ಭಾರತದ ದೇಶ ವಾಸಿಗಳ ಗುರುತಿನ ಚೀಟಿಗಳಲ್ಲಿ ರೇಷನ್ ಕಾರ್ಡ್ (Ration Card) ಸಹ ಪ್ರಮುಖವಾದುದು. ಸರ್ಕಾರಿ ಯೋಜನೆಯ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಅತ್ಯಂತ ಪ್ರಮುಖವಾದುದು ಎನ್ನಲಾಗುತ್ತದೆ. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಲಾಭ ಪಡೆಯಲು ಸಹ ಈ (Ration Card) ರೇಷನ್ ಕಾರ್ಡ್ ಪ್ರಮುಖವಾದುದಾಗಿದೆ. ಇದೀಗ ರಾಜ್ಯ ಸರ್ಕಾರ ಅನರ್ಹ ರೇಷನ್ ಕಾರ್ಡ್‌ಗಳನ್ನು (Ration Card) ರದ್ದುಪಡಿಸುವಂತಹ ಕಾರ್ಯಕ್ಕೆ ಆಹಾರ ಇಲಾಖೆ ಮುಂದಾಗಿದ್ದು, 14 ಮಾನದಂಡಗಳನ್ನು ಮುಂದಿಟ್ಟುಕೊಂಡು ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ರೇಷನ್ ಕಾರ್ಡ್ ನಿಂದ ಹಲವು ಸವಲತ್ತು, ಸೌಲಭ್ಯಗಳು ನಾಗರೀಕರಿಗೆ ಸಿಗಲಿದೆ. ಆದರೆ ಅರ್ಹರಲ್ಲದವರೂ ಬಿಪಿಎಲ್ ಕಾರ್ಡ್ ಪಡೆಯಲಾಗಿದೆ. ಈ ಅಕ್ರಮ ತಡೆಗಟ್ಟಲು ಇದೀಗ ಮಹತ್ವದ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಆಹಾರ ಇಲಾಖೆ ಪಡಿತರ ಚೀಟಿಯಲ್ಲಿ ಆಗಿರುವ ಅಕ್ರಮ ಪತ್ತೆ ಹಚ್ಚುತ್ತಿದೆ. ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಪಡಿತರ ಚೀಟಿ ಅನರ್ಹ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇದರ ಜೊತೆಗೆ ಆಹಾರ ಇಲಾಖೆ 14 ಮಾನದಂಡ ಪಟ್ಟಿ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿದ್ದೂ ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದರೆ ಅಂತವರ ರೇಷನ್ ಕಾರ್ಡ್ ರದ್ದಾಗಲಿದೆ.

ಆಹಾರ ಇಲಾಖೆ ಸಿದ್ದಪಡಿಸಿದ 14 ಮಾನದಂಡಗಳು: ಕಾರು, 100 ಸಿಸಿ ಮೇಲ್ಪಟ್ಟ ದಿಚಕ್ರ ವಾಹನ, ತೆರಿಗೆ ಪಾವತಿದಾರರು, 7.5 ಏಕರೆ ಭೂಮಿಗಿಂತ ಮೇಲ್ಪಟ್ಟವರು, ಕಾಲೇಜು ನೌಕರರು, ಗುತ್ತಿಗೆದಾರರು, ಕೈಗಾರಿಕೋದ್ಯಮ, ಉದ್ಯಮ, ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಹೊಂದಿರುವವರ ಬಿಪಿಎಲ್, ಅಂತ್ಯೋದಯ ಕಾರ್ಡ್ ರದ್ದು ಮಾಡಲಾಗುತ್ತದೆ. ಈ ರೀತಿ 14 ಮಾನದಂಡಗಳನ್ನು ಅಹಾರ ಇಲಾಖೆ ಪಟ್ಟಿ ಮಾಡಿದೆ. 14 ಮಾನದಂಡಗಳನ್ನು ಮುಂದಿಟ್ಟುಕೊಂಡು ರೇಷನ್ ಕಾರ್ಡ್ ರದ್ದುಪಡಿಸುವ ಪ್ರಕ್ರಿಯೆಗೆ ಆಹಾರ ಇಲಾಖೆಯು ಮುಂದಾಗಿದೆ.
ಇನ್ನೂ ಸರ್ಕಾರಿ ನಿಯಮಗಳಿಗೆ ವಿರುದ್ಧವಾಗಿ ಪಡೆದ ಅನರ್ಹ ಪಡಿತರ ಚೀಟಿಗಳ ವಿವರ ನೀಡುವಂತೆ ಆಹಾರ ಇಲಾಖೆಯು ಇ- ಆಡಳಿತ ಕೇಂದ್ರಕ್ಕೆ ಮನವಿ ಮಾಡಿತ್ತು. ಅದರಂತೆ ಇ- ಆಡಳಿತ ಕೇಂದ್ರದ ತಂತ್ರಾಂಶದಿಂದ ದೊರೆತ ಮಾಹಿತಿಯಂತೆ 10,97,621 ಬಿಪಿಎಲ್ ಹಾಗೂ 10,54,368 ಅಂತ್ಯೋದಯ ಕಾರ್ಡ್ ಗಳು ಪತ್ತೆಯಾಗಿದ್ದು, ಇವರೆಲ್ಲಾ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರು ಹೊಂದಿದ್ದಾರೆ ಎಂದು ಇ- ಆಡಳಿತ ಕೇಂದ್ರ ತಿಳಿಸಿದೆ. ಮುಂದಿನ 10 ದಿನಗಳಲ್ಲಿ ಬರೋಬ್ಬರಿ 22 ಲಕ್ಷ ಪಡಿತರ ಚೀಟಿಗಳು ರದ್ದಾಗಲಿದೆ. ಇದರ ಜೊತೆಗೆ ಅಕ್ರಮವಾಗಿ ಪಡೆದಿರುವ ಕಾರ್ಡ್‌ಗಳು ಪತ್ತೆಯಾದರೆ ಈ ಕಾರ್ಡ್ ಕೂಡ ರದ್ದಾಗಲಿದೆ ಎಂದು ತಿಳಿದುಬಂದಿದೆ.