Viral Video : ಎರಡನೇ ಮದುವೆಗೆ ಅನುಮತಿ ಕೇಳಲು ಬಂದ ಪತಿಗೆ ಕೋರ್ಟ್ ಆವರಣದಲ್ಲೇ ಪತ್ನಿ, ಮಕ್ಕಳಿಂದ ‘ಧರ್ಮದೇಟು’!

ಸಿನಿಮಾ ಸ್ಟೈಲ್‌ನಲ್ಲಿ ಪತ್ನಿ ಮತ್ತು ಮಕ್ಕಳು ಸೇರಿ ಪತಿಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ಮಧ್ಯಪ್ರದೇಶದ ಸೆಹೋರ್ ಜಿಲ್ಲಾಧಿಕಾರಿ ಕಚೇರಿ (Collectorate) ಆವರಣದಲ್ಲಿ ನಡೆದಿದೆ. ಮೊದಲ ಪತ್ನಿ ಮತ್ತು ಮಕ್ಕಳಿರುವಾಗಲೇ ಎರಡನೇ ಮದುವೆಗೆ ಅನುಮತಿ ಕೇಳಲು ಬಂದ ವ್ಯಕ್ತಿಗೆ ಈಗ ಗೂಸಾ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Viral Video) ಭಾರಿ ವೈರಲ್ ಆಗುತ್ತಿದೆ.

Viral video shows wife and children confronting a man seeking permission for second marriage at Sehore district collectorate in Madhya Pradesh

Viral Video – ಅಸಲಿಗೆ ನಡೆದಿದ್ದೇನು?

ಕನ್ನೌಜ್ ಮಿರ್ಜಿ ನಿವಾಸಿಯಾದ ಸಂಜು ಸಿಂಗ್ ಎಂಬ ವ್ಯಕ್ತಿ, ಎರಡನೇ ಮದುವೆಯಾಗಲು ಕಾನೂನುಬದ್ಧ ಅನುಮತಿ ಕೋರಿ ಎಡಿಎಂ (ADM) ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಬಂದಿದ್ದನು. ಈ ವಿಷಯ ಹೇಗೋ ಆತನ ಮೊದಲ ಪತ್ನಿಗೆ ತಿಳಿದಿದೆ. ಕೂಡಲೇ ತನ್ನ ಮಕ್ಕಳು ಮತ್ತು ಸಂಬಂಧಿಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಧಾವಿಸಿದ ಪತ್ನಿ, ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಮಾತಿನ ಚಕಮಕಿ; ಕೈ ಕೈ ಮಿಲಾಯಿಸಿದ ಕುಟುಂಬಸ್ಥರು

ಆರಂಭದಲ್ಲಿ ಮಾತಿನ ಚಕಮಕಿಯಿಂದ ಶುರುವಾದ ಜಗಳ, ನೋಡನೋಡುತ್ತಿದ್ದಂತೆಯೇ ವಿಕೋಪಕ್ಕೆ ತಿರುಗಿದೆ. ಪತ್ನಿ ಮತ್ತು ಮಕ್ಕಳು ಸಂಜು ಸಿಂಗ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ, ಸಂಜು ಮದುವೆಯಾಗಲು ಉದ್ದೇಶಿಸಿದ್ದ ಮಹಿಳೆಯ ಮೇಲೂ ಮೊದಲ ಪತ್ನಿ ಮತ್ತು ಮಕ್ಕಳು ಆಕ್ರೋಶ ಹೊರಹಾಕಿದ್ದಾರೆ (Viral Video) ಎನ್ನಲಾಗಿದೆ.

Read this also : ಸೋಷಿಯಲ್ ಮೀಡಿಯಾ ಫ್ರೆಂಡ್ ಅಸಲಿ ಮುಖ! ಸಹಾಯದ ಹೆಸರಲ್ಲಿ ಸಾಲ ಕೊಟ್ಟು, ಮಂಚಕ್ಕೆ ಕರೆದ ಕಾಮುಕ – ಮುಂದೇನಾಯ್ತು ನೋಡಿ?

Viral video shows wife and children confronting a man seeking permission for second marriage at Sehore district collectorate in Madhya Pradesh

Viral Video – ವೈರಲ್ ಆದ ವಿಡಿಯೋ

ಕೋರ್ಟ್ ಆವರಣದಂತಹ ಗಂಭೀರ ಪ್ರದೇಶದಲ್ಲಿ ನಡೆದ ಈ ಹೈ-ವೋಲ್ಟೇಜ್ ಡ್ರಾಮಾವನ್ನು ಅಲ್ಲಿದ್ದ ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಪರಸ್ಪರ ಕಿರುಚಾಡುತ್ತಾ, ಹೊಡೆದಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here 

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳ ಬಗ್ಗೆ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಒಟ್ಟಿನಲ್ಲಿ, ಕಾನೂನಿನ ಅನುಮತಿ ಪಡೆಯಲು ಹೋದ (Viral Video) ವ್ಯಕ್ತಿ ಪತ್ನಿಯ ಕೈಗೆ ಸಿಕ್ಕಿಬಿದ್ದು ಸಂಕಷ್ಟಕ್ಕೆ ಸಿಲುಕಿದ್ದಾನೆ.

Leave a Comment

Your email address will not be published. Required fields are marked *

Scroll to Top