ಹಿಂದಿ ಹಾಡಿಗೆ ವಿದ್ಯಾರ್ಥಿಯೊಂದಿಗೆ ನೃತ್ಯ ಮಾಡಿದ ಶಿಕ್ಷಕಿ, ವೈರಲ್ ಆದ ವಿಡಿಯೋ….!

ಇತ್ತೀಚಿಗೆ ಶಾಲಾ ವಾರ್ಷಿಕೋತ್ಸವ, ಸೆಂಡ್ ಆಫ್, ಫೇರ್‍ ವೆಲ್ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿಯರೂ ಸಹ ನೃತ್ಯ ಮಾಡುವುದು ಸಾಮಾನ್ಯವಾಗಿದೆ. ಫೇರ್‍ ವೆಲ್ ಕಾರ್ಯಕ್ರಮ ಎಂದ ಕೂಡಲೇ ಕೊಂಚ ಸಂಭ್ರಮ ಕೊಂಚ ಭಾವುಕ ಎರಡೂ ಇರುತ್ತದೆ. ಇದೀಗ ಫೇರ್‍ ವೆಲ್ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯೊಬ್ಬರು ನೃತ್ಯ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಹಿಂದಿ ಹಾಡೊದಂಕ್ಕೆ ವಿದ್ಯಾರ್ಥಿ ಹಾಗೂ ಶಿಕ್ಷಕಿ ಮಾಡಿದ ನೃತ್ಯ ಇದೀಗ ಭಾರಿ ಸದ್ದು ಮಾಡುತ್ತಿದೆ.

ಶಾಲೆಯೊಂದರ ಬೀಳ್ಕೊಡುಗೆ ಕಾರ್ಯಕ್ರಮವೊಂದರಲ್ಲಿ ಶಿಕ್ಷಕಿ ಹಾಗೂ ವಿದ್ಯಾರ್ಥಿ ನೃತ್ಯ ಮಾಡಿದ್ದಾರೆ. ಈ ಜೋಡಿಯ ನೃತ್ಯ ನೋಡಿ ಎಲ್ಲರೂ ಅಚ್ಚರಿಯಾಗಿದ್ದಾರೆ. ತಮ್ ಹಿ ಹೋ  ಎಂಬ ಹಿಂದಿ ಹಾಡಿಗೆ ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಕಪಲ್ ಡ್ಯಾನ್ಸ್ ಮಾಡಿದ್ದಾರೆ. ಈ ರೋಮ್ಯಾಂಟಿಕ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಈ ಬಿಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಜರಿದ್ದರು. ತಮ್ಮ ಶಾಲಾ ಅವಧಿಯಲ್ಲಿ ನಡೆದಂತಹ ಸಿಹಿ ಹಾಗೂ ಕಹಿ ಘಟನೆಗಳನ್ನು ಮೆಲುಕು ಹಾಕುವಂತಹ ಅನೇಕ ಚಟುವಟಿಕೆಗಳನ್ನು ಸಹ ಆಯೋಜಿಸಲಾಗಿತ್ತು. ಜೊತೆಗೆ ಕೊನೆಯ ಕ್ಷಣಗಳನ್ನು ಸದಾ ನೆನಪಾಗಿರುವಂತೆ ಡ್ಯಾನ್ಸ್ ಮಾಡಲು ಅವಕಾಶ ಸಹ ನೀಡಲಾಗಿತ್ತು.

Female teacher dance with student tum hi ho song 1

ಈ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಕೆಲವೊಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಕೊನೆಯಲ್ಲಿ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಅನೇಕ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಇದೇ ಸಮಯದಲ್ಲಿ ಬಾಲಿವುಡ್ ಆಶಿಖಿ 2 ಸಿನೆಮಾದ ತುಮ್ ಹಿ ಹೋ ಎಂಬ ಹಾಡು ಪ್ಲೇ ಆಗುತ್ತಿದ್ದಂತೆ ವಿದ್ಯಾರ್ಥಿ ನೇರವಾಗಿ ಟೀಚರ್‍ ಬಳಿ ಬಂದು ಕೈಹಿಡಿದು ವೇದಿಕೆಗೆ ಕರೆತಂದಿದ್ದಾರೆ. ಬಳಿಕ ಟೀಚರ್‍ ಜೊತೆಗೆ ಹೆಜ್ಜೆ ಹಾಕಿದ್ದಾನೆ. ಟೀಚರ್‍ ಸಹ ಹಿಂದೆ ಮುಂದೆ ನೋಡದೇ ರೊಮ್ಯಾಂಟಿಕ್ ಹಾಡಿಗೆ ನೃತ್ಯ ಮಾಡಿದ್ದಾರೆ.

ಇನ್ನೂ ವಿದ್ಯಾರ್ಥಿ ಹಾಗೂ ಟೀಚರ್‍ ನೃತ್ಯ ನೋಡುತ್ತಿದ್ದಂತೆ ಅಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಚಪ್ಪಾಳೆ ಮೂಲಕ ಮತಷ್ಟು ಹುರಿದುಂಬಿಸಿದ್ದಾರೆ. ಈ ವಿಡಿಯೋವನ್ನು ಕುಶಾಲ್ ಎಂ.ಜೆ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ನಮ್ಮ ಶಾಲೆಯಲ್ಲಿ ಅಂತಹ ಅವಕಾಶವಿರಲಿಲ್ಲ, ನಮಗೂ ಅಂತಹ ಅವಕಾಶ ಬರಬಾರದೇ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿವೆ.

1 thought on “ಹಿಂದಿ ಹಾಡಿಗೆ ವಿದ್ಯಾರ್ಥಿಯೊಂದಿಗೆ ನೃತ್ಯ ಮಾಡಿದ ಶಿಕ್ಷಕಿ, ವೈರಲ್ ಆದ ವಿಡಿಯೋ….!”

Leave a Comment

Your email address will not be published. Required fields are marked *

Scroll to Top