾಮನಗರದಲ್ಲಿ ನಡೆದ ಕಾಂಗ್ರೇಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನವೆಂಬರ್, ಡಿಸೆಂಬರ್ಗೆ ಸರ್ಕಾರ ಪಲ್ಟಿ ಮಾಡುತ್ತೇವೆ ಅಂತಾರೆ. ಅದೇನು ಹೊಡೆಯೋಕೆ ಮಡಕೆನಾ ಎಂದು ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ. ದೇಶವನ್ನ ಆಳುವ ಶಕ್ತಿ ಮತ್ತೆ ಉದ್ಭವ ಆಗುತ್ತೆ. 2028ಕ್ಕೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದಾರೆ. ಪಾದಯಾತ್ರೆ ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ಪಾಂಡವಪುರ ಕಡೆ ಕಾಂಗ್ರೆಸ್ ಶಾಸಕರು ಇದ್ದಾರೆ. ನಿನ್ನೆ ಜೆಡಿಎಸ್ ಬಾವುಟವೇ ಇರಲಿಲ್ಲ. ನಾವು ನಿನ್ನೆ ಮಾತಾಡಿದ್ದಕ್ಕೆ ಜೆಡಿಎಸ್ ಬಾವುಟ ಹಾಕಿದ್ದಾರೆ.
ಇನ್ನೂ ನೀವು ಪೆನ್ ಡ್ರೈವ್ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ. ಪ್ರಧಾನಿ ಮೋದಿ ಬಳಿ ಯಾಕೆ ಮಾತನಾಡುತ್ತಿಲ್ಲ. ಬಿಜೆಪಿ ಯಾಕೆ ಬಾಯಿ ಮುಚ್ಚಿಕೊಂಡಿದೆ. ಬಿಚ್ಚಿ ಬಿಚ್ಚಿ ರಾಜ್ಯದ ಜನತೆಯ ಮುಂದೆ ಇಡಬೇಕು. ಭ್ರಷ್ಟಾಚಾರ ಪಿತಾಮಹ ಎಂದಿದ್ದಾರೆ. ನಿಮ್ಮ ತಂದೆ ಯಾಕೆ ರಾಜೀನಾಮೆ ಕೊಟ್ಟರು. ಕಣ್ಣೀರು ಹಾಕಿ ಹೋದವರು ಯಾರು? ಯಾಕೆ ರಾಜೀನಾಮೆ ಅಂಗೀಕಾರ ಮಾಡಿದರು. ಯಡಿಯೂರಪ್ಪನವರು ಜೈಲಿಗೆ ಹೋಗಲು ಜೆಡಿಎಸ್ನವರು ಕಾರಣ. ಈಗ ಅವರೊಂದಿಗೆ ಪಾದಯಾತ್ರೆ ಎಂದು ಡಿಕೆ ಶಿವಕುಮಾರ್ ಕುಟುಕಿದ್ದಾರೆ.