Rashmika Mandanna – ಕೊಡವ ಭಾಷೆಯಲ್ಲಿ ವಿಡಿಯೋ ಹಂಚಿಕೊಂಡ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ , ಈ ಸಾಲುಗಳ ಅರ್ಥ ಏನು ಗೊತ್ತಾ?

Rashmika Mandanna – ಸದ್ಯ ಸೌತ್ ಅಂಡ್ ನಾರ್ತ್ ನಲ್ಲಿ ಪುಲ್ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತಮ್ಮ ಸಿನೆಮಾ ಅಪ್ಡೇಟ್ ಗಳ ಜೊತೆಗೆ ಪೊಟೋಶೂಟ್ಸ್ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ನಟಿ ರಶ್ಮಿಕಾ ಸ್ನೇಹಿತೆಯ ಮದುವೆಗಾಗಿ ಕೊಡಗಿಗೆ ಬಂದಿದ್ದರು. ಈ ಸಮಯದಲ್ಲಿ ಆಕೆ ಕೊಡವ ಸ್ಟೈಲ್ ನಲ್ಲೇ ಮಿಂಚಿದ್ದರು. ಇದೀಗ ಆಕೆ ಆ ಸಮಯದಲ್ಲಿ ತೆಗೆದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ.

Rashmika mandanna kodava speech video

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ, ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಕೊನೆಯದಾಗಿ ಆಕೆ ಬಾಲಿವುಡ್ ನ ಅನಿಮಲ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಸಹ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿತ್ತು. ಇನ್ನೂ ರಶ್ಮಿಕಾ ಸಿನೆಮಾ ಕೆಲಸಗಳ ನಿಮಿತ್ತ ದೇಶ ವಿದೇಶಗಳಿಗೆ ತೆರಳುತ್ತಿರುತ್ತಾರೆ. ಬಿಡುವು ಸಿಕ್ಕಾಗ ಆಕೆ ತನ್ನ ಹುಟ್ಟೂರಿಗೆ ಬರುತ್ತಿರುತ್ತಾರೆ. ಸ್ವಂತ ಊರಿನಲ್ಲಿ ಸಮಯ ಕಳೆಯುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ನಟಿ ರಶ್ಮಿಕಾ ಸ್ನೇಹಿತೆಯ ಮದುವೆಗಾಗಿ ಹುಟ್ಟೂರಿಗೆ ಬಂದಿದ್ದರು. ಈ ವೇಳೆ ಆಕೆ ಕೊಡವ ಶೈಲಿಯಲ್ಲಿ ಉಡುಪು ಧರಿಸಿದ್ದರು. ಈ ಸಂಬಂಧ ಪೊಟೋಗಳು ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಪೊಟೋಗಳು ವೈರಲ್ ಆಗಿತ್ತು.

ಇನ್ನೂ ನಟಿ ರಶ್ಮಿಕಾ ಮಂದಣ್ಣ ಸ್ನೇಹಿತೆಯ ಮದುವೆಗಾಗಿ ಕೊಡಗಿಗೆ ಬಂದಿದ್ದರು. ಈ ಸಮಯದಲ್ಲಿ ಆಕೆ ಕೊಡವ ಸೈಲಿಯಲ್ಲಿ ಸೀರೆಯನ್ನು ಧರಿಸಿದ್ದರು. ತಮ್ಮ ಮಾತೃಭಾಷೆ ಕೊಡವದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆಕೆ ಏನು ಹೇಳಿದ್ದಾರೆ ಎಂಬುದು ಆ ಭಾಷೆ ಬಾರದವರಿಗೆ ಅರ್ಥವಾಗಿಲ್ಲ. ಅವರು ಏನು ಹೇಳಿದ್ದಾರೆ ಎಂಬ ಅರ್ಥ ಇಲ್ಲಿದೆ. ಎಲ್ಲರಿಗೂ ನಮಸ್ಕಾರ. ಕೊಡಗಿನಲ್ಲಿ ಫ್ರೆಂಡ್ ಮದುವೆಗೆ ಬಂದಿದ್ದೀನಿ. ಕೊಡಗಿನಲ್ಲಿರುವಾಗ ನಿಮ್ಮ ಜೊತೆ ಮಾತನಾಡುವುದು ತುಂಬಾ ಖುಷಿಯ ವಿಚಾರ. ಹೀಗಾಗಿ ಈ ವಿಡಿಯೋ ಮಾಡಿದ್ದೇನೆ. ನಿಮ್ಮ ಆಶಿರ್ವಾದದಿಂದ ಇಷ್ಟು ಸಕ್ಸಸ್ ಕಂಡಿದ್ದೇನೆ. ಈಗಾಲೂ ನಾನು ಕಾವೇರಮ್ಮ ಮತ್ತು ಇಗ್ಗುತಪ್ಪ ಆಶಿರ್ವಾದದಿಂದ ಮುಂದುವರೆಯುತ್ತಿದ್ದೇನೆ. ನೀವು ಸದಾ ನನಗೆ ಸಪೋರ್ಟ್ ಮಾಡಿದ್ದಿರಾ, ಇನಷ್ಟು ಹಾರ್ಡ್ ವರ್ಕ್ ಮಾಡಿ ನಾನು ಮತಷ್ಟು ಸಾಧಿಸುತ್ತೇನೆ ಎಂದು ‌ಪ್ರಾಮೀಸ್ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲಕ್ಕೆ ಥ್ಯಾಂಕ್ಸ್, ನೀವು ಸದಾ ನನ್ನ ಮನಸ್ಸಲ್ಲೇ ಇರುತ್ತೀರಾ ಎಂದು ಧನ್ಯವಾದ ಹೇಳಿದ್ದಾರೆ.

Rashmika mandanna kodava speech video 0

ಇನ್ನೂ ರಶ್ಮಿಕಾ ಹಂಚಿಕೊಂಡ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಸದ್ಯ ಆಕೆ ಪುಷ್ಪಾ-2 (Pushpa 2) ಸಿನೆಮಾ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪಾ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಖ್ಯಾತಿ ಪಡೆದುಕೊಂಡ ರಶ್ಮಿಕಾ ಇದೀಗ ಪುಷ್ಪಾ-2 ಸಿನೆಮಾದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *

Scroll to Top