Saturday, August 30, 2025
HomeStateCrime news: ಹಾಸನದಲ್ಲಿ 12 ವರ್ಷದ ಬಾಲಕನ ಬರ್ಬರ ಕೊಲೆ, ರೈಲ್ವೆ ಹಳಿ ಪಕ್ಕದಲ್ಲಿ ಶವ...

Crime news: ಹಾಸನದಲ್ಲಿ 12 ವರ್ಷದ ಬಾಲಕನ ಬರ್ಬರ ಕೊಲೆ, ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ಪಾಪಿಗಳು….!

ಸಮಾಜದಲ್ಲಿ ಕೆಲವು ಪಾಪಿಗಳು ಕೊಲೆಗಳು, ಹಲ್ಲೆಗಳನ್ನು ಮಾಡುತ್ತಿರುತ್ತಾರೆ. ಇದೀಗ 12 ವರ್ಷದ ಬಾಲಕನೋರ್ವವನ್ನು ಬರ್ಬರವಾಗಿ ಹತ್ಯೆ ಮಾಡಿ (Crime News)ರೈಲ್ವೆ ಹಳ್ಳಿ ಪಕ್ಕದಲ್ಲಿ ಎಸೆದ ಘಟನೆ ನಡೆದಿದೆ. ಈ ಘಟನೆ ಹಾಸನದ ಹೊರವಲಯದ ಬಸವನಹಳ್ಳಿ ಬಳಿ ನಡೆದಿದೆ ಎಂದು ತಿಳಿದುಬಂದಿದೆ.

12 ವರ್ಷದ ಬಾಲಕನೊರ್ವವನ್ನು ಬರ್ಬರವಾಗಿ ಕೊಲೆ ಮಾಡಿ ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಕುಶಾಲ್ ಗೌಡ (12). ಮೃತ ಬಾಲಕ ಕುಶಾಲ್ ಗೌಡ ಮೃತದೇಹ ರೈಲ್ವೆ ಹಳಿ ಬಳಿಯಿದ್ದ ಪೊದೆಯಲ್ಲಿ (Crime News) ಕಾಣಿಸಿಕೊಂಡಿದೆ. ಚಿಕ್ಕಹೊನ್ನೇನಹಳ್ಳಿಯ ವೆಂಕಟೇಶ್ ಹಾಗೂ ರೂಪ ದಂಪತಿಯ ಪುತ್ರನೇ ಕುಶಾಲ್. ಈತ ಜು.9 ರ ಸಂಜೆ ಮಕ್ಕಳ ಜೊತೆಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಆಟವಾಡಲು ಹೋದ ಬಾಲಕ ಮತ್ತೆ ಮನೆಗೆ ವಾಪಸ್ಸು ಬಂದಿರಲಿಲ್ಲವಂತೆ. ಮಗು ವಾಪಸ್ಸು ಬಾರದ ಹಿನ್ನೆಲೆಯಲ್ಲಿ ಪೋಷಕರು ಹುಡಾಕಿದ್ದಾರೆ.

12 Years boy murdered 1

ಇನ್ನೂ ಈ ಭಾಗದಲ್ಲಿ ಇತ್ತೀಚಿಗೆ ಚಿರತೆ ಕಾಟ ಸಹ ಹೆಚ್ಚಾಗಿತ್ತು. ಇದರಿಂದ ಚಿರತೆ ಬಾಲಕನನ್ನು ಎತ್ತಿಕೊಂಡು ಹೋಗಿರಬಹುದು ಎಂದು ಪೋಷಕರು ಅರಣ್ಯ ಇಲಾಖೆಯ ಸಿಬ್ಬಂದಿಯ ಜೊತೆಗೆ ಶೋಧ ನಡೆಸಿದ್ದರು. ಎಲ್ಲೂ ಸಹ ಬಾಲಕ ಪತ್ತೆಯಾಗಿರಲಿಲ್ಲ. ಆದರೆ ಜು.10 ಮಧ್ಯಾಹ್ನ ಪದೆಯೊಂದರಲ್ಲಿ ಕುಶಾಲ್ ಗೌಢ ಮೃತದೇಹ (Crime News) ಪತ್ತೆಯಾಗಿದೆ. ರೈಲು ಡಿಕ್ಕಿಯಾಗಿ ಬಾಲಕ ಸತ್ತಿದ್ದಾನೆಂದು ಬಿಂಬಿಸುವ ನಿಟ್ಟಿನಲ್ಲಿ ಶವ ಎಸೆಯಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular