Save Nature : ಪ್ರಕೃತಿ ನಾಶಕ್ಕೆ ಮಾನವನ ದುರಾಸೆಯೇ ಕಾರಣ: ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್

Save Nature – ಪರಿಸರ ನಾಶದಿಂದ ಆಗುತ್ತಿರುವ ಅನಾಹುತಗಳನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಮಾನವನ ಹೆಚ್ಚಿದ ದುರಾಸೆಯೇ ಎಂದು ಗುಡಿಬಂಡೆ ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್ ಎಚ್ಚರಿಕೆ ನೀಡಿದ್ದಾರೆ. ನಾವು ಪ್ರಕೃತಿಯನ್ನು ಸಂರಕ್ಷಿಸದಿದ್ದರೆ, ಇಡೀ ಪ್ರಾಣಿ ಸಂಕುಲವೇ ನಾಶವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

Save Nature - World Environment Day tree planting and awareness rally in Gudibande

Save Nature – ವಿಶ್ವ ಪರಿಸರ ದಿನದಂದು ಪರಿಸರ ಜಾಗೃತಿ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಮತ್ತು ಪರಿಸರ ಸಂರಕ್ಷಣಾ ಜಾಗೃತಿ ಜಾಥಾಗೆ ಚಾಲನೆ ನೀಡಿ ನ್ಯಾಯಾಧೀಶರು ಮಾತನಾಡಿದ ಅವರು ದಿನದಿಂದ ದಿನಕ್ಕೆ ಮಾನವನಿಗೆ ದುರಾಸೆ ಹೆಚ್ಚಾಗುತ್ತಿದೆ. ನಗರೀಕರಣದ ಹೆಸರಿನಲ್ಲಿ ಮರಗಳನ್ನು ನಾಶ ಮಾಡುತ್ತಿದ್ದೇವೆ. ಹಿಂದೆ ಮಧ್ಯಾಹ್ನ 12 ಗಂಟೆಯಾದರೂ ಅಷ್ಟೊಂದು ಬಿಸಿಲು ಇರುತ್ತಿರಲಿಲ್ಲ. ಆದರೆ ಈಗ ಬೆಳಗ್ಗಿನಿಂದಲೇ ತೀವ್ರ ಬಿಸಿಲು ಕಾಣುತ್ತಿದ್ದೇವೆ. ಇದೆಲ್ಲಕ್ಕೂ ಪರಿಸರ ನಾಶವೇ ಕಾರಣ, ಎಂದು ವಿವರಿಸಿದರು.

Save Nature  – ಪ್ರಕೃತಿ ದೇವರು ನೀಡಿದ ವರ: ಸಂರಕ್ಷಣೆ ನಮ್ಮೆಲ್ಲರ ಹೊಣೆ

“ಪರಿಸರ ನಮಗೆ ದೇವರು ಕೊಟ್ಟ ವರ. ಒಂದು ಮರ ಕಡಿದರೆ, ಇನ್ನೊಂದು ಕಡೆ ಮರ ನೆಡಬೇಕೆಂಬ ನಿಯಮವಿದೆ. ಆದರೆ ಇದನ್ನು ಯಾರೂ ಪಾಲಿಸುತ್ತಿಲ್ಲ,” ಎಂದು ಅವರು ವಿಷಾದಿಸಿದರು. ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ಕಾಪಾಡುವ ಕೆಲಸ ಮಾಡಬೇಕು. ಜೊತೆಗೆ, ಪ್ಲಾಸ್ಟಿಕ್ ಬಗ್ಗೆ ಅರಿವು ಪಡೆದುಕೊಂಡು, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ನ್ಯಾಯಾಧೀಶರು ಕರೆ ನೀಡಿದರು.

Save Nature - World Environment Day tree planting and awareness rally in Gudibande

Save Nature – ತಾಲ್ಲೂಕಿನಾದ್ಯಂತ ಅರ್ಥಪೂರ್ಣ ಪರಿಸರ ದಿನಾಚರಣೆ

ಗುಡಿಬಂಡೆ ತಾಲ್ಲೂಕಿನ ವಿವಿಧ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಸೇರಿದಂತೆ ಹಲವು ಕಡೆ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ನಿಷೇಧದ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

Read this also : ವಿಶ್ವ ಬೈಸಿಕಲ್ ದಿನ 2025- ಪರಿಸರ ಮತ್ತು ಆರೋಗ್ಯದ ಮಿತ್ರ ಸೈಕಲ್‌ ಸವಾರಿ…!

ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ

ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ, ವಕೀಲರ ಸಂಘದ ಅಧ್ಯಕ್ಷ ಟಿ.ಸಿ. ಅಶ್ವತ್ಥರೆಡ್ಡಿ, ಬಿಇಒ ಕೃಷ್ಣಕುಮಾರಿ, ವಲಯ ಅರಣ್ಯಾಧಿಕಾರಿ ಚಂದ್ರಶೇಖರ್, ವಕೀಲರಾದ ಪಿ. ಶಿವಪ್ಪ, ಶಿವಾನಂದರೆಡ್ಡಿ, ನಾರಾಯಣಸ್ವಾಮಿ, ನಂದೀಶ್ವರರೆಡ್ಡಿ, ಬಾಬಾಜಾನ್, ಶ್ರಾವಣಿ, ನರೇಂದ್ರ, ಅಭಿಷೇಕ್, ಶಿಕ್ಷಣ ಇಲಾಖೆಯ ಮುರಳಿ, ರಘು ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Scroll to Top