ಪ್ರಪಂಚದಲ್ಲಿ ಕಳ್ಳರು ವಿವಿಧ ರೀತಿಯ ಶೈಲಿಯಲ್ಲಿ ಕಳ್ಳತನ ಮಾಡುವುದನ್ನು ನಾವು ನೋಡಿರುತ್ತೇವೆ. ಕೆಲವೊಂದು ಕಳ್ಳತನದ ಪ್ರಕರಣಗಳ ಬಗ್ಗೆ ಕೇಳಿದರೇ ಬೆಚ್ಚಿ ಬೀಳಿಸುವಂತಹ ಅನೇಕವು ನಡೆದಿರುತ್ತದೆ. ಅಂತಹುದೇ ಘಟನೆಯೊಂದು ನಡೆದಿದೆ. ಚಲಿಸುತ್ತಿರುವ ಪುಲ್ ಲೋಡ್ ಹಾಕಿಕೊಂಡು ಹೋಗುತ್ತಿರುವ ಲಾರಿಯನ್ನೇರಿ ಕಳ್ಳತನ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದರೇ ನಿಮಗೂ ಸಹ ಶಾಕ್ ಆಗಬಹುದು.
ಪುಲ್ ಸ್ಪೀಡ್ ನಲ್ಲಿ ಚಲಿಸುತ್ತಿರುವ ವಾಹನದಲ್ಲಿ ಕಳ್ಳತನ ಮಾಡುವುದು, ಹೈ ಸೆಕ್ಯುರಿಟಿ, ಸಿಸಿಟಿವಿ ಇದ್ದರೂ ಬ್ಯಾಂಕ್ ಗಳನ್ನು ದೋಚುವಂತಹ ಅನೇಕ ದೃಶ್ಯಗಳನ್ನು ನಾವು ಸಿನೆಮಾದಲ್ಲಿ ನೋಡಿರುತ್ತೇವೆ. ಆದರೆ ಇಲ್ಲಿ ಕಳ್ಳರು ಸಿನಿಮೀಯ ರೀತಿಯಲ್ಲಿ ಅದರಲ್ಲೂ ಹಾಲಿವುಡ್ ಸಿನೆಮಾಗೂ ಮೀರಿಸುವಂತೆ ಕಳ್ಳತನ ಮಾಡಿದ್ದಾರೆ. ವೇಗವಾಗಿ ಹೋಗುತ್ತಿರುವ ಲಾರಿಯನ್ನು ದೋಚಿದ್ದಾರೆ ಕಳ್ಳರು. ಬೈಕ್ ನಲ್ಲಿ ವೇಗವಾಗಿ ಹೋಗುತ್ತಿರುವ ಲಾರಿಯ ಹಿಂದೆ ಹೋಗಿ ಲಾರಿಯಲ್ಲಿರುವ ಕೆಲವೊಂದು ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಸಿನೆಮಾ ಸ್ಟೈಲ್ ನಲ್ಲಿ ಈ ಕಳ್ಳತನ ಮಾಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಈ ವಿಡಿಯೋ ನೋಡಿದ ಎಲ್ಲರೂ ಶಾಕ್ ಆಗಿದ್ದಾರೆ ಎನ್ನಲಾಗುತ್ತಿದೆ.
ವೇಗವಾಗಿ ಹೋಗುತ್ತಿರುವ ಲಾರಿಯನ್ನು ಮೂರು ಮಂದಿ ಹಿಂಬಾಲಿಸಿದ್ದಾರೆ. ಇಬ್ಬರ ಲಾರಿಯ ಮೇಲೆ ಏರಿ, ಗೂಡ್ಸ್ ಬಾಕ್ಸ್ ಗಳನ್ನು ಕದ್ದು ರೋಡ್ ಮೇಲೆ ಹಾಕಿದ್ದಾರೆ. ಬಳಿಕ ತುಂಬಾ ಚಾಲಾಕಿತನದಿಂದ ಬೈಕ್ ಮೇಲೆ ಮತ್ತೆ ಸೇರಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಷಜಾಪೂರ್ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿ ದೇವಾಸ್ ಷಾಜಾಪೂರ್ ಹೈವೇ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಜೋರಾಗಿ ಹೋಗುತ್ತಿರುವ ಟ್ರಕ್ ಅನ್ನು ಮೂರು ಮಂದಿ ಕಳ್ಳರು ಬೈಕ್ ನಲ್ಲಿ ಹಿಂಬಾಲಿಸಿದ್ದಾರೆ. ಇಬ್ಬರು ಟ್ರಕ್ ಮೇಲೆ ಏರಿ ಅಲ್ಲಿದ್ದ ಟಾರ್ಪಲ್ ಕತ್ತರಿಸಿದ್ದಾರೆ. ಬಳಿಕ ಒಂದು ಪೆಟ್ಟಿಗೆಯನ್ನು ತೆಗೆದು ರೋಡ್ ಮೇಲೆ ಎಸೆದಿದ್ದಾರೆ. ಬಳಿಕ ಇಬ್ಬರೂ ಟ್ರಕ್ ನಿಂದ ಇಳಿದು ಬೈಕ್ ಏರಿದ್ದಾರೆ. ಬಳಿಕ ರಸ್ತೆಯಲ್ಲಿ ಬಿದ್ದ ವಸ್ತುಗಳನ್ನು ಸಂಗ್ರಹಿಸಿಕೊಳ್ಳುತ್ತಿರುವುದು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ: https://www.facebook.com/share/r/a7BcSQDe2ST1xD7T/?mibextid=oFDknk
ಇನ್ನೂ ಈ ಕಳ್ಳತನದ ವಿಡಿಯೋವನ್ನು ಅವರ ಹಿಂಬದಿ ಬರುತ್ತಿರುವ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು ವಿಡಿಯೋ ಎಲ್ಲರನ್ನೂ ಬೆಚ್ಚಿಬೀಳಿಸುತ್ತಿದೆ. ಇನ್ನೂ ಹೆದ್ದಾರಿಗಳಲ್ಲಿ ಇಂತಹ ಕಳ್ಳತನದ ಪ್ರಕರಣಗಳು ನಡೆಯುತ್ತಿರುತ್ತವೆ. ಈ ಸಂಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ಸಹ ದಾಖಲಾಗಿಲ್ಲ ಎಂದು ಹೇಳಲಾಗಿದೆ.