ಹಾವು ಎಂದರೇ ಯಾರಿಗೆ ಭಯ ಇರೋಲ್ಲ ಹೇಳಿ, ಹಾವು ಕಂಡರೇ ಕಿ.ಮೀ ದೂರ ಓಡುತ್ತಾರೆ. ಆದರೆ ಕೆಲ ಸ್ನೇಕ್ ಕ್ಯಾಚರ್ ಗಳು ಮಾತ್ರ ಹಾವುಗಳೊಂದಿಗೆ ಆಟವಾಡುತ್ತಿರುತ್ತಾರೆ. ಕೆಲವೊಮ್ಮೆ ಅದೇ ಹಾವುಗಳ ಕಾರಣದಿಂದಲೇ ಪ್ರಾಣದ ವರೆಗೆ ತಂದುಕೊಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ಹೆಬ್ಬಾವಿನೊಂದಿಗೆ ಸರಸ ಆಡೋಕೆ ಹೋಗಿ ಪೇಜಿಗೆ ಸಿಲುಕಿದ್ದಾನೆ. ಹೆಬ್ಬಾವಿಗೆ ಮುತ್ತಿಡಲು ಹೋದ (Snake Video) ವ್ಯಕ್ತಿಗೆ ಆ ಹೆಬ್ಬಾವು ಕಚ್ಚಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, 15 ಸೆಕೆಂಡ್ ಗಳ ಈ ವಿಡಿಯೋ ಭಯಾನಕವಾಗಿದೆ ಎಂದು ಹಲವರು ಅಭಿಪ್ರಾಯ ಹೊರಹಾಕಿದ್ದಾರೆ.

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಹಾವುಗಳು ತುಂಬಾನೆ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಹಾವುಗಳ ವಿಡಿಯೋಗಳು ಮಾತ್ರ ತುಂಬಾನೆ ವೈರಲ್ ಆಗುತ್ತವೆ. ಹಾವು ಹಿಡಿಯುವಂತಹವರು ವಿವಿಧ ರೀತಿಯ ಸ್ಟಂಟ್ ಗಳನ್ನು ಮಾಡುತ್ತಿರುತ್ತಾರೆ. ಜೊತೆಗೆ ಹಾವು ಹಿಡಿದು ರಕ್ಷಣೆ ಮಾಡಲು ಹೋದಂತಹವರು ಅದೇ ಹಾವಿನಿಂದ ಕಚ್ಚಿಸಿಕೊಂಡು ಪ್ರಾಣ ಬಿಟ್ಟಂತಹ ಉದಾಹರಣೆಗಳನ್ನು ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. @Poonam_1992 ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.
To watch this video click here
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ಯಿಯೋರ್ವ ದೈತ್ಯ ಗಾತ್ರದ ಹೆಬ್ಬಾವನ್ನು ಹಿಡಿದು ಅದಕ್ಕೆ ಮುತ್ತಿಡಲು ಪ್ರಯತ್ನಿಸುತ್ತಾನೆ. ಆದರೆ ಆ ಹಾವು ಮಾತ್ರ ಆ ವ್ಯಕ್ತಿಗೆ ಮುತ್ತಿಟ್ಟಿದೆ. ಹೆಬ್ಬಾವು ಆತನಿಗೆ ಮುತ್ತಿಡುವುದು ಮಾತ್ರವಲ್ಲದೇ ಆತನ ಕೆನ್ನೆಯನ್ನು ಗಟ್ಟಿಯಾಗಿ ಹಿಡಿದು ಕಚ್ಚಿದೆ. ಇದರಿಂದಾಗಿ ಹಾವಿನ ಹಲ್ಲು ಆತನ ಕೆನ್ನೆಯಲ್ಲಿ ಸಿಲುಕಿಕೊಂಡಿದ್ದು, ಸಾಕಷ್ಟು ಪ್ರಯತ್ನ ಮಾಡಿದರೂ ಹಾವನ್ನು ಬಿಡಿಸಿಕೊಳ್ಳಲಾಗದೆ ಸಮಸ್ಯೆಗೆ ಸಿಲುಕಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಅನೇಕರು ಈ ವಿಡಿಯೋ ನೋಡಿ ಹಾಸ್ಯಾಸ್ಪದವಾದ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಅನೇಕರು ತುಂಬಾ ಭಯಾನಕವಾಗಿದೆ ಎಂತಲೂ ಅಭಿಪ್ರಾಯಪಟ್ಟಿದ್ದಾರೆ.