2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC Result 2025-26) ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಶೇ.95.95 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಕಳೆದ ವರ್ಷ ಶೇ.52.54 ರಷ್ಟು ಫಲಿತಾಂಶ ಪಡೆದುಕೊಂಡಿತ್ತು. ಈ ಸಾಲಿನಲ್ಲಿ 593 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 569 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೇಷ್ಟಾ 610 ಅಂಕಗಳನ್ನು ಪಡೆದು ತಾಲೂಕಿನ ಟಾಪರ್ ಆಗಿದ್ದಾರೆ.

SSLC Result 2025-26 – ನೂರಕ್ಕೆ ನೂರು ಫಲಿತಾಂಶ ನೀಡಿದ ಶಾಲೆಗಳು
ಗುಡಿಬಂಡೆ ತಾಲೂಕಿನ 12 ಸರ್ಕಾರಿ, 2 ವಸತಿ ಶಾಲೆ ಹಾಗೂ ಒಂದು ಅನುದಾನಿತ ಪ್ರೌಢಶಾಲೆ ಸೇರಿ ಒಟ್ಟು 15 ಶಾಲೆಗಳಿದ್ದು, 593 ವಿದ್ಯಾರ್ಥಿಗಳು ಪರೀಕ್ಷೆ ನೊಂದಣಿಯಾಗಿದ್ದರು. ಈ ಪೈಕಿ 276 ಮಂದಿ ಬಾಲಕರು ಹಾಗೂ 293 ಮಂದಿ ಬಾಲಕೀಯರು ಉತ್ತೀರ್ಣರಾಗಿದ್ದಾರೆ. ಇನ್ನೂ ಒಟ್ಟು 15 ಶಾಲೆಗಳ ಪೈಕಿ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆ, (SSLC Result 2025-26) ಕೊಂಡರೆಡ್ಡಿಹಳ್ಳಿ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆ, ತಿರುಮಣಿ ಸರ್ಕಾರಿ ಪ್ರೌಢಶಾಲೆ, ಸೋಮೇನಹಳ್ಳಿ ಇಂದಿರಾಗಾಂಧಿ ವಸತಿ ಶಾಲೆ, ಹಂಪಸಂದ್ರ ಸರ್ಕಾರಿ ಪ್ರೌಢಶಾಲೆ, ಬೀಚಗಾನಹಳ್ಳಿ ಸರ್ಕಾರಿ ಪ್ರೌಢಶಾಲೆ, ಉಲ್ಲೋಡು ಸರ್ಕಾರಿ ಪ್ರೌಢಶಾಲೆ ಹಾಗೂ ವರ್ಲಕೊಂಡ ಸರ್ಕಾರಿ ಪ್ರೌಢಶಾಲೆ ಶೇ.100 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ.

Read this also : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ ಗಮನಿಸಿ: ನಾಳೆಯೇ (ಏಪ್ರಿಲ್ 23) ಫಲಿತಾಂಶ ಪ್ರಕಟ! ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಇತರೆ ಶಾಲೆಗಳ ಫಲಿತಾಂಶ
ಇನ್ನೂ (SSLC Result 2025-26) ಜಿ.ಪಿ. ನಗರದ ಆದರ್ಶ ವಿದ್ಯಾಲಯವು ಶೇ. 98.70, ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆ 95.59, ಸೋಮೇನಹಳ್ಳಿ ಸರ್ಕಾರಿ ಪ್ರೌಢಶಾಲೆ 92.31, ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢಶಾಲೆ 92.11, ಗುಡಿಬಂಡೆ ಶ್ರೀ ಅರವಿಂದ ಅನುದಾನಿತ ಪ್ರೌಢಶಾಲೆ 89.79, ಎಲ್ಲೋಡು ಸರ್ಕಾರಿ ಪ್ರೌಢಶಾಲೆ 88.24, ಚೆಂಡೂರು ಸರ್ಕಾರಿ ಪ್ರೌಢಶಾಲೆ 85.71 ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಹೆಣ್ಣು ಮಕ್ಕಳೇ ಮೇಲುಗೈ: ಟಾಪ್ 3 ಸ್ಥಾನ ವಿದ್ಯಾರ್ಥಿನಿಯರ ಪಾಲು!
ಇನ್ನೂ (SSLC Result 2025-26) ಗುಡಿಬಂಡೆ ಪಟ್ಟಣ ಸರ್ಕಾರಿ ಬಾಲಕೀಯರ ಪ್ರೌಢಶಾಲೆ ವಿದ್ಯಾರ್ಥಿನಿ ಶ್ರೇಷ್ಟ 610 ಅಂಕಗಳನ್ನು ಪಡೆದುಕೊಂಡು ತಾಲೂಕಿಗೆ ಪ್ರಥಮ ಸ್ಥಾನವನ್ನು ಎಂ.ಸಂಸ್ಕೃತಿ 605 ಅಂಕಗಳನ್ನು ಪಡೆದುಕೊಂಡು ದ್ವಿತೀಯ ಸ್ಥಾನವನ್ನು ಹಾಗೂ ತಿರುಮಣಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಜಿ.ಪಲ್ಲವಿ 599 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
