ಮನೆಯೊಳಗೆ ನುಗ್ಗಿದ ಹಾವು ಆರಾಮಾಗಿ ಟಿ.ವಿಯಲ್ಲಿ ಸೀರಿಯಲ್ ನೋಡುತ್ತಾ ಮಗ್ನ, ವೈರಲ್ ಆದ ವಿಡಿಯೋ…!

ಬಹುತೇಕ ಗೃಹಿಣಿ ಸೇರಿದಂತೆ ಅನೇಕ ಮಹಿಳೆಯರಿಗೆ ಟಿ.ವಿ. ಸೀರಿಯಲ್ ಗಳೆಂದರೇ ತುಂಬಾನೆ ಇಷ್ಟ. ಕೆಲವರು ಧಾರವಾಹಿ ನೋಡುತ್ತಾ ಪ್ರಪಂಚವನ್ನೆ ಮರೆತಿರುತ್ತಾರೆ. ಅಷ್ಟೊಂದು ಇಷ್ಟಪಟ್ಟು ಸೀರಿಯಲ್ ಗಳನ್ನುನೋಡುತ್ತಾರೆ. ಆದರೆ ಬುಸ್ ಬುಸ್ ನಾಗಪ್ಪನಿಗೂ ಸೀರಿಯಲ್ ಗಳ ಮೇಲೆ ಮನಸ್ಸಾಗಿದೆಯಂತೆ. ಮನೆಯೊಂದಕ್ಕೆ ನುಗ್ಗಿದ ಹಾವು ಸುಮಾರು ಎರಡು ಗಂಟೆಯ ಕಾಲ ಅಲ್ಲಾಡದೇ ಸೀರಿಯಲ್ ನೋಡಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಜೊತೆಗೆ ವಿವಿಧ ಕಾಮೆಂಟ್ ಗಳು ಹರಿದುಬರುತ್ತಿವೆ.

watch video: https://www.instagram.com/p/C8t2LcbyXHM/

ಕೆಲ ಮಹಿಳೆಯರಿಗೆ ಸೀರಿಯಲ್ ಗಳೆಂದರೇ ಪಂಚಪ್ರಾಣ, ಸೀರಿಯಲ್ ಗಳಿಂದಲೇ ಕೆಲ ಕುಟುಂಬಗಳಲ್ಲಿ ಜಗಳಗಳು ಸಹ ನಡೆದಿವೆ. ಕೆಲ ಮಹಿಳೆಯರು ಧಾರವಾಹಿ ನೋಡಲು ಶುರು ಮಾಡಿದ್ರೆ ಪ್ರಳಯ ಆದರೈ ಸಹ ಗೊತ್ತಾಗೋದೆ ಇಲ್ಲ. ಅಷ್ಟೊಂದು ಇಷ್ಟವಾಗಿ ಸೀರಿಯಲ್ ಗಳನ್ನು ನೋಡುತ್ತಿರುತ್ತಾರೆ. ಮನೆಯೊಂದಕ್ಕೆ ನುಗ್ಗಿದ ಬುಸ್ ಬುಸ್ ನಾಗಪ್ಪ ಸತತ ಎರಡು ಗಂಟೆಗಳ ಕಾಲ ಅಲ್ಲಾಡದೇ ಸೀರಿಯಲ್ ವೀಕ್ಷಣೆ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್ ಅನ್ನು ಕುತೂಹಲದಿಂದ ನೋಡಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಅನೇಕ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.

watch video: https://www.instagram.com/p/C8vfzc7S6bx/

ಸ್ನೇಕ್ ಶಿವು ಎಂಬುವವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಜೀ ಟಿ.ವಿ. ಅಭಿಮಾನಿ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮನೆಯೊಳಗೆ ನುಗ್ಗಿದ ಹಾವೊಂದು ಹೆಡೆ ಎತ್ತಿ ಕುಳಿತು ವಿಡಿಯೋ ವೀಕ್ಷಣೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಮನೆಯ ಯಜಮಾನಿ ಬರೋಬ್ಬರಿ ಒಂದೂವರೆ ಗಂಟೆಯಿಂದ ಒಂದು ಚೂರು ಅಲುಗಾಡದಂತೆ ಟಿ.ವಿ. ನೋಡುತ್ತಾ ಕುಳಿತಿದೆ ಎಂದು ಸ್ನೇಕ್ ಶಿವು ಬಳಿ ಹೇಳಿದ್ದಾರೆ ಎನ್ನಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಲಕ್ಷಾಂತರ ವ್ಯೂವ್ಸ್ ಕಂಡಿದೆ. ಅನೇಕರು ಆ ಹಾವು ಹೆಣ್ಣು ಹಾವಿರಬೇಕು ಎಂತಲೂ, ಕೆಲವರು ನಾಗಿಣಿ ಸೀರಿಯಲ್ ಆಡಿಷನ್ ಗಾಗಿ ಬಂದಿರಬಹುದೆ ಎಂದು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top