HomeSpecialWildlife Hunt : ಜೀವಂತ ಹಾವಿನ ಜೊತೆ ಫುಟ್‌ಬಾಲ್ ಆಡಿದ ಕೊಕ್ಕರೆ! ಬೆಚ್ಚಿಬೀಳಿಸುವ ಈ ವೈಲ್ಡ್‌ಲೈಫ್...

Wildlife Hunt : ಜೀವಂತ ಹಾವಿನ ಜೊತೆ ಫುಟ್‌ಬಾಲ್ ಆಡಿದ ಕೊಕ್ಕರೆ! ಬೆಚ್ಚಿಬೀಳಿಸುವ ಈ ವೈಲ್ಡ್‌ಲೈಫ್ ವಿಡಿಯೋ ನೋಡಿದ್ದೀರಾ?

ಕಾಡು ಪ್ರಾಣಿ-ಪಕ್ಷಿಗಳ ಪ್ರಪಂಚವೇ ಒಂದು ದೊಡ್ಡ ಅಚ್ಚರಿಯ ಗೂಡು. ಅವುಗಳ ಜೀವನಶೈಲಿ ಮತ್ತು ಬೇಟೆಯಾಡುವ ರೀತಿ ಒಮ್ಮೊಮ್ಮೆ ನಮ್ಮ ಊಹೆಗೂ ನಿಲುಕುವುದಿಲ್ಲ. ಈಗ ಅಂತಹುದೇ ಒಂದು ರೋಮಾಂಚಕಾರಿ ವಿಡಿಯೋ ಅಂತರ್ಜಾಲದಲ್ಲಿ (Wildlife Hunt) ಭಾರಿ ಸದ್ದು ಮಾಡುತ್ತಿದೆ. ಪರ್ಪಲ್ ಹೆರಾನ್ (Purple Heron) ಜಾತಿಯ ಕೊಕ್ಕರೆಯೊಂದು ಹಾವನ್ನು ಬೇಟೆಯಾಡಿ, ಅದನ್ನು ಗಾಳಿಯಲ್ಲಿ ತೂರಿ ಆಟವಾಡಿರುವ ದೃಶ್ಯವೊಂದು ನೋಡುಗರನ್ನು ನಿಬ್ಬೆರಗಾಗಿಸಿದೆ.

Wildlife hunt featuring a Purple Heron catching and tossing a snake into the air before swallowing it.

Wildlife Hunt – ಹಾವೇ ಈ ಕೊಕ್ಕರೆಗೆ ಆಟಿಕೆ!

ಕೊಕ್ಕರೆಗಳು ಸಾಮಾನ್ಯವಾಗಿ ಕೆರೆ, ನದಿಗಳಲ್ಲಿ ಮೀನು ಅಥವಾ ಕಪ್ಪೆಗಳನ್ನು ಹಿಡಿದು ತಿನ್ನುವುದನ್ನು ನಾವು ನೀವೆಲ್ಲಾ ನೋಡಿರುತ್ತೇವೆ. ಆದರೆ ಈ ವಿಡಿಯೋದಲ್ಲಿರುವ ಕೊಕ್ಕರೆಯ ಸ್ಟೈಲ್ ಸ್ವಲ್ಪ ಡಿಫರೆಂಟ್. ಇದು ಏಕಾಏಕಿ ಒಂದು ಸಣ್ಣ ಹಾವನ್ನೇ ತನ್ನ ಟಾರ್ಗೆಟ್ ಮಾಡಿಕೊಂಡಿದೆ. ಅಚ್ಚರಿಯ ಸಂಗತಿ ಎಂದರೆ, ಹಾವನ್ನು ಹಿಡಿದ ತಕ್ಷಣ ಅದು ಗುಳುಕ್ ಎಂದು ನುಂಗಿಲ್ಲ. ಬದಲಿಗೆ ತನ್ನ ಉದ್ದವಾದ ಕೊಕ್ಕಿನಲ್ಲಿ ಹಾವನ್ನು ಕಚ್ಚಿ, ಗಾಳಿಯಲ್ಲಿ ಮೇಲಕ್ಕೆ ಹಾರಿಸುತ್ತಾ ಮತ್ತೆ ಕ್ಯಾಚ್ ಹಿಡಿಯುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ನೋಡಲು ಇದು ಯಾವುದೋ ಆಟಿಕೆಯ ಜೊತೆ ಆಟವಾಡುತ್ತಿರುವಂತೆ ಭಾಸವಾಗುತ್ತದೆ. Read this also : ಬರಿಗೈಯಲ್ಲಿಯೇ ಹೆಡೆಬಿಚ್ಚಿದ ನಾಗರಹಾವನ್ನು ಹಿಡಿದ ಬ್ಯೂಟಿ, ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡಿದ ವಿಡಿಯೋ..!

ಗಾಳಿಯಲ್ಲಿ ಗಿರಕಿ ಹೊಡೆದ ಹಾವು

ವಿಡಿಯೋದಲ್ಲಿ (Viral Video Here) ನೀವು ಗಮನಿಸಿದರೆ, ಕೊಕ್ಕರೆ ಹಾವನ್ನು ಮೇಲಕ್ಕೆ ಎಸೆದಾಗ ಆ ಪಾಪದ ಜೀವಿ ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಾ ಕೆಳಗೆ ಬೀಳುವುದನ್ನು ನೋಡಬಹುದು. ಆದರೆ ಆ ಚಾಲಾಕಿ ಕೊಕ್ಕರೆ ಮಾತ್ರ, ಹಾವು ನೆಲಕ್ಕೆ ಬೀಳುವ ಮುನ್ನವೇ ಲಪಕ್ಕನೆ ಹಿಡಿದು, ಕಡೆಗೆ ತನ್ನ ಹೊಟ್ಟೆಗೇರಿಸಿಕೊಂಡಿದೆ. ವನ್ಯಜೀವಿ ಛಾಯಾಗ್ರಾಹಕರ ಪ್ರಕಾರ, ಪಕ್ಷಿಗಳು ತಮ್ಮ ಬೇಟೆಯನ್ನು ಸಂಪೂರ್ಣವಾಗಿ ಸಾಯಿಸಲು ಅಥವಾ ಸುಲಭವಾಗಿ ಗಂಟಲೊಳಗೆ ಇಳಿಸಿಕೊಳ್ಳಲು ಅನುಕೂಲವಾಗುವಂತೆ ಹೀಗೆ ಗಾಳಿಯಲ್ಲಿ ತೂರಿ ಕಸರತ್ತು ಮಾಡುತ್ತವೆಯಂತೆ.

Wildlife hunt featuring a Purple Heron catching and tossing a snake into the air before swallowing it.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸೆನ್ಸೇಷನ್

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ‘The tossing by purple heron’ ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳಲಾಗಿರುವ ಈ ಅಪರೂಪದ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಈಗಾಗಲೇ ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವನ್ಯಜೀವಿ ಪ್ರೇಮಿಗಳಂತೂ ಈ ದೃಶ್ಯ ಕಂಡು ದಂಗಾಗಿದ್ದು, “ಪ್ರಕೃತಿಯ ನಿಯಮವೇ ಇಷ್ಟು ಕ್ರೂರ”, “ಇಂಥ ರೇರ್ ದೃಶ್ಯವನ್ನು ಲೈಫ್‌ನಲ್ಲಿ ಒಮ್ಮೆ ಮಾತ್ರ ನೋಡಲು ಸಾಧ್ಯ” ಎಂದು ತಮ್ಮ ಅನಿಸಿಕೆಗಳನ್ನು ಕಾಮೆಂಟ್‌ಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt