Monday, June 30, 2025
HomeSpecialBaba Vanga: ಬೆಚ್ಚಿ ಬೀಳಿಸುತ್ತೆ ಬಾಬಾ ವಂಗಾ ರವರ ಭವಿಷ್ಯವಾಣಿ, 2025ರಲ್ಲಿ ಜಗತ್ತಿನಲ್ಲಿ ಮಾನವೀಯತೆ ಅಂತ್ಯವಾಗುತ್ತಾ?

Baba Vanga: ಬೆಚ್ಚಿ ಬೀಳಿಸುತ್ತೆ ಬಾಬಾ ವಂಗಾ ರವರ ಭವಿಷ್ಯವಾಣಿ, 2025ರಲ್ಲಿ ಜಗತ್ತಿನಲ್ಲಿ ಮಾನವೀಯತೆ ಅಂತ್ಯವಾಗುತ್ತಾ?

ಅನೇಕ ಘಟನೆಗಳ ಬಗ್ಗೆ ಮೊದಲೇ ಊಹಿಸಿ ಹೇಳಿದಂತಹ ಬಾಬಾ ವಂಗಾ (Baba Vanga) ರವರ ಭವಿಷ್ಯವಾಣಿ ಎಂದರೇ ಎಲ್ಲರೂ ಹೆದರುತ್ತಾರೆ. ಬಾಬಾ ವಂಗಾ ರವರ ಭವಿಷ್ಯವಾಣಿಯಲ್ಲಿ ತಿಳಿಸಿದಂತಹ ಅನೇಕ ಘಟನೆಗಳ ಬಗ್ಗೆ ಮೊದಲೇ ನುಡಿದಿದ್ದು, ಅವರ ಭವಿಷ್ಯವಾಣಿ ತುಂಬಾನೆ ಖ್ಯಾತಿ ಪಡೆದುಕೊಂಡಿದೆ. ಅವರು ಮೃತಪಟ್ಟು ಮೂರು ದಶಕಗಳೇ ಕಳೆದಿದೆ. ಆದರೂ ಸಹ ಅವರ ಭವಿಷ್ಯವಾಣಿ ಅಂದ್ರೇ ಸಾಕು ಅನೇಕರು ಭಯಪಡು‌ತ್ತಾರೆ. ಬಲ್ಗೇರಿಯಾ ಮೂಲದ ಕಾಲಜ್ಞಾನಿ ಬಾಬಾ ವಂಗಾ (Baba Vanga) ರವರ ಭವಿಷ್ಯವಾಣಿ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದ್ದು, ಅವರ ಭವಿಷ್ಯವಾಣಿಯಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಮುಂದೆ ಓದಿ….

Baba Vanga prediction 2025 1

ಕಾಲಜ್ಞಾನಿ ಬಾಬಾ ವಂಗಾ (Baba Vanga) ರವರು ಕೋವಿಡ್ ಸಾಂಗ್ರಾಮಿಕ ರೋಗ, ಅಮೇರಿಕಾ ಮೇಲೆ ಉಗ್ರ ದಾಳಿ, ಜಪಾನ್ ನ ಪ್ರವಾಹ, ಆರ್ಥಿಕ ಬಿಕ್ಕಟ್ಟು ಸೇರಿದಂತೆ ಅನೇಕ ಘಟನೆಗಳ ಬಗ್ಗೆ ಮೊದಲೇ ಊಹಿಸಿ ಹೇಳಿದ್ದರು. ಈ ಹಾದಿಯಲ್ಲೇ 2025 ರಲ್ಲಿ ನಡೆಯಲಿರುವ ಪ್ರಮುಖ ಘಟನೆಗಳ ಬಗ್ಗೆ ಸಹ ಹೇಳಿದ್ದಾರೆ. ಇನ್ನೂ ಇದೇ ಕಾಲಜ್ಞಾನಿ ಬಾಬಾ ವಂಗಾರವರು ನುಡಿದ ಎರಡನೆಯ ಮಹಾಯುದ್ಧದ ಕುರಿತು ಅವರು ನುಡಿದ ಭವಿಷ್ಯವಾಣಿಗಳು ನಿಜವಾದ ಬಳಿಕ ಅವರ ಭವಿಷ್ಯವಾಣಿ ತುಂಬಾನೆ ಚರ್ಚೆಗೆ ಬಂತು. ಇದೀಗ ಬಾಬಾ ವಂಗಾ (Baba Vanga)  ರವರ ಭವಿಷ್ಯವಾಣಿ ಮತ್ತೊಮ್ಮೆ ಚರ್ಚೆಗೆ ಬಂದಿದೆ.

2025 ರಿಂದ ಮಾನವೀಯತೆಯ ಅವನತಿ ಆರಂಭವಾಗುತ್ತದೆಯಂತೆ. (Baba Vanga) ಜೊತೆಗೆ ಅದೇ ವರ್ಷದಲ್ಲಿ ಯುರೋಪಿನ ದುರಂತ ಸಹ ಆರಂಭವಾಗುತ್ತದೆಯಂತೆ. ಇದು ದೊಡ್ಡ ವಿನಾಶವನ್ನೆ ಸೃಷ್ಟಿಸುತ್ತದಯಂತೆ. ಜೊತೆಗೆ ಅಲ್ಲಿ ಹೆಚ್ಚಿನ ಜನಸಂಖ್ಯೆಯ ಪ್ರಮಾಣದಲ್ಲಿ ಕುಸಿತ ಕಂಡು ಬರುತ್ತದೆಯಂತೆ. 2028ನೇ ವರ್ಷದಲ್ಲಿ ಮಾನವರು ಶುಕ್ರ ಗೃಹದಿಂದ ಶಕ್ತಿಯನ್ನು ಪಡೆಯಲು ಪ್ರಯತ್ನ ಮಾಡುತ್ತಾರೆ. ಬಳಿಕ 2033 ರಲ್ಲಿ ಪ್ರಮುಖ ಹವಾಮಾನ ಬದಲಾವಣೆ ಇರುತ್ತದೆ, ಧ್ರುವೀಯ ಮಂಜುಗಡ್ಡೆ ಕರಗುವುದರಿಂದ ಸಮುದ್ರ ಮಟ್ಟ ಸಹ ಏರುತ್ತದೆ. 2130ರ ಸಮಯದಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕವನ್ನು ಸಹ ಹೊಂದುತ್ತಾರೆ ಎಂದು ವಂಗಾ (Baba Vanga) ರವರು ತಮ್ಮ ಭವಿಷ್ಯವಾಣಿಯಲ್ಲಿ ನುಡಿದಿದ್ದಾರೆ.

ಇನ್ನೂ 3005ರ ಅತ್ಯಂತ ಅಪಾಯಕಾರಿ ಭವಿಷ್ಯವನ್ನು ಸಹ ತಿಳಿಸಿದ್ದಾರೆ. ಈ ವರ್ಷದಲ್ಲಿ ಭೂಮಿ ಹಾಗೂ ಮಂಗಳ ಗ್ರಹದ ನಡುವೆ ಯುದ್ದ ನಡೆಯಲಿದೆ. 3797ರ ನಂತರ ಭೂಮಿಯು ಮಾನವ ವಾಸಕ್ಕೆ ಯೋಗ್ಯವಾಗಿರುವುದಿಲ್ಲ. ಇದರಿಂದಾಗಿ ಮನುಷ್ಯರು ಬೇರೆಡೆ ಆಶ್ರಯ ಪಡೆಯಬೇಕಾಗದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹೀಗೆ ಹಂತ ಹಂತವಾಗಿ 5079 ರ ಸಮಯಕ್ಜೆ ಎಲ್ಲವೂ ನಾಶವಾಗುತ್ತದೆ ಎಂದು (Baba Vanga) ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

Baba Vanga prediction 2025 0

ಕಾಲಜ್ಞಾನಿ ಎಂದೇ ಕರೆಯಲಾಗುವ ಬಾಬಾ ವಂಗಾ (Baba Vanga) ರವರು 1911 ರಲ್ಲಿ ಜನಿಸಿ, 1996ರಲ್ಲಿ ನಿಧನರಾದರು. ತಮ್ಮ 12ನೇ ವಯಸ್ಸಿನಲ್ಲಿ ಧೂಳಿನ ಬಿರುಗಾಳಿಯಿಂದ ತಮ್ಮ ದೃಷ್ಟಿ ಕಳೆದುಕೊಂಡರು. ಆದರೂ ಬಾಬಾ ವಂಗಾ ರವರು 51ನೇ ಶತಮಾನದ ವರೆಗೆ ಭೂಮಿಯ ಮೇಲೆ ನಡೆಯಬಹುದಾಂತಹ ಅನೇಕ ಘಟನೆಗಳ ಬಗ್ಗೆ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಅವರ (Baba Vanga) ಭವಿಷ್ಯವಾಣಿ ಅನೇಕವು ನಿಜವಾಗಿದೆ ಎಂದು ಸಹ ಹೇಳಲಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular