Viral News: ಮಗನ ಮದುವೆ ಮಾತುಕತೆಯಲ್ಲಿ ಪ್ರೀತಿಗೆ ಬಿದ್ದ ತಂದೆ, ಹುಡುಗಿಯ ತಾಯಿ ಜೊತೆ ಎಸ್ಕೇಪ್….!

Viral News: ಯಾರಿಗೆ, ಯಾವಾಗ, ಹೇಗೆ ಪ್ರೀತಿ ಹುಟ್ಟುತ್ತೆ ಎಂಬುದು ಗೊತ್ತಾಗಲ್ಲ, ಹಿರಿಯ ಮುದುಕರಿಗೂ ಸಹ ಪ್ರೀತಿ ಹುಟ್ಟುತ್ತಿರುತ್ತದೆ, ಜೊತೆಗೆ ಅನೇಕ ಮದುವೆಗಳೂ ಸಹ ನಡೆದಿದೆ. ಅದೇ ರೀತಿಯ ಘಟನೆಯೊಂದು ನಡೆದಿದೆ. ಮಗನಿಗೆ ಹೆಣ್ಣು ನೋಡಲು ಕುಟುಂಬ ಸಮೇತ ಹೋಗಿದ್ದು, ಅಲ್ಲಿ ಮಗನಿಗೆ ಮದುವೆ ಫಿಕ್ಸ್ ಮಾಡುವ ಜೊತೆಗೆ ಅಪ್ಪ ಕೂಡ ತನಗೆ ಜೋಡಿಯನ್ನು ಸೆಟ್ ಮಾಡಿಕೊಂಡಿದ್ದಾನೆ. ಮಗನಿಗೆ ನೋಡಲು ಹೋದ ಹುಡುಗಿಯ ತಾಯಿಯನ್ನೆ ತಂದೆ ಪ್ರೀತಿಸಿ ಆಕೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

Olg aged lovers escaped

ಈ ಘಟನೆ ಉತ್ತರ ಪ್ರದೇಶದ ಕಾಸ್ ಗಂಜ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಮಗನಿಗೆ ಮದುವೆ ಮಾಡಲು ಹೆಣ್ಣು ನೋಡಲು ಹೋಗಿದ್ದಾರೆ. ಈ ವೇಳೆ ಮಗನಿಗೆ ಹುಡುಗಿ ನೋಡಿ, ಹುಡುಗಿಯ ತಾಯಿಯೊಂದಿಗೆ ಹುಡುಗನ ತಂದೆ ಪ್ರೀತಿಗೆ ಬಿದ್ದಿದ್ದಾನೆ. ಮಗನ ಮದುವೆ ಮಾತುಕತೆ, ಶಾಸ್ತ್ರ ಸೇರಿದಂತೆ ಮದುವೆಗೆ ಸಂಬಂಧಿಸಿದ ವಿಚಾರಗಳನ್ನು ಮಾತನಾಡುತ್ತಾ ಹುಡುಗನ ತಂದೆ ಹಾಗೂ ಹುಡುಗಿಯ ತಾಯಿಯ ನಡುವೆ ಪ್ರೀತಿ ಶುರುವಾಗಿದೆ. ಮಗನ ಮದುವೆ ನಡೆಯುವುದಕ್ಕೂ ಮುಂಚೆಯೇ ಅವರಿಬ್ಬರ ಪ್ರೀತಿ ಉತ್ತುಂಗಕ್ಕೇರಿತ್ತಂತೆ. ಮದುವೆಯಾಗಿ ಸೊಸೆ ಮನೆಗೆ ಬರೋದಕ್ಕೂ ಮುಂಚೆಯೇ ತಾಯಿ ಜೊತೆ ಹುಡುಗನ ಅಪ್ಪ ಪರಾರಿಯಾಗಿದ್ದಾನೆ.

ಈ ಕುಟುಂಬ ದೊಡ್ಡ ಕುಟುಂಬವಾಗಿದ್ದು, ಈ ಕುಟುಂಬದಲ್ಲೊಬ್ಬ ಮಗನಿಗೆ ಮದುವೆ ಮಾಡಲು ಮಾತುಕತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಒಂದು ಹುಡುಗಿಯ ಪೊಟೋ ನೋಡಿದ ಆ ಯುವಕ ಮದುವೆಯಾಗಲು ಒಪ್ಪಿದ್ದಾನೆ. ಬಳಿಕ ಹುಡುಗಿ ಶಾಸ್ತ್ರಕ್ಕೆ ದಿನ ನಿಗದಿ ಮಾಡಿದ್ದಾರೆ. ಅದರಂತೆ ಆತನ ಪೋಷಕರು ಹಾಗೂ ಸಂಬಂಧಿಕರು ಹುಡುಗಿ ಮನೆಗೆ ಹೋಗಿದ್ದಾರೆ. ಬಳಿಕ ಎಲ್ಲರಿಗೂ ಮದುವೆ ಮಾಡಲು ಒಪ್ಪಿಗೆಯಾಗಿದೆ. ಹುಡುಗ ಹಾಗೂ ಹುಡುಗಿ ಸಹ ಮಾತನಾಡಿಕೊಂಡಿದ್ದಾರೆ. ಮದುವೆ ಸಂಬಂಧಿ ಕೆಲಸಗಳಿಗಾಗಿ ಎರಡೂ ಮನೆಯವರು ಮೊಬೈಲ್ ನಂಬರ್‍ ವಿನಿಮಯ ಮಾಡಿಕೊಂಡಿದ್ದಾರೆ. ಹುಡುಗನ ಮದುವೆಯ ಎಲ್ಲಾ ಜವಾಬ್ದಾರಿಯನ್ನು ಹುಡುಗನ ತಂದೆ ವಹಿಸಿಕೊಂಡಿದ್ದಾರೆ. ಹುಡುಗಿ ನೋಡುವ ಶಾಸ್ತ್ರ ಮುಗಿದ ಬಳಿಕ ಹುಡುಗಿ ತಾಯಿಗೆ ಮುಂದಿನ ಕೆಲಸಗಳಿಗಾಗಿ ಕರೆ ಮಾಡಿದ್ದಾರೆ. ಬಳಿಕ ಎರಡೂ ಕುಟುಂಬಗಳು ಮದುವೆ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

Olg aged lovers escaped 0

ಈ ಸಂಬಂಧ ದಿನಕ್ಕೆರಡು ಬಾರಿ ಹುಡುಗನ ಅಪ್ಪ ಹಾಗೂ ಹುಡುಗಿಯ ತಾಯಿ ನಡುವೆ ಮಾತುಕತೆ ನಡೆಯುತ್ತಿತ್ತಂತೆ. ಈ ನಡುವೆ ಅವರಿಬ್ಬರ ನಡುವೆ ಪ್ರೀತಿ ಶುರುವಾಗಿದೆ. ಇದರ ಜೊತೆಗೆ ಮಗನ ಮದುವೆಗೆ ಒಳ್ಳೆಯ ದಿನಾಂಕ ಸಹ ಸಿಗಲಿಲ್ಲ. ಪೋನ್ ನಲ್ಲಿ ಮಾತನಾಡುತ್ತಿದ್ದ ಅವರಿಬ್ಬರ ಪ್ರೀತಿ ಉತ್ತುಂಗಕ್ಕೇರಿದೆ. ಮಗನ ಮದುವೆ ಆಗುವುದಕ್ಕೂ ಮುಂಚೆಯೇ ಈ ಪ್ರೇಮಪಕ್ಷಿಗಳು ಪರಾಯಿಯಾಗಿದ್ದಾರೆ. ಇಬ್ಬರೂ ನಾಪತ್ತೆಯಾದ ಕೂಡಲೇ ಕೋಲಾಹಲ ಸೃಷ್ಟಿಯಾಗಿದೆ. ಹುಡುಗಿ ತಂದೆ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದು, ಅವರ ಪೋನ್ ಕಾಲ್ ಲೀಸ್ಟ್ ತೆಗೆದಾಗ ಪೊಲೀಸರಿಗೆ ಶಾಕ್ ಆಗಿದೆ. ಅಂದಹಾಗೆ ಪರಾರಿಯಾಗಿರುವ ತಾಯಿಗೆ 6 ಮಕ್ಕಳು, ಹುಡುಗನ ತಂದೆಗೆ 10 ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಮಗನ ಮದುವೆ ಮಾಡಿಸಲು ಹೋಗಿ ತಂದೆಯೇ ಹುಡುಗಿ ತಾಯಿಯೊಂದಿಗೆ ಎಸ್ಕೇಪ್ ಆಗಿದ್ದು, ಎಲ್ಲಾ ಕಡೆ ಚರ್ಚೆಗೆ ಕಾರಣವಾಗಿದೆ.

Leave a Comment

Your email address will not be published. Required fields are marked *

Scroll to Top