Self Employment Training : ಮಹಿಳೆಯರು ಸ್ವಯಂ ಉದ್ಯೋಗ ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು : ಅಶ್ವಿನಿ

Self Employment Training – ಮನೆಯ ಜವಾಬ್ದಾರಿ ನಿಭಾಯಿಸುವಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು. ಇತ್ತೀಚಿನ ದಿನಗಳಲ್ಲಿ ಕೇವಲ ಮನೆಯ ಯಜಮಾನನ ಆದಾಯದಿಂದಲೇ ಕುಟುಂಬ ನಿರ್ವಹಣೆ ಮಾಡುವುದು ಕಷ್ಟ. ಹಾಗಾಗಿ ಮಹಿಳೆಯರೂ ಕೂಡ ಸ್ವ-ಉದ್ಯೋಗ ತರಬೇತಿ ಪಡೆದು ಆದಾಯ ಗಳಿಸುವ ಕೆಲಸಗಳನ್ನು ಆರಂಭಿಸಬೇಕು ಎಂದು ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಹಾಗೂ ಪೋಷಣ ವಿಭಾಗದ ಅಶ್ವಿನಿ ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

Women participating in self-employment bakery training workshop in Dapparthi village, Gudibande, Chikkaballapur,

Self Employment Training – ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ನಡೆದ ಬೇಕರಿ ಉತ್ಪನ್ನಗಳ ತಯಾರಿಕೆ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮದೇ ಆದ ಸಣ್ಣ ವ್ಯಾಪಾರಗಳನ್ನು ಆರಂಭಿಸುವುದರಿಂದ ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು ಎಂದರು. ಇದರಿಂದ ಆದಾಯದ ಮೂಲ ಹೆಚ್ಚುವುದಲ್ಲದೆ, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯೂ ಹೆಚ್ಚುತ್ತದೆ. ಮನೆ ಕೆಲಸಗಳ ಜೊತೆಗೆ ಹಣ ಗಳಿಸುವ ಸಾಮರ್ಥ್ಯವು ಕುಟುಂಬದ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ. ಈ ರೀತಿಯ ಸ್ವ-ಉದ್ಯೋಗ ಮಾದರಿಯು ಇತರ ಮಹಿಳೆಯರಿಗೂ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದರು.

Read this also : ದಪ್ಪರ್ತಿ ಗ್ರಾಮದಲ್ಲಿ RAWE ಕಾರ್ಯಕ್ರಮಕ್ಕೆ ಚಾಲನೆ: ರೈತರಿಗೆ ನೂತನ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ

Women participating in self-employment bakery training workshop in Dapparthi village, Gudibande, Chikkaballapur,

Self Employment – ಜಿಕೆವಿಕೆ ವಿದ್ಯಾರ್ಥಿಗಳ ಸಹಯೋಗ

ಈ ಕಾರ್ಯಕ್ರಮವನ್ನು ಬೆಂಗಳೂರಿನ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳು ಸುಂದರವಾಗಿ ನಿರ್ವಹಿಸಿದರು. ಪ್ರಾಯೋಗಿಕ ತರಗತಿಗಳನ್ನು ಆಯೋಜಿಸುವುದರ ಜೊತೆಗೆ ಬೋಧಕರು ಮತ್ತು ಭಾಗವಹಿಸುವವರ ನಡುವೆ ಉತ್ತಮ ಸಂವಹನ ಏರ್ಪಡಿಸಲು ಅವರು ನೆರವಾದರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ದಪ್ಪರ್ತಿ ಗ್ರಾಮದ ಮಹಿಳೆಯರಿಗೆ ಸ್ಪಂಜ್ ಕೇಕ್, ತೆಂಗಿನಕಾಯಿ ಕುಕ್ಕೀಸ್ ಹಾಗೂ ಮಸಾಲಾ ಡೋನಟ್ಸ್ ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳು ಹಾಗೂ ಗ್ರಾಮದ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Scroll to Top