ಮದುವೆ ಅಂದ್ರೆ ಅಲ್ಲಿ ಸಂಭ್ರಮ, ಸಡಗರ, ನಗುವಿಗೆ ಬರವಿಲ್ಲ. ವಧು-ವರರು ಹೊಸ ಜೀವನದ ಕನಸು ಕಾಣ್ತಾ ಇರ್ತಾರೆ. ಆದ್ರೆ ಇಲ್ಲೊಂದು ಕಡೆ ಸಿನಿಮಾ ಸ್ಟೈಲ್‌ನಲ್ಲಿ ಟ್ವಿಸ್ಟ್ ಒಂದು ಸಿಕ್ಕಿದೆ. ತಾಳಿ ಕಟ್ಟಿಸಿಕೊಂಡು, ಶಾಸ್ತ್ರಗಳನ್ನೆಲ್ಲಾ ಮುಗಿಸಿ, ಇನ್ನೇನು ಗಂಡನ ಮನೆಗೆ ಹೋಗ್ಬೇಕು ಅನ್ನುವಷ್ಟರಲ್ಲಿ ವಧು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ! ಅಷ್ಟೇ ಅಲ್ಲ, ಮೈಮೇಲಿದ್ದ ಬಂಗಾರವನ್ನೆಲ್ಲಾ ಬಾಚಿಕೊಂಡು ಹೋಗಿದ್ದಾಳೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಪಾಪ ಆ ಹೊಸ ಗಂಡನ ಸ್ಥಿತಿ ನೋಡಿ ಜನ ಮರುಗುತ್ತಿದ್ದಾರೆ.

Bride – ಏನಿದು ಘಟನೆ? ನಡೆದಿದ್ದಾದ್ರೂ ಏನು?
ಘುಘಂತೇರ್ ಗ್ರಾಮದ ಯುವಕನೊಬ್ಬನಿಗೆ ಬಂಕಿ ಕೊತ್ವಾಲಿ ನಗರದ ಯುವತಿಯ ಜೊತೆ ಮದುವೆ ನಿಶ್ಚಯವಾಗಿತ್ತು. ನವೆಂಬರ್ 18 ರಂದು ಗಂಡನ ಕಡೆಯವರು ಅದ್ದೂರಿಯಾಗಿ ದಿಬ್ಬಣ ಬಂದಿದ್ರು. ಮದುವೆ ಶಾಸ್ತ್ರಗಳು ಕೂಡ ಸಾಂಗವಾಗಿ ನೆರವೇರಿತ್ತು. ನವಜೋಡಿಗಳು ಡಿಜೆ ಸಾಂಗ್‌ಗೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ರು. ಮದುವೆ ಮನೆಯಲ್ಲಿ ನಗು (Bride Escapes) ತುಂಬಿ ತುಳುಕುತ್ತಿತ್ತು. ವಧುವಿನ ತಂಗಿಯರು ಮೈದುನನ ಶೂ ಕದಿಯುವ (Joota Churai) ಶಾಸ್ತ್ರವನ್ನು ಕೂಡ ತಮಾಷೆಯಾಗಿ ಮಾಡಿದ್ರು. ಎಲ್ಲವೂ ಚೆನ್ನಾಗಿಯೇ ಇತ್ತು. Read this also : ಮೆಹಂದಿ ಹಾಕಿಸಿಕೊಂಡು ಹೋದ ವಧು ನಾಪತ್ತೆ, ರದ್ದಾದ ಮದುವೆ, ಮಂಗಳೂರಿನಲ್ಲಿ ನಡೆದ ಘಟನೆ….!
ವಿದಾಯ್ ವೇಳೆ ಕಾದಿತ್ತು ಆಘಾತ!
ಮರುದಿನ ಬೆಳಿಗ್ಗೆ ‘ವಿದಾಯ್’ (ವಧುವನ್ನು ಗಂಡನ ಮನೆಗೆ ಕಳುಹಿಸಿಕೊಡುವ ಶಾಸ್ತ್ರ) ಸಮಯ ಬಂತು. ಗಂಡನ ಮನೆಯವರು ಕಾರು ರೆಡಿ ಮಾಡಿಕೊಂಡು ಕಾಯ್ತಾ ಇದ್ರು. ಆದ್ರೆ ವಧುವಿನ ಕಡೆಯವರು ಆ ನೆಪ, ಈ ನೆಪ ಹೇಳಿ ಟೈಮ್ ವೇಸ್ಟ್ ಮಾಡ್ತಾ ಇದ್ರು. ಅನುಮಾನ ಬಂದು ವಿಚಾರಿಸಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ರಾತ್ರಿ ಮದುವೆ ಶಾಸ್ತ್ರ ಮುಗಿದ ಮೇಲೆ, ಮಧ್ಯರಾತ್ರಿಯೇ ವಧು ತನ್ನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ! ಹೋಗುವಾಗ ಸುಮ್ಮನೆ ಹೋಗಿಲ್ಲ, ಮದುವೆಯಲ್ಲಿ ಹಾಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾಳೆ. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಮದುವೆ ಮನೆಯಲ್ಲಿ ಸ್ಮಶಾನ ಮೌನ (Bride Escapes) ಆವರಿಸಿದೆ.

ಪೊಲೀಸರು ಹೇಳಿದ್ದೇನು?
ವಧು ಓಡಿ ಹೋಗಿರೋ ವಿಷಯ ಗೊತ್ತಾಗುತ್ತಿದ್ದಂತೆಯೇ ವರನ ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವಂಚನೆ ಮತ್ತು ಕಳ್ಳತನದ ಆರೋಪದಡಿ ದೂರು ದಾಖಲಿಸಿದ್ದಾರೆ. ಇಲ್ಲಿ ಇನ್ನೊಂದು ಶಾಕಿಂಗ್ ವಿಷಯ ಅಂದ್ರೆ, ಬಂಕಿ ಠಾಣಾಧಿಕಾರಿ ಮಿಥ್ಲೇಶ್ ಚೌಹಾಣ್ ಹೇಳುವ ಪ್ರಕಾರ, ಈ ಯುವತಿ ಈ ಹಿಂದೆಯೂ ಕೂಡ ಇದೇ ರೀತಿ ಒಬ್ಬ ಯುವಕನ ಜೊತೆ (Bride Escapes) ಓಡಿ ಹೋಗಿದ್ದಳಂತೆ! ಸದ್ಯ ಪೊಲೀಸರು ಮೊಬೈಲ್ ಲೊಕೇಶನ್ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಪಾಪ, ಮದುವೆಯಾಗಿ ಹಾಯಾಗಿರಬೇಕಿದ್ದ ವರ ಈಗ ಪೊಲೀಸ್ ಠಾಣೆ ಅಲೆಯುವಂತಾಗಿದೆ.
