College Students – ಪ್ರೀತಿ ಅನ್ನೋದು ಎಂಥ ಕಣ್ಣು ಕುರುಡು ಅಲ್ವಾ? ಪ್ರೀತಿಗೆ ಬಿದ್ದ ಮೇಲೆ ಲೋಕ ಪರಿಜ್ಞಾನವೇ ಇರಲ್ಲ, ತಮ್ಮದೇ ಪ್ರಪಂಚದಲ್ಲಿ ವಿಹರಿಸುತ್ತಿರುತ್ತಾರೆ ಅಂತಾ ದೊಡ್ಡವರು ಹೇಳೋದನ್ನ ಕೇಳಿದ್ದೇವೆ. ನಮ್ಮ ಸುತ್ತಮುತ್ತ ನಡೆಯೋ ಕೆಲವು ಘಟನೆಗಳನ್ನು ನೋಡಿದ್ರೆ ಈ ಮಾತು ನಿಜ ಅನ್ನಿಸದೇ ಇರಲ್ಲ. ಓಡೋ ರೈಲಲ್ಲಿ, ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ, ಕಾಲೇಜು ಆವರಣಗಳಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸೋ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ.
ಆದರೆ ಈಗ ಪ್ರೇಮಿಗಳಿಬ್ಬರ (College Students) ಅತಿರೇಕದ ವರ್ತನೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ (Social Media Viral Video) ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾಲೇಜು ಬಂಕ್ (College Bunk) ಮಾಡಿ ಪ್ರೇಮಿಗಳಿಬ್ಬರೂ ನಡುಬೀದಿಯಲ್ಲೇ ರೋಮ್ಯಾನ್ಸ್ (Public Romance) ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿ, ಆಕ್ರೋಶ ಹೊರಹಾಕಿದ್ದಾರೆ.
Read this also : ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಗಳ ಅತಿರೇಕ, ಬಸ್ ನಲ್ಲೇ ರೊಮ್ಯಾನ್ಸ್ ಗಿಳಿದ್ರು, ನೆಟ್ಟಿಗರಿಂದ ತೀವ್ರ ಆಕ್ರೋಶ….!
College Students – ವೈರಲ್ ವಿಡಿಯೋದಲ್ಲಿ ಏನಿದೆ? ನೋಡಿ ನೀವೇ!
@manojsh28986262 ಎಂಬ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವೈರಲ್ ವಿಡಿಯೋದಲ್ಲಿ (Viral Video) ಕಾಲೇಜು ಬಂಕ್ (College Students) ಮಾಡಿ ಪಬ್ಲಿಕ್‌ನಲ್ಲೇ ರೋಮ್ಯಾನ್ಸ್ ಮಾಡುತ್ತಿರುವುದನ್ನು ಸ್ಪಷ್ಟವಾಗಿ ನೋಡಬಹುದು. ಕಿರಿದಾದ, ಹೆಚ್ಚು ಜನಸಂದಣಿ ಇಲ್ಲದ ಒಂದು ಗಲ್ಲಿಯಲ್ಲಿ ಯುವಕನೊಬ್ಬ ತನ್ನ ಗೆಳತಿಯನ್ನು ಅಪ್ಪಿಕೊಂಡಿದ್ದಾನೆ. ನಂತರ ಯುವಕ ಯುವತಿಯನ್ನು ಎತ್ತಿಕೊಂಡು ತಿರುಗಿಸಿದ್ದಾನೆ. ಈ ದೃಶ್ಯವನ್ನು ಅಲ್ಲೇ ಇದ್ದ ಕೆಲವು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.
ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ: Click here
ನೆಟ್ಟಿಗರ ಖಡಕ್ ಪ್ರತಿಕ್ರಿಯೆ: “ಭಾರತದಲ್ಲಿ ಮಾತ್ರ ಇದು ಸಾಧ್ಯ!”
ಜೂನ್ 2 ರಂದು ಶೇರ್ ಮಾಡಲಾದ ಈ ವಿಡಿಯೋ ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋ ನೋಡಿದ ಹಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, “ಇದು ಅವರವರ ವೈಯಕ್ತಿಕ ಸಮಸ್ಯೆ, ನಿಮಗೇನು ತೊಂದರೆ?” ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ತಮಾಷೆಯಾಗಿ, “ಈಗ ಇವನಿಗೆ ಸಿಲಿಂಡರ್ ಎತ್ತಲು ಹೇಳಿದರೆ ಅಳುತ್ತಾನೆ, ಆದರೆ ಆ ಹುಡುಗಿಯನ್ನು ಹೇಗೆ ಎತ್ತುತ್ತಿದ್ದಾನೆ ನೋಡಿ!” ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ವಿವಿಧ ರೀತಿಯಲ್ಲಿ ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.