ತಾನು ಮದುವೆಯಾಗುವ ಹುಡುಗನಿಗೆ ಆ ಲಕ್ಷಣ ಇದ್ದರೇ ಸಾಕು ಬೇರೆ ಏನು ಬೇಡ ಎಂದ ನಟಿ ಕೃತಿ ಸನನ್….!

ಬಾಲಿವುಡ್ (Bollywood) ಹಾಟ್ ಅಂಡ್ ಯಂಗ್ ಬ್ಯೂಟಿ ಕೃತಿ ಸನನ್ (kriti sanon) ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಸಹ ಆಕೆ ಬಾಲಿವುಡ್ ನಲ್ಲಿ ಪುಲ್ ಫೇಂ ಪಡೆದುಕೊಂಡರು. ತೆಲುಗಿನಲ್ಲಿ ಸಕ್ಸಸ್ ಕಾಣದ ಕೃತಿಗೆ ಬಾಲಿವುಡ್ ನಲ್ಲಿ ಸಾಲು ಸಾಲು ಸಕ್ಸಸ್ ಬಂದವು. ಇದೀಗ ಆಕೆ ಬಾಲಿವುಡ್ ನಲ್ಲಿ ಕ್ರೇಜಿ ಹಿರೋಯಿನ್ ಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಕೃತಿ ಸನನ್ ಇದೀಗ ಮದುವೆಯ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಆ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

kriti sanon comments on marriage 2

ಸಿನಿರಂಗದಲ್ಲಿ ಒಂಟಿಯಾಗಿದ್ದ ಅನೇಕ ನಟಿಯರು ಇತ್ತೀಚಿಗೆ ಮದುವೆಯಾಗುತ್ತಿದ್ದಾರೆ. ತಾವು ಪ್ರೀತಿಸಿದವನೊಂದಿಗೆ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವರು ಈಗಾಗಲೇ ತಮ್ಮ ಪ್ರೀತಿಯನ್ನು ಅನೌನ್ಸ್ ಮಾಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಸದ್ಯ ಬಾಲಿವುಡ್ ಯಂಗ್ ಬ್ಯೂಟಿ ಕೃತಿ ಸನನ್ ಸಹ ಮದುವೆಗೆ ಸಿದ್ದವಾಗಿದ್ದಾರೆ ಎನ್ನಲಾಗುತ್ತಿದೆ. ತಾನು ಮದುವೆಯಾಗುವ ಯುವಕ ಯಾವ ರೀತಿಯಲ್ಲಿರಬೇಕು ಎಂಬುದರ ಬಗ್ಗೆ ಆಕೆ ಹಿಂಟ್ಸ್ ಕೊಟ್ಟಿದ್ದಾರೆ. ಜೊತೆಗೆ ಇತ್ತೀಚಿಗೆ ಆಕೆ ಲಂಡನ್ ಮೂಲದ ಕಬಿರ್‍ ಬಹಿಯಾ ಎಂಬ ಉದ್ಯಮಿಯೊಂದಿಗೆ ಕಾಣಿಸಿಕೊಳ್ಳುತ್ತಿರುವುದು, ಇದೀಗ ಆಕೆ ಮದುವೆಯ ಬಗ್ಗೆ ಕಾಮೆಂಟ್ ಮಾಡಿದ್ದು ಆಕೆ ಮದುವೆಗೆ ಸಿದ್ದವಾಗಿದ್ದಾಳೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

kriti sanon comments on marriage 1

ಇತ್ತೀಚಿಗೆ ನಟಿ ಕೃತಿ ಸನನ್ ಮದುವೆಯ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಯಾವುದೇ ವಿಚಾರದಲ್ಲಾದರೂ ನಾವು ಆಸೆಯನ್ನು ಇಟ್ಟುಕೊಂಡಿದ್ದರೇ ತುಂಬಾ ಒತ್ತಡಕ್ಕೆ ಗುರಿಯಾಗುತ್ತೇವೆ. ಆದ್ದರಿಂದ ನಾನು ಯಾವುದೇ ರೀತಿಯ ಆಸೆಗಳನ್ನು ಇಟ್ಟುಕೊಂಡಿರುವುದಿಲ್ಲ. ಏನು ನಡೆದರೂ ಸ್ವೀಕರಿಸಲು ಸಿದ್ದವಾಗಿರುತ್ತೇನೆ. ಇನ್ನೂ ನನ್ನ ಮದುವೆಯಾಗುವ ವ್ಯಕ್ತಿ ಪ್ರಾಮಾಣಿಕವಾಗಿ ಇರಬೇಕು, ನನ್ನನ್ನು ನಗಿಸುತ್ತಿರಬೇಕು, ನನ್ನನ್ನು ಹಾಗೂ ನನ್ನ ಕೆಲಸವನ್ನು ಗೌರವಿಸಬೇಕು. ನನ್ನೊಂದಿಗೆ ಹೆಚ್ಚು ಸಮಯ ಕಳೆಯಬೇಕು ಎಲ್ಲದಕ್ಕೂ ಮಿಗಿಲಾಗಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಹಾಗಂತ ನನ್ನೊಂದಿಗೆ ಸಮನಾಗಿರಬೇಕು ಎಂಬ ಬಯಕೆಯಿಲ್ಲ ಎಂದಿದ್ದಾರೆ. ಇನ್ನೂ ಕೃತಿ ಸನನ್ ಮದುವೆಯ ಬಗ್ಗೆ ನೀಡಿದ ಈ ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ.

kriti sanon comments on marriage 3

ಇನ್ನೂ ಕೃತಿ ಸನನ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆಯೇ, ಲಂಡನ್ ಉದ್ಯಮಿಯನ್ನೇ ಮದುವೆಯಾಗುತ್ತಾರಾ ಅಥವಾ ಬೇರೆ ವ್ಯಕ್ತಿಯನ್ನು ವರಿಸುತ್ತಾರಾ, ಎಂಬುದರ ಬಗ್ಗೆ ಆಕೆಯೇ ಹೇಳಬೇಕಿದೆ. ಇನ್ನೂ ಕೊನೆಯದಾಗಿ ದಿ ಕ್ರೂ ಎಂಬ ಸಿನೆಮಾದ ಮೂಲಕ ಕೃತಿ ಸನನ್ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಒಳ್ಳೆಯ ಹಿಟ್ ಪಡೆದುಕೊಂಡಿದೆ. ಸದ್ಯ ಆಕೆ ‘ದೋ ಪತ್ತಿ’ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾಗೆ ಆಕೆಯೇ ನಿರ್ಮಾಪಕಿಯಾಗಿದ್ದಾಳೆ.

Leave a Comment

Your email address will not be published. Required fields are marked *

Scroll to Top