Sunday, June 1, 2025
HomeSpecialIOCL - ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಭರ್ಜರಿ ನೇಮಕಾತಿ: 1770 ಹುದ್ದೆಗಳಿಗೆ ಅರ್ಜಿ ಆಹ್ವಾನ…!

IOCL – ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಭರ್ಜರಿ ನೇಮಕಾತಿ: 1770 ಹುದ್ದೆಗಳಿಗೆ ಅರ್ಜಿ ಆಹ್ವಾನ…!

IOCL – ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ 1770 ಟ್ರೇಡ್ ಅಪ್ರೆಂಟಿಸ್ ಮತ್ತು ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಐಟಿಐ, ಡಿಪ್ಲೊಮಾ, ಪದವಿ (ಬಿಎ, ಬಿಎಸ್ಸಿ, ಬಿಕಾಂ) ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಮಾಸಿಕ ವೇತನವನ್ನು ನೀಡಲಾಗುವುದು.

IOCL Apprentice Recruitment 2025 – Apply for 1770 Trade & Technician Apprentice Vacancies

IOCL – ಹುದ್ದೆಗಳ ವಿವರಗಳು:

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಟ್ರೇಡ್ ಅಪ್ರೆಂಟಿಸ್ – ಅಟೆಂಡಂಟ್ ಆಪರೇಟರ್ (Attendant Operator) 421
ಟ್ರೇಡ್ ಅಪ್ರೆಂಟಿಸ್ – ಫಿಟ್ಟರ್ (Fitter – Mechanical) 208
ಟ್ರೇಡ್ ಅಪ್ರೆಂಟಿಸ್ – ಬಾಯ್ಲರ್ (Boiler – Mechanical) 76
ಟೆಕ್ನೀಷಿಯನ್ ಅಪ್ರೆಂಟಿಸ್ (Technician Apprentice – Chemical) 356
ಟ್ರೇಡ್ ಅಪ್ರೆಂಟಿಸ್ – ಅಕೌಂಟೆಂಟ್ (Accountant) 38
ಟ್ರೇಡ್ ಅಪ್ರೆಂಟಿಸ್ – ಡಾಟಾ ಎಂಟ್ರಿ ಆಪರೇಟರ್ (Data Entry Operator) 49
ಟ್ರೇಡ್ ಅಪ್ರೆಂಟಿಸ್ – ಡಾಟಾ ಎಂಟ್ರಿ ಆಪರೇಟರ್ (ಸ್ಕಿಲ್ ಸರ್ಟಿಫಿಕೇಟ್) 53
ಟೆಕ್ನೀಷಿಯನ್ ಅಪ್ರೆಂಟಿಸ್ (Technician Apprentice – Mechanical) 169
ಟೆಕ್ನೀಷಿಯನ್ ಅಪ್ರೆಂಟಿಸ್ (Technician Apprentice – Electrical) 240
ಟೆಕ್ನೀಷಿಯನ್ ಅಪ್ರೆಂಟಿಸ್ (Technician Apprentice – Instrumentation) 108
ಟ್ರೇಡ್ ಅಪ್ರೆಂಟಿಸ್ (Secretarial Assistant) 69

IOCL –  ವಿದ್ಯಾರ್ಹತೆ:

  • ಟ್ರೇಡ್ ಅಪ್ರೆಂಟಿಸ್: ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ (ITI) ಉತ್ತೀರ್ಣರಾಗಿರಬೇಕು.
  • ಟೆಕ್ನೀಷಿಯನ್ ಅಪ್ರೆಂಟಿಸ್: ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ (Diploma) ಪೂರ್ಣಗೊಳಿಸಿರಬೇಕು.
  • ಗ್ರಾಜುಯೇಟ್ ಅಪ್ರೆಂಟಿಸ್: ತಾಂತ್ರಿಕ ಅಥವಾ ತಾಂತ್ರಿಕೇತರ ವಿಷಯಗಳಲ್ಲಿ ಪದವಿ (Degree – BA, BSc, BCom) ಪಡೆದಿರಬೇಕು.

ಪ್ರತಿಯೊಂದು ವಿಭಾಗದ ಹುದ್ದೆಗಳಿಗೂ ನಿರ್ದಿಷ್ಟವಾದ ವಿದ್ಯಾರ್ಹತೆಗಳ ಕುರಿತು ಸಂಪೂರ್ಣ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದುವುದು ಕಡ್ಡಾಯವಾಗಿದೆ.

ವಯೋಮಿತಿ:

  • ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ.
  • ಗರಿಷ್ಠ ವಯೋಮಿತಿ 24 ವರ್ಷ.
  • ಒಬಿಸಿ (OBC), ಎಸ್‌ಸಿ (SC), ಎಸ್‌ಟಿ (ST) ಮತ್ತು ಪಿಡಬ್ಲ್ಯೂಡಿ (PWD) ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

ತರಬೇತಿ ಅವಧಿ ಮತ್ತು ಸ್ಟೈಫಂಡ್:

  • ಆಯ್ಕೆಯಾದ ಅಭ್ಯರ್ಥಿಗಳಿಗೆ 12 ತಿಂಗಳ ತರಬೇತಿಯನ್ನು ನೀಡಲಾಗುವುದು.
  • ಅಪ್ರೆಂಟಿಸ್ ಕಾಯ್ದೆ 1960 ರ ಪ್ರಕಾರ, ಅಭ್ಯರ್ಥಿಗಳಿಗೆ ಮಾಸಿಕ ₹ 7,000 ರಿಂದ ₹ 15,000 ವರೆಗೆ ಸ್ಟೈಫಂಡ್ ನೀಡಲಾಗುವುದು.

ಅರ್ಜಿ ಸಲ್ಲಿಕೆ ಮತ್ತು ಪ್ರಮುಖ ದಿನಾಂಕಗಳು:

  • ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03-05-2025 (ಬೆಳಿಗ್ಗೆ 10:00 ಗಂಟೆಯಿಂದ)
  • ಆನ್ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02-06-2025 (ಸಂಜೆ 05:00 ಗಂಟೆಯವರೆಗೆ)
  • ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರ ಪಟ್ಟಿ ಬಿಡುಗಡೆ ದಿನಾಂಕ: 09-06-2025
  • ದಾಖಲೆಗಳ ಪರಿಶೀಲನೆಯ ಸಂಭಾವ್ಯ ದಿನಾಂಕ: 16-06-2025 ರಿಂದ 24-06-2025

IOCL Apprentice Recruitment 2025 – Apply for 1770 Trade & Technician Apprentice Vacancies

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಅವರ ನಿಗದಿತ ವಿದ್ಯಾರ್ಹತೆಯ ಅಂಕಗಳ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ. ನಂತರ, ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುವುದು. Read this also : 10 ಮತ್ತು 12ನೇ ತರಗತಿ ಫಲಿತಾಂಶ, ಪ್ರಕಟಣೆಗೂ ಮುನ್ನ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ….!

ಸೂಚನೆ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ನ ಟ್ರೇಡ್ ಮತ್ತು ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಕುರಿತಾದ ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಾಗಿ ದಯವಿಟ್ಟು https://iocl.com/ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ.

IOCL Apprentice Advertisement & Apply Link:

Official Career Page of IOCL: Website Link
Advertisement PDF for IOCL: Notification PDF
Online Application Form for IOCL: Apply Link
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular