ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ಇನ್ಸ್ಟಾಗ್ರಾಂ (Instagram Feature) ಎಂಬ ದೈತ್ಯ ಸೋಷಿಯಲ್ ಮಿಡಿಯಾ ಪ್ಲಾಟ್ ಫಾರಂ ಎಂದೇ ಹೇಳಬಹುದು. ಸ್ಮಾರ್ಟ್ ಪೋನ್ ಬಳಸುವವರಲ್ಲಿ ಈ ಆಪ್ ಬಳಸದೇ ಇರೋರು ತುಂಬಾನೆ ವಿರಳ ಎಂದೇ ಹೇಳಬಹುದು. ಈ ಸೋಷಿಯಲ್ ಮಿಡಿಯಾ ಫ್ಲಾಟ್ ಫಾರಂಗೆ ತುಂಬಾನೆ ಕ್ರೇಜ್ ಇದೆ ಎಂದು ಹೇಳಲಾಗುತ್ತದೆ. ಇನ್ನೂ ತಮ್ಮ ಬಳಕೆದಾರರಿಗಾಗಿ ಹೊಸ ಹೊಸ ಅಪ್ಡೇಟ್ ಗಳನ್ನು (Instagram Feature) ಆಗಿದ್ದಾಂಗೆ ತರುತ್ತಿರುತ್ತದೆ. ಇದೀಗ ರೀಲ್ಸ್ ಮಾಡುವವರಿಗಾಗಿ ಹೊಸ ಅಪ್ಡೇಟ್ ತಂದಿದೆ. ಈ ಬಗ್ಗೆ ತಿಳಿಯಲು ಮುಂದೆ ಓದಿ…
ಇನ್ಸ್ಟಾಗ್ರಾಂ ಆಗಿದ್ದಾಂಗೆ ಹಲವು ರೀತಿಯ ಅಪ್ಡೇಟ್ ಗಳನ್ನು (Instagram Feature) ತಮ್ಮ ಬಳಕೆದಾರರಿಗೆ ನೀಡುತ್ತಿರುತ್ತದೆ. ಇದೀಗ ಹೊಸ ಫೀಚರ್ (Instagram Feature) ಅನ್ನು ಪರಿಚಯಿಸಿದೆ. ಇನ್ಸ್ಟಾಗ್ರಾಂ ನಲ್ಲಿ ತುಂಬಾನೆ ಪಾಪ್ಯುಲರ್ ಆಗಿರೋದು ರೀಲ್ಸ್ ಎಂದೇ ಹೇಳಬಹುದು. ಅನೇಕರು ರೀಲ್ಸ್ ಮೂಲಕ ಫೇಮಸ್ ಆಗುತ್ತಿದ್ದಾರೆ, ಜೊತೆಗೆ ಅನೇಕರು ರೀಲ್ಸ್ (Reels) ಮೂಲಕವೇ ಸಂಪಾಧನೆ ಸಹ ಮಾಡುತ್ತಿರುತ್ತಾರೆ. ಸದ್ಯ ರೀಲ್ಸ್ ನಲ್ಲಿ ಲಿಮಿಟೆಡ್ ಸಂಖ್ಯೆಯಲ್ಲಿ ಟ್ಯ್ರಾಕ್ ಗಳನ್ನು ಅಳವಡಿಸಬಹುದಾಗಿತ್ತು. ಇದೀಗ ಹೊಸ ಅಪ್ಡೇಟ್ ನಲ್ಲಿ ರೀಲ್ಸ್ ಗೆ ಒಂದಕ್ಕಿಂತ ಹೆಚ್ಚು ಆಡಿಯೋ ಟ್ಯ್ರಾಕ್ ಗಳನ್ನು ಅಳವಡಿಸಬಹುದಾಗಿದೆ. ಇದರಿಂದಾಗಿ ರೀಲ್ಸ್ ನಲ್ಲಿ ಒಂದಕ್ಕಿಂತ ಹೆಚ್ಚು ಟ್ಯ್ರಾಕ್ ಗಳನ್ನು ಬಳಸುವಂತಹ ಅವಕಾಶವನ್ನು ಈ ಅಪ್ಡೇಟ್ ನೀಡಿದೆ. (to buy Noise Buds N1 in-Ear Truly Wireless Earbuds Click here)
ಈ ಹೊಸ ಅಪ್ಡೇಟ್ ನಿಂದಾಗಿ ರೀಲ್ಸ್ (Instagram Feature) ಮಾಡೋವರಿಗೆ ಹಾಗೂ ನೋಡುವವರಿಗೆ ಮತಷ್ಟು ಅನುಭೂತಿಯನ್ನು ನೀಡಲಿದೆ ಎನ್ನಲಾಗಿದೆ. ಮಲ್ಟಿ ಟ್ಯ್ರಾಕ್ ರೀಲ್ಸ್ ಫೀಚರ್ ವಿಶ್ವದಾದ್ಯಂತ ಪರಿಚಯಿಸಿದೆ ಇನ್ಸ್ಟಾಗ್ರಾಂ. 20 ಆಡಿಯೋ ಟ್ಯ್ರಾಕ್ ಗಳನ್ನು ಬಳಸಿಕೊಳ್ಳಬಹುದಾಗಿದೆ. ಇದರಿಂದಾಗಿ ರೀಲ್ಸ್ ಅನ್ನು ಮತಷ್ಟು ಆಕರ್ಷಕವಾಗಿ ಕ್ರಿಯೇಟ್ ಮಾಡಬಹುದಾಗಿದೆ. ಜೊತೆಗೆ ಟೆಕ್ಸ್ಟ್, ಸ್ಟಿಕ್ಕರ್ ಗಳನ್ನು ಕ್ಲಿಪ್ ಗಳಿಗೆ ಅನುಗುಣವಾಗಿ ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದೆ. ಇನ್ನೂ ಈ ಫೀಚರ್ (Instagram Feature) ನೀವೂ ಅಳವಡಿಸಬೇಕಾದರೇ ತಾವುಗಳು ಲೇಟೆಸ್ಟ್ ವರ್ಷನ್ ಡೌನ್ ಲೋಡ್ ಮಾಡಿಕೊಳ್ಳಬೇಕಿದೆ. ಈ ಫೀಚರ್ ಹೇಗೆ ಬಳಸಬೇಕು ಎಂದರೇ, ಆಪ್ ನಲ್ಲಿ ವಿಡಿಯೋ ಎಡಿಟರ್ ಆಪ್ಷನ್ ಒಪೆನ್ ಮಾಡಿ, Add to mix ಎಂಬ ಆಪ್ಷನ್ ಟ್ಯಾಪ್ ಮಾಡಬೇಕು. ಬಳಿಕ ಬೇಕಾದಂತಹ ಟ್ಯ್ರಾಕ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.