HomeStatePF Withdrawal : ಪಿಎಫ್ ಆಫೀಸ್‌ ಗೆ ಅಲೆಯೋ ಕಾಲ ಮುಗೀತು: ಇನ್ಮುಂದೆ ಎಟಿಎಂನಲ್ಲಿ ಸಿಗುತ್ತೆ...

PF Withdrawal : ಪಿಎಫ್ ಆಫೀಸ್‌ ಗೆ ಅಲೆಯೋ ಕಾಲ ಮುಗೀತು: ಇನ್ಮುಂದೆ ಎಟಿಎಂನಲ್ಲಿ ಸಿಗುತ್ತೆ ನಿಮ್ಮ ಕಷ್ಟದ ಕಾಲದ ಹಣ!

ನಿಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಕಟ್ ಆಗೋ ಪಿಎಫ್ ಹಣವನ್ನ ಹಿಂಪಡೆಯೋದು ಅಂದ್ರೆ ಒಂದು ಕಾಲದಲ್ಲಿ ಬೆಟ್ಟ ಅಗೆದಂತೆ ಇತ್ತು. “ನಮ್ಮ ಹಣ ನಮಗೆ ಸಿಗೋಕೆ ಇಷ್ಟೊಂದು ಸರ್ಕಸ್ ಮಾಡಬೇಕಾ?” ಅಂತ ಎಷ್ಟೋ ಜನ ಬೇಸರ ಮಾಡಿಕೊಂಡಿದ್ದೂ ಉಂಟು. ಆದರೆ ಈಗ ಕಾಲ ಬದಲಾಗಿದೆ! ಇನ್ಮುಂದೆ ನೀವು ಪಿಎಫ್ ಹಣಕ್ಕಾಗಿ (PF Withdrawal) ಆಫೀಸ್‌ಗಳಿಗೆ ಅಲೆಯಬೇಕಿಲ್ಲ ಅಥವಾ ಆನ್‌ಲೈನ್‌ನಲ್ಲಿ ದಿನಗಟ್ಟಲೆ ಸ್ಟೇಟಸ್ ಚೆಕ್ ಮಾಡಬೇಕಿಲ್ಲ.

PF Withdrawal Through ATM and UPI Under EPFO 3.0 for Salaried Employees

ನಿಮ್ಮ ಹತ್ತಿರದ ಎಟಿಎಂ ಸೆಂಟರ್‌ಗೆ ಹೋಗಿ ಕಾರ್ಡ್ ಉಜ್ಜಿದರೆ ಅಥವಾ ಮೊಬೈಲ್‌ನಲ್ಲಿ ಯುಪಿಐ ಪಿನ್ ಒತ್ತಿದರೆ ಸಾಕು, ನಿಮ್ಮ ಪಿಎಫ್ ಹಣ ನೇರವಾಗಿ ನಿಮ್ಮ ಕೈ ಸೇರಲಿದೆ. ಕೇಂದ್ರ ಸರ್ಕಾರದ ಈ ಒಂದು ‘ಮಾಸ್ಟರ್ ಪ್ಲಾನ್’ ಖಾಸಗಿ ಕಂಪನಿ ಉದ್ಯೋಗಿಗಳ ಪಾಲಿಗೆ ನಿಜಕ್ಕೂ ಬಂಪರ್ ಲಾಟರಿ ಹೊಡೆದಂತಿದೆ.

PF Withdrawal – ಬರುತ್ತಿದೆ ಇಪಿಎಫ್‌ಒ 3.0: ಏನಿದರ ವಿಶೇಷತೆ?

ಸದ್ಯ ಇಪಿಎಫ್‌ಒ ಸಂಸ್ಥೆಯು ತನ್ನ ಸಂಪೂರ್ಣ ತಾಂತ್ರಿಕ ವ್ಯವಸ್ಥೆಯನ್ನು ‘ಇಪಿಎಫ್‌ಒ 3.0’ ಆವೃತ್ತಿಗೆ ಮೇಲ್ದರ್ಜೆಗೇರಿಸುತ್ತಿದೆ. ಈ ಅತ್ಯಾಧುನಿಕ ಡಿಜಿಟಲ್ ಬದಲಾವಣೆಯ ದೊಡ್ಡ ಲಾಭವೇ ಎಟಿಎಂ ಮತ್ತು ಯುಪಿಐ ಸೌಲಭ್ಯ. ಮೂಲಗಳ ಪ್ರಕಾರ, ಮೇ ತಿಂಗಳ ಅಂತ್ಯದ ವೇಳೆಗೆ ಈ ತಂತ್ರಜ್ಞಾನವು ಬಳಕೆಗೆ ಬರಲಿದ್ದು, 2026ರ ಆರಂಭದ ವೇಳೆಗೆ ಎಲ್ಲರಿಗೂ ಲಭ್ಯವಾಗಲಿದೆ. ಆಸ್ಪತ್ರೆಯ ತುರ್ತು ವೆಚ್ಚ ಅಥವಾ ಮದುವೆಯಂತಹ ಅನಿವಾರ್ಯ ಸಂದರ್ಭಗಳಲ್ಲಿ ಹಣಕ್ಕಾಗಿ ವಾರಗಟ್ಟಲೆ ಕಾಯುವ ಅಗತ್ಯವಿಲ್ಲದಂತೆ ಈ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ಲಕ್ಷಗಳ ಮೊತ್ತ ಇನ್ನು ಕ್ಷಣಾರ್ಧದಲ್ಲಿ ನಿಮ್ಮ ಕೈ ಸೇರಲಿದೆ

ಈಗಾಗಲೇ ಆಟೋಮ್ಯಾಟಿಕ್ ಕ್ಲೈಮ್ ಸೆಟಲ್‌ಮೆಂಟ್ (PF Withdrawal) ಮಿತಿಯನ್ನು 1 ಲಕ್ಷದಿಂದ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಮೂಲಕ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಹೊಸ ನಿಯಮದ ಪ್ರಕಾರ, ನಿಮ್ಮ ಖಾತೆಯಲ್ಲಿರುವ ಒಟ್ಟು ಮೊತ್ತದ ಸುಮಾರು ಶೇ. 50 ರಿಂದ ಶೇ. 75ರಷ್ಟು ಹಣವನ್ನು ನೀವು ನೇರವಾಗಿ ಎಟಿಎಂ ಮೂಲಕ ವಿತ್‌ಡ್ರಾ ಮಾಡಲು ಅವಕಾಶ ಸಿಗಬಹುದು. ಈ ಮೊದಲು ಹಣ ಪಡೆಯಲು ಇದ್ದ ಹಲವು ಸಂಕೀರ್ಣ ನಿಯಮಗಳನ್ನು ಕೇವಲ ಮೂರು ಸರಳ ವಿಭಾಗಗಳಿಗೆ ಇಳಿಸಿರುವುದು ಸಾಮಾನ್ಯ ಜನರಿಗೂ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಸುಲಭವಾಗಿಸಿದೆ. Read this also : EPFO ಗುಡ್ ನ್ಯೂಸ್: ನಿಮ್ಮ ಪಿಎಫ್ ಖಾತೆಯಲ್ಲಿ ಹಣವಿದೆಯೇ? ಹಾಗಿದ್ದರೆ ನೇರವಾಗಿ ನಿಮ್ಮ ಬ್ಯಾಂಕ್‌ ಖಾತೆಗೆ ಬರಲಿದೆ ಹಣ!

ನಿಮ್ಮ ಫೋನ್ ಮತ್ತು ಎಟಿಎಂ ಕಾರ್ಡ್ ಸಾಕು

ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬ ಕುತೂಹಲ ಎಲ್ಲರಲ್ಲಿದೆ. ಸರ್ಕಾರವು ಎರಡು ಪ್ರಮುಖ ದಾರಿಗಳನ್ನು ಮುಕ್ತವಾಗಿರಿಸಿದೆ. ಒಂದು ವೇಳೆ ನಿಮ್ಮ ಯುಎಎನ್ (UAN) ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸರಿಯಾಗಿ (PF Withdrawal) ಲಿಂಕ್ ಆಗಿದ್ದರೆ, ನೀವು ದಿನನಿತ್ಯ ಬಳಸುವ ಡೆಬಿಟ್ ಕಾರ್ಡ್ ಮೂಲಕವೇ ಹಣ ಪಡೆಯಬಹುದು. ಇಲ್ಲವಾದಲ್ಲಿ, ಇಪಿಎಫ್‌ಒ ವತಿಯಿಂದಲೇ ವಿಶೇಷ ಪಿಎಫ್ ಕಾರ್ಡ್‌ಗಳನ್ನು ನೀಡುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಇನ್ನು ಯುಪಿಐ ಪ್ರಿಯರಿಗಂತೂ ಫೋನ್ ಪೇ ಅಥವಾ ಗೂಗಲ್ ಪೇ ಮಾದರಿಯಲ್ಲೇ ಹಣವನ್ನು ವರ್ಗಾಯಿಸಿಕೊಳ್ಳುವ ಅವಕಾಶ ಸಿಗಲಿದೆ.

PF Withdrawal Through ATM and UPI Under EPFO 3.0 for Salaried Employees

ಕಚೇರಿ ಅಲೆದಾಟ ಹಾಗೂ ದಾಖಲೆಗಳ ಕಿರಿಕಿರಿ ಇನ್ನು ಇತಿಹಾಸ

ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ (PF Withdrawal) ಅವರ ದೂರದೃಷ್ಟಿಯ ಈ ಯೋಜನೆಯು ಡಿಜಿಟಲ್ ಇಂಡಿಯಾದ ಮತ್ತೊಂದು ಮೈಲಿಗಲ್ಲು. ಈ ಹಿಂದೆ ಪಿಎಫ್ ಆಫೀಸ್‌ಗಳಿಗೆ ಅಲೆಯುವುದು, ಹತ್ತಾರು ಫಾರ್ಮ್‌ಗಳನ್ನು ತುಂಬುವುದು ಮತ್ತು ಕಂಪನಿಯ ಅನುಮತಿಗಾಗಿ ಕಾಯುವ ಕಿರಿಕಿರಿ ಇತ್ತು. ಆದರೆ ಇಪಿಎಫ್‌ಒ 3.0 ಜಾರಿಯಾದ ಮೇಲೆ ಇದೆಲ್ಲವೂ ಇತಿಹಾಸವಾಗಲಿದೆ. ಎಲ್ಲವೂ ಆನ್‌ಲೈನ್ ಮತ್ತು ಪಾರದರ್ಶಕವಾಗಿ ನಡೆಯುವುದರಿಂದ ಮಧ್ಯವರ್ತಿಗಳ ಕಾಟವೂ ಇರುವುದಿಲ್ಲ. ಕಳೆದ ವರ್ಷವಷ್ಟೇ 8 ಕೋಟಿಗೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಹೊಸ ವ್ಯವಸ್ಥೆ ಬಂದ ಮೇಲೆ ಇದು ಇನ್ನಷ್ಟು ವೇಗವಾಗಿ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular