IDBI ಬ್ಯಾಂಕ್ ನೇಮಕಾತಿ 2025: 119 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ…!

IDBI – ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ! ಭಾರತದ ಪ್ರತಿಷ್ಠಿತ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 2025ನೇಮಕಾತಿ ಪ್ರಕ್ರಿಯೆಯಡಿ ದೇಶಾದ್ಯಂತ ಖಾಲಿ ಇರುವ 119 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಪಡೆದಿರುವ ಮತ್ತು ಕಾರ್ಯಾನುಭವ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಏಪ್ರಿಲ್ 7, 2025 ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20, 2025.

IDBI – ಹುದ್ದೆಗಳ ವಿವರ ಮತ್ತು ಅರ್ಹತೆ

IDBI ಬ್ಯಾಂಕ್‌ನಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಅವುಗಳಿಗೆ ಬೇಕಾದ ವಿದ್ಯಾರ್ಹತೆ ಈ ಕೆಳಗಿನಂತಿದೆ:

  1. ಡೆಪ್ಯುಟಿ ಜನರಲ್ ಮ್ಯಾನೇಜರ್ (DGM) – 8 ಹುದ್ದೆಗಳು
    • ವಿದ್ಯಾರ್ಹತೆ: CA/ ICWA, B.Sc, B.Tech, ಪದವಿ, MBA, M.Sc, ಸ್ನಾತಕೋತ್ತರ ಪದವಿ.
  2. ಅಸಿಸ್ಟಂಟ್ ಜನರಲ್ ಮ್ಯಾನೇಜರ್ (AGM) – 42 ಹುದ್ದೆಗಳು
    • ವಿದ್ಯಾರ್ಹತೆ: CA/ ICWA, BCA, B.Sc, LLB, B.E/ B.Tech, ಪದವಿ, MCA, M.Sc, M.E/ M.Tech, MBA, ಸ್ನಾತಕೋತ್ತರ ಪದವಿ.
  3. ಮ್ಯಾನೇಜರ್ – 69 ಹುದ್ದೆಗಳು
    • ವಿದ್ಯಾರ್ಹತೆ: CA/ ICWA, BCA, B.Sc, B.E/ B.Tech, ಪದವಿ, MBA (ಕಾರ್ಯಾನುಭವ ಕಡ್ಡಾಯ).

IDBI Bank Recruitment 2025 – Apply for 119 Specialist Cadre Officer Posts

IDBI – ವಯೋಮಿತಿ

  • DGM: 35-45 ವರ್ಷ
  • AGM: 28-40 ವರ್ಷ
  • ಮ್ಯಾನೇಜರ್: 25-35 ವರ್ಷ
    ಮೀಸಲಾತಿ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ: OBC ಅಭ್ಯರ್ಥಿಗಳಿಗೆ 3 ವರ್ಷ, SC/ST/ಮಾಜಿ ಸೈನಿಕರಿಗೆ 5 ವರ್ಷಗಳ ರಿಯಾಯಿತಿ ಲಭ್ಯ.

IDBI – ಅರ್ಜಿ ಶುಲ್ಕ

  • SC/ST ಅಭ್ಯರ್ಥಿಗಳಿಗೆ: 250 ರೂ.
  • ಸಾಮಾನ್ಯ/EWS/OBC ಅಭ್ಯರ್ಥಿಗಳಿಗೆ: 1,050 ರೂ.
    ಶುಲ್ಕವನ್ನು ಆನ್ಲೈನ್ ಪಾವತಿ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ ಮತ್ತು ವೇತನ

ಅಭ್ಯರ್ಥಿಗಳ ಆಯ್ಕೆ ಪ್ರಿಲಿಮಿನರಿ ಸ್ಕ್ರೀನಿಂಗ್ ಟೆಸ್ಟ್, ಗ್ರೂಪ್ ಡಿಸ್ಕಷನ್, ಮತ್ತು ವೈಯಕ್ತಿಕ ಸಂದರ್ಶನ ಮೂಲಕ ನಡೆಯಲಿದೆ. ಆಯ್ಕೆಯಾದವರಿಗೆ ಹುದ್ದೆಗೆ ತಕ್ಕಂತೆ ಮಾಸಿಕ ವೇತನ 1,24,000 ರೂ. ರಿಂದ 1,97,000 ರೂ. ದೊರೆಯಲಿದೆ.

IDBI – ಅರ್ಜಿ ಸಲ್ಲಿಸುವ ವಿಧಾನ

  1. ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: https://www.idbibank.in/idbi-bank-careers-current-openings.aspx
  2. ಹೆಸರು ನೋಂದಾಯಿಸಿ ಮತ್ತು ಹೊಸ ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
  3. ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  6. ಭರ್ತಿ ಮಾಡಿದ ವಿವರಗಳನ್ನು ಪರಿಶೀಲಿಸಿ, ಸರಿಯಿದ್ದರೆ Submit ಕ್ಲಿಕ್ ಮಾಡಿ.
  7. ಅರ್ಜಿ ಫಾರಂ ಡೌನ್‌ಲೋಡ್ ಮಾಡಿ ಭವಿಷ್ಯಕ್ಕಾಗಿ ಇಟ್ಟುಕೊಳ್ಳಿ.

ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿ

IDBI ಬ್ಯಾಂಕ್ ನೇಮಕಾತಿ 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ: ಅಧಿಕೃತ ಲಿಂಕ್. ಹೆಚ್ಚಿನ ವಿವರಗಳಿಗೆ idbibank.in ವೆಬ್‌ಸೈಟ್ ಭೇಟಿ ನೀಡಿ.

Leave a Comment

Your email address will not be published. Required fields are marked *

Scroll to Top