Mother – “ತಾಯಿ” ಎಂಬ ಪದವೇ ತ್ಯಾಗ, ಪ್ರೀತಿ ಮತ್ತು ರಕ್ಷಣೆಯ ಸಂಕೇತ. ತನ್ನ ಮಗುವಿಗಾಗಿ ಎಂಥಾ ಅಪಾಯವನ್ನೂ ಎದುರಿಸುವ ಶಕ್ತಿ ತಾಯಿಗಿದೆ. ಆದರೆ, ಇತ್ತೀಚೆಗೆ ಕೆಲವು ಘಟನೆಗಳು ತಾಯ್ತನದ ಈ ಪವಿತ್ರ ಭಾವಕ್ಕೆ ಮಸಿ ಬಳಿಯುತ್ತಿವೆ. ಇದು ನಿಜಕ್ಕೂ “ಈಗಿನ ತಾಯಂದಿರಿಗೆ ಏನಾಗಿದೆ? ಇವರು ನಿಜವಾಗಿಯೂ ಅಮ್ಮಂದಿರೇ?” ಎಂದು ಜನ ಪ್ರಶ್ನಿಸುವಂತೆ ಮಾಡಿದೆ.
ಹೌದು, ತಾಯಂದಿರು ತಮ್ಮ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಭದ್ರಕಾಳಿಯಂತೆ ಅಬ್ಬರಿಸುವ ಘಟನೆಗಳು ನಡೆದಿವೆ. ಆದರೆ, ಇಲ್ಲೊಂದು ತಾಯಿ ತನ್ನ 14 ವರ್ಷದ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ತನ್ನ ಗೆಳೆಯ ಮತ್ತು ಇತರರಿಗೆ ಸಹಕರಿಸಿದ ಆರೋಪ ಕೇಳಿಬಂದಿದೆ. ಈ ಘಟನೆ ನಿಜಕ್ಕೂ ಅಘಾತಕಾರಿ ಎನ್ನಬಹುದಾಗಿದೆ.
Mother – ಹರಿದ್ವಾರದಲ್ಲಿ ನಡೆದ ಭೀಕರ ಘಟನೆ: ತಾಯಿ ಮತ್ತು ಗೆಳೆಯ ಬಂಧನ
ಉತ್ತರಾಖಂಡ್‌ನ ಹರಿದ್ವಾರದಲ್ಲಿ ನಡೆದ ಈ ಘಟನೆ ಇಡೀ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಈ ಸಂಬಂಧ ಮಹಿಳೆಯ ಬಾಯ್‌ಫ್ರೆಂಡ್ ಸುಮಿತ್ ಪಟ್ವಾಲ್ ಎಂಬಾತನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪೊಲೀಸರು ಏನು ಹೇಳುತ್ತಾರೆ?
ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪರಮೇಂದ್ರ ದೋವಲ್ ಅವರು, “ಅಪ್ರಾಪ್ತ ಬಾಲಕಿ ತನ್ನ ತಾಯಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಆರೋಪಿಸಿದ್ದಾಳೆ. ಬಳಿಕ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆಕೆಯ ಆರೋಪಗಳು ದೃಢಪಟ್ಟಿವೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
Mother – ತಂದೆಯ ಬಳಿ ಹೇಳಿಕೊಂಡ ನಂತರ ಬೆಳಕಿಗೆ ಬಂದ ಸತ್ಯ
ಸಂತ್ರಸ್ತೆಯ ತಾಯಿ ತನ್ನ ಪತಿಯಿಂದ ಬೇರ್ಪಟ್ಟಿದ್ದಳು. ಆಕೆಯ 13 ವರ್ಷದ ಮಗಳು ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ತಾಯಿ ತನ್ನ ಗೆಳೆಯನೊಂದಿಗೆ ಸೇರಿ ಮಾಡಿದ ಈ ಹೇಯ ಕೃತ್ಯದ ಬಗ್ಗೆ ಬಾಲಕಿ ತನ್ನ ತಂದೆಯ ಬಳಿ ಹೇಳಿಕೊಂಡ ನಂತರ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ.
Read this also : ಕೋಲಾರದಲ್ಲೊಂದು ಪೈಚಾಚಿಕ ಕೃತ್ಯ, ಹೆತ್ತ ಮಗಳ ಮೇಲೆ ಅತ್ಯಾಚಾರ ವೆಸಗಿದ ಪಾಪಿ ತಂದೆ…!
ಬಾಲಕಿ ಹೇಳಿದ ಪ್ರಕಾರ, ಆಕೆಯ ತಾಯಿ ಮತ್ತು ಆಕೆಯ ಬಾಯ್‌ಫ್ರೆಂಡ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಾಲಕಿಯ ಆರೋಪ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟ ನಂತರ, ಪೊಲೀಸರು ಈ ಮಹಿಳೆ ಮತ್ತು ಆಕೆಯ ಗೆಳೆಯನನ್ನು ಬಂಧಿಸಿದ್ದಾರೆ.
Mother – ಆರೋಪಿ ಮಹಿಳೆ ಮತ್ತು ರಾಜಕೀಯ ನಂಟು?
ಈ ಆರೋಪಿ ಮಹಿಳೆ ಹಿಂದೆ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವರದಿಯಾಗಿದೆ. ಆದರೆ, ಹರಿದ್ವಾರದ ಬಿಜೆಪಿ ಘಟಕವು ಆಕೆಯಿಂದ ಅಂತರ ಕಾಯ್ದುಕೊಂಡಿದೆ. ಕಳೆದ ಆಗಸ್ಟ್‌ನಲ್ಲಿ ಆಕೆಯನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆ ಮಾಡಲಾಗಿತ್ತು ಎಂದು ಹರಿದ್ವಾರ ಬಿಜೆಪಿ ಜಿಲ್ಲಾಧ್ಯಕ್ಷ ಅಶುತೋಷ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಆಕೆಗೆ ಯಾವುದೇ ಬಿಜೆಪಿ ಹುದ್ದೆಯನ್ನು ನೀಡಿಲ್ಲ ಎಂದು ಅವರು ಹೇಳಿದ್ದಾರೆ.