ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್ ಗಿಟ್ಟಿಸಿಕೊಳ್ಳಲು ಜನ ಎಂತಹ ಹುಚ್ಚು ಸಾಹಸಗಳಿಗೂ ಕೈಹಾಕುತ್ತಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪ್ರಸಿದ್ಧಿ ಪಡೆಯುವ ಆಸೆಗೆ ಬಿದ್ದು ಮಾಡಿರುವ ಕೃತ್ಯ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಕೇವಲ ಕೆಲವು ರೀಲ್ಸ್ (Viral Video) ವೀಕ್ಷಣೆಗಳಿಗಾಗಿ ಹಸುಗೂಸಿನ ಜೀವದ ಜೊತೆ ಆಟವಾಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

Viral Video – ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಕೇವಲ 2 ಅಥವಾ 3 ತಿಂಗಳ ಪ್ರಾಯದ ಹಸುಗೂಸನ್ನು ಕಾಲಿನಿಂದ ಹಿಡಿದು ತಲೆಕೆಳಗಾಗಿ ನೇತುಹಾಕಿದ್ದಾನೆ. ಮಗು ಅಳುತ್ತಿದ್ದರೂ ಸಹ ಕಿಂಚಿತ್ತೂ ಕರುಣೆ ಇಲ್ಲದೆ, ಆತ ವಿಕೃತವಾಗಿ ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾನೆ. ತನ್ನ ರೀಲ್ಸ್ ಹುಚ್ಚಿಗಾಗಿ ಮಗುವನ್ನು ತನಗಿಷ್ಟ ಬಂದಂತೆ ತಿರುಗಿಸುತ್ತಾ, ಪೈಶಾಚಿಕ ಆನಂದ ಪಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಅತ್ಯಂತ ಬೇಸರದ ಸಂಗತಿಯೆಂದರೆ, ಆ ವ್ಯಕ್ತಿ ಈ ದಾರುಣ ಕೃತ್ಯ ಎಸಗುತ್ತಿದ್ದರೂ ಪಕ್ಕದಲ್ಲಿದ್ದವರು ಯಾರೂ ಸಹ ಆತನನ್ನು ತಡೆಯುವ ಪ್ರಯತ್ನ ಮಾಡಿಲ್ಲ. (Viral Video) ಬದಲಿಗೆ ಮೂಕಪ್ರೇಕ್ಷಕರಾಗಿ ನಿಂತಿದ್ದಾರೆ.
ಇವನು ಮನುಷ್ಯನಾ ಅಥವಾ ಮೃಗನಾ?: ನೆಟ್ಟಿಗರ ಆಕ್ರೋಶ
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Viral Video Link Here) ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೆರಳಿ ಕೆಂಡವಾಗಿದ್ದಾರೆ. ವಿಡಿಯೋ ವೀಕ್ಷಿಸಿದ ಪ್ರತಿಯೊಬ್ಬರ ಕಣ್ಣಲ್ಲೂ ನೀರು ಬರುವಂತಾಗಿದ್ದು, ಆತನ ವಿಕೃತ ಮನಸ್ಥಿತಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. “ಮಕ್ಕಳಿಲ್ಲದ ದಂಪತಿಗಳು ಮಕ್ಕಳಿಗಾಗಿ ದೇವಸ್ಥಾನ, ಆಸ್ಪತ್ರೆ ಎಂದು ಅಲೆಯುತ್ತಾರೆ. ಆದರೆ ಇಂತಹ ಪಾಪಿಗಳಿಗೆ ಮಗು ಸಿಕ್ಕರೆ ಹೀಗೆ ಕ್ರೂರವಾಗಿ ವರ್ತಿಸುತ್ತಾರೆ. ಇವನು ಮನುಷ್ಯನಾ ಅಥವಾ ಮೃಗನಾ?” ಎಂದು ಜನರು ಕಮೆಂಟ್ ಬಾಕ್ಸ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. Read this also : ಮರದ ತುದಿಯಲ್ಲಿ ನಿಂತು ಡಾನ್ಸ್ ಮಾಡಿದ ಕಾಶ್ಮೀರಿ ಮಹಿಳೆ, ವೈರಲ್ ಆದ ವಿಡಿಯೋ…!

ಕಠಿಣ ಕ್ರಮಕ್ಕೆ ಹೆಚ್ಚಿದ ಒತ್ತಾಯ
ರೀಲ್ಸ್ ಮತ್ತು ವ್ಯೂಸ್ ಬೆನ್ನತ್ತಿ ಇಂತಹ ಅಮಾನವೀಯ ಕೃತ್ಯ ಎಸಗಿರುವ ಈ ‘ಸೈಕೋ’ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಸದ್ಯ ನೆಟ್ಟಿಗರು ಈ (Viral Video) ವಿಡಿಯೋವನ್ನು ಪೊಲೀಸರು ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (Child Rights Commission) ಟ್ಯಾಗ್ ಮಾಡುತ್ತಿದ್ದು, ಈ ನರರೂಪಿ ರಾಕ್ಷಸನನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಕ್ರೇಜ್ ಯಾವ ಮಟ್ಟಿಗೆ ಜನರ ಬುದ್ಧಿ ಕೆಡಿಸುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಕೇವಲ ಲೈಕ್ಸ್ ಹಸಿವಿಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ಈತನಿಗೆ ತಕ್ಕ ಶಾಸ್ತಿಯಾಗಬೇಕಿದೆ.
