HomeStateAwareness : ಗುಡಿಬಂಡೆಯಲ್ಲಿ ರೈತರಿಗೆ ಉಚಿತ ಹೆಲ್ಮೆಟ್ ವಿತರಿಸಿ ಜಾಗೃತಿ ಮೂಡಿಸಿದ ಧಾತ್ರಿ ಸೇವಾ ಟ್ರಸ್ಟ್

Awareness : ಗುಡಿಬಂಡೆಯಲ್ಲಿ ರೈತರಿಗೆ ಉಚಿತ ಹೆಲ್ಮೆಟ್ ವಿತರಿಸಿ ಜಾಗೃತಿ ಮೂಡಿಸಿದ ಧಾತ್ರಿ ಸೇವಾ ಟ್ರಸ್ಟ್

ನಾವು ಸಾವಿರಾರು ರೂಪಾಯಿ ಕೊಟ್ಟು ಮೊಬೈಲ್ ಫೋನ್ ಖರೀದಿಸುತ್ತೇವೆ, ಅದು ಕೆಳಗೆ ಬಿದ್ದು ಒಡೆಯಬಾರದು ಎಂದು ಅದಕ್ಕೆ ಗ್ಲಾಸ್ ಗಾರ್ಡ್, ಕವರ್ ಹಾಕಿ ಅತಿ ಹೆಚ್ಚು ಕಾಳಜಿ ವಹಿಸುತ್ತೇವೆ. ಆದರೆ, (Awareness) ಅದಕ್ಕಿಂತಲೂ ಕೋಟಿ ಪಟ್ಟು ಅಮೂಲ್ಯವಾದ ನಮ್ಮ ಜೀವದ ರಕ್ಷಣೆಗೆ ಮಾತ್ರ ಅಸಡ್ಡೆ ಮಾಡುತ್ತೇವೆ. ಈ ಕಟು ಸತ್ಯವನ್ನು ಸಾರುತ್ತಾ, ಗುಡಿಬಂಡೆಯ ರಸ್ತೆಗಳಲ್ಲಿ ಸಂಚರಿಸುವ ಸವಾರರಲ್ಲಿ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ನಡೆಯಿತು.

Road safety awareness campaign where free helmets are distributed to farmers riding two-wheelers in Gudibande

ಧಾತ್ರಿ ಸೇವಾ ಟ್ರಸ್ಟ್, ಗುಡಿಬಂಡೆ ಯುವಕರ ಬಳಗ ಹಾಗೂ ಗ್ರೀನ್ ಇಂಡಿಯಾ ಫೋರಂ ವತಿಯಿಂದ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸಲು ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Awareness – ರೈತರ ಸುರಕ್ಷತೆಗೆ ಆದ್ಯತೆ

ಗುಡಿಬಂಡೆ ಮತ್ತು ಬಾಗೇಪಲ್ಲಿ ಪಟ್ಟಣಗಳಿಗೆ ನಿತ್ಯವೂ ನೂರಾರು ರೈತರು ದ್ವಿಚಕ್ರ ವಾಹನಗಳಲ್ಲಿ ತರಕಾರಿ ಚೀಲಗಳನ್ನು ಹೊತ್ತು ಮಾರುಕಟ್ಟೆಗೆ ಬರುತ್ತಾರೆ. ಇವರ ಸುರಕ್ಷತೆಯನ್ನೇ ಗುರಿಯಾಗಿಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿತ್ತು. ಮಾರುಕಟ್ಟೆಗೆ ಬರುತ್ತಿದ್ದ ರೈತರನ್ನು ತಡೆದು, ಅವರಿಗೆ ಹೆಲ್ಮೆಟ್ ತೊಡಿಸಿ, “ಪ್ರತಿನಿತ್ಯ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ರಕ್ಷಣೆಗೆ ಅಗತ್ಯ” ಎಂದು ಮನವಿ ಮಾಡಲಾಯಿತು.

“ಜೀವ ಇದ್ದರೆ ಮಾತ್ರ ಜೀವನ” – ಸೈಯದ್ ಸಿದ್ದಿಕ್

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರೀನ್ ಇಂಡಿಯಾ ಫೋರಂ ಅಧ್ಯಕ್ಷ ಸೈಯದ್ ಸಿದ್ದಿಕ್ ಅವರು, “ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿ ಕುಳಿತವರು ಹೆಲ್ಮೆಟ್ ಧರಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಅಪಘಾತಗಳು ಸಂಭವಿಸಿದಾಗ ಜೀವಹಾನಿಯನ್ನು ತಡೆಯುವುದೇ ಈ ಅಭಿಯಾನದ ಉದ್ದೇಶ. ಪ್ರತಿಯೊಬ್ಬರಿಗೂ ಅವರ ಜೀವ ಅಮೂಲ್ಯ, (Awareness)  ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತಿರುತ್ತದೆ ಎಂಬ ಅರಿವಿರಲಿ” ಎಂದು ಕಿವಿಮಾತು ಹೇಳಿದರು.

ಪೊಲೀಸರ ಭಯ ಬೇಡ, ಜೀವದ ಭಯ ಇರಲಿ!

ಧಾತ್ರಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ. ಪ್ರಶಾಂತ್ ಮಾತನಾಡಿ, “ಜನರು ಪೊಲೀಸರು ದಂಡ ಹಾಕುತ್ತಾರೆ ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸುತ್ತಾರೆ. ಆದರೆ ಇದು ಕಾನೂನಿಗಾಗಿ ಅಲ್ಲ, ನಿಮ್ಮ ಸ್ವಂತ ರಕ್ಷಣೆಗೆ ಎಂಬುದು ನೆನಪಿರಲಿ. ಮೊಬೈಲ್ ಫೋನಿಗೆ ನೀಡುವ ಕಾಳಜಿಯನ್ನು ಜೀವಕ್ಕೆ ನೀಡಿ. ತಲೆಗೆ ಪೆಟ್ಟಾದರೆ ಚೇತರಿಸಿಕೊಳ್ಳುವುದು ಕಷ್ಟ, ಹಾಗಾಗಿ ಹೆಲ್ಮೆಟ್ (Awareness) ಧರಿಸುವುದನ್ನು ರೂಢಿಸಿಕೊಳ್ಳಿ” ಎಂದು ಸಲಹೆ ನೀಡಿದರು. Read this also : ತೆರಿಗೆ ಪಾವತಿಸದಿದ್ದರೆ ಸೌಲಭ್ಯ ಕಡಿತ; ಲೇಔಟ್ ಮಾಲೀಕರಿಗೆ ತಿರುಮಣಿ ಪಿಡಿಒ ಸೂಚನೆ…!

Road safety awareness campaign where free helmets are distributed to farmers riding two-wheelers in Gudibande

ಹಾಜರಿದ್ದ ಪ್ರಮುಖರು

ಈ ವೇಳೆ (Awareness) ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಚೇಳೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಕೆ.ಆನಂದ್, ತಾಲ್ಲೂಕು ಮಡಿವಾಳ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್, ಗುಡಿಬಂಡೆ  ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಾಥ್, ಯುವ ಕಾಂಗ್ರೆಸ್ ಮುಖಂಡ ನವೀನ್, ಪತ್ರಕರ್ತ ಸುಬ್ಬು ಸೇರಿದಂತೆ ಹಲವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular