Youth for Seva: ಜಲಮೂಲಗಳನ್ನು ಸಂರಕ್ಷಿಸಲು ನಾವೆಲ್ಲರೂ ಒಂದಾಗಬೇಕು: ಉಮಾಪತಿ ಭಟ್

Youth for Seva – ಮುಂದಿನ ಪೀಳಿಗೆಗೆ ನೀರಿನ ಸಂಕಷ್ಟ ಬರಬಾರದೆಂಬ ಉದ್ದೇಶದಿಂದ ನಮ್ಮ ಪೂರ್ವಜರು ಕೆರೆ, ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಆದರೆ ಇಂದಿನ ಕಾಲದಲ್ಲಿ ಮಾನವನ ದುರಾಸೆಗೆ ಇವೆಲ್ಲವೂ ನಾಶವಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರು ಜಲಮೂಲಗಳ ರಕ್ಷಣೆ ಮಾಡಲು ಒಂದಾಗಬೇಕೆಂದು (Youth for Seva) ಯೂತ್ ಫಾರ್‍ ಸೇವಾ ಸಂಸ್ಥೆಯ ರಾಜ್ಯ ಪರಿಸರ ಸಂಯೋಜಕ ಉಮಾಪತಿ ಭಟ್ ಮನವಿ ಮಾಡಿದರು.

plantation program by youth for seva 4

ಗ್ರಾಮ ವಿಕಾಸ ಹಾಗೂ (Youth for Seva) ಯೂತ್ ಫಾರ್‍ ಸೇವಾ ಸಂಸ್ಥೆಯ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಿಂದ ಬ್ರಾಹ್ಮಣರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಪುರಾತನ ಊರ ಬಾಗಿಲು ಆಂಜನೇಯಸ್ವಾಮಿ ದೇವಾಲಯದ ಬಳಿಯ ಪುರಾತನ ಕಲ್ಯಾಣಿ ಸ್ವಚ್ಚತೆ ಹಾಗೂ ಪುರ್ನಚ್ಚೇತನ ಕಾರ್ಯದ ಅಂಗವಾಗಿ ಸ್ವಚ್ಚಗೊಂಡ ಕಲ್ಯಾಣಿಯ ಸುತ್ತಲೂ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, (Youth for Seva) ಯೂತ್ ಫಾರ್‍ ಸೇವಾ ಸಂಸ್ಥೆಯ ವತಿಯಿಂದ ಪರಿಸರ ಪುನಃಚ್ಚೇತನಗೊಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅದರಲ್ಲಿ ವೃಕ್ಷಾರೋಪಣ ಹಾಗೂ ಜಲಸಂರಕ್ಷಣೆಗೆ ಬಗ್ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅದರಲ್ಲಿ ಕೆರೆಗಳ ದುರಸ್ಥಿ, ಪುನಃಚ್ಚೇತನ, (Youth for Seva) ಕಲ್ಯಾಣಿಗಳ ಪುನಃಚ್ಚೇತನಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕಾರ್ಪೋರೇಟ್ ಕಂಪನಿಗಳ ಸಹಯೋಗದೊಂದಿಗೆ ದಕ್ಷಿಣ ಕನ್ನಡದ ಕಲ್ಯಾಣಿಗಳ ಸ್ವಚ್ಚತೆ ಮಾಡುವ ನಿಟ್ಟಿನಲ್ಲಿ ಯೂತ್ ಫಾರ್‍ ಸೇವಾ ಮುಂದಾಗಿದೆ. ಇದೀಗ ಗುಡಿಬಂಡೆ (Youth for Seva) ತಾಲೂಕಿನ ವ್ಯಾಪ್ತಿಯ 19 ಕಲ್ಯಾಣಿ ದುರಸ್ಥಿ ಹಾಗೂ ಪುನಃಚ್ಚೇತನ ಮಾಡಲಾಗುತ್ತಿದೆ. ಇದಕ್ಕೆ ಕೆಪಿಐಟಿ ಎಂಬ ಕಾರ್ಪೋರೇಟ್ ಕಂಪನಿ ಆರ್ಥಿಕ ನೆರವು ನೀಡಿದೆ. ಜಲಮೂಲಗಳನ್ನು ಪತ್ತೆ ಮಾಡಿ, ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಸುತ್ತಮುತ್ತಲಿನ ಜನರಿಗೆ ಮಳೆಕೊಯ್ಲು ಹಾಗೂ ಜಲಮೂಲಗಳ ರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶ ನಮ್ಮ (Youth for Seva) ಕಾರ್ಯಕ್ರಮಕ್ಕಿದೆ ಎಂದರು.

plantation program by youth for seva 1

ಬಳಿಕ ಗ್ರಾಮವಿಕಾಸ ಸಂಸ್ಥೆಯ ವಾಹಿನಿ ಸುರೇಶ್ ಮಾತನಾಡಿ, ಗುಡಿಬಂಡೆ ತಾಲೂಕಿನಾದ್ಯಂತ ಕಳೆದ 2019 ರಿಂದ ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. (Youth for Seva)  ಶಾಲೆಗಳ ಅಭಿವೃದ್ದಿ, ಗ್ರಾಮಗಳಲ್ಲಿ ಸಾಕ್ಷರತೆ ಹಾಗೂ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು, ಪುರಾತನ ಸ್ಮಾರಕಗಳ ಸಂರಕ್ಷಣೆ ಮೊದಲಾದ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. (Youth for Seva)  ಅದರಂತೆ ಗುಡಿಬಂಡೆಯ ಹೊರವಲಯದ ಊರಬಾಗಿಲು ಆಂಜನೇಯಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಪುರಾತನ ಕಲ್ಯಾಣಿಯನ್ನು ಸ್ವಚ್ಚಗೊಳಿಸಲಾಗಿದೆ. ಕಲ್ಯಾಣಿಯ ಸುತ್ತಲೂ ಬೇಲಿಯನ್ನು ಅಳವಡಿಸಿ, ದೇವಾಲಯವನ್ನೂ (Youth for Seva) ಸಹ ಪುನರುಜ್ಜೀವನ ಗೊಳಿಗೆ ಪೂಜೆ ಪುನಸ್ಕಾರಗಳು ನಡೆಯಲು ಯೋಜನೆ ರೂಪಿಸಲಾಗಿದೆ. ಇದೀಗ ಕಲ್ಯಾಣಿ ಸ್ವಚ್ಚತಾ ಕಾರ್ಯ ಪೂರ್ಣಗೊಂಡಿದ್ದು, ಈ ದೇವಾಲಯದ ಆಡಳಿತ ಮಂಡಳಿ ಹಾಗೂ ಸ್ಥಳೀಯ ಸಾರ್ವಜನಿಕರು ಪೂಜೆ ಹಾಗೂ ಸ್ವಚ್ಚತೆಯನ್ನು ಕಾಪಾಡುತ್ತಾರೆ. (Youth for Seva) ಈ ಕಾರ್ಯಕ್ಕೆ ಗ್ರಾಮ ವಿಕಾಸ ಸಂಸ್ಥೆ, ಜನ ಕಲ್ಯಾಣ ಟ್ರಸ್ಟ್, ವಾಹಿನಿ ಸಂಸ್ಥೆ ಹಾಗೂ ಕೆಪಿಟಿಐ ಕಾರ್ಪೋರೇಟ್ ಸಂಸ್ಥೆ ಸಹಕಾರ ನೀಡಿದೆ. (Youth for Seva) ಮುಂದಿನ ದಿನಗಳಲ್ಲಿ ಒಟ್ಟು 19 ಕಲ್ಯಾಣಿಗಳನ್ನು ಹಂತ ಹಂತವಾಗಿ ಪುನಃಚ್ಚೇತನಗೊಳಿಸಲಾಗುವುದು ಎಂದರು.

plantation program by youth for seva 3

ಈ ವೇಳೆ ಸ್ವಚ್ಚತೆಗೊಂಡ ಕಲ್ಯಾಣಿಯ ಸುತ್ತಲೂ ಗಿಡ ನಡೆವ ಕಾರ್ಯಕ್ರಮಕ್ಕೆ (Youth for Seva)  ಗ್ರಾಮ ವಿಕಾಸ ಸಂಸ್ಥೆಯ ಮುಖ್ಯಸ್ಥ ಹಾಗೂ ಆರ್‍.ಎಸ್.ಎಸ್ ನ ಹಿರಿಯ ಪ್ರಚಾರಕ ಶ್ರೀಧರ್‍ ಸಾಗರ್‍ ಜೀ ಚಾಲನೆ ನೀಡಿದರು. ಈ ಸಮಯದಲ್ಲಿ ಗ್ರಾಮ ವಿಕಾಸ ಸಂಸ್ಥೆಯ ಇಂದಿರಮ್ಮ, ಮಮತ, ನರಸಿಂಹಮೂರ್ತಿ, ಚಿರಂಜೀವಿ, ಜಗನ್ನಾಥ್, ವೇಣು, ನರಸಿಂಹಪ್ಪ, ಅಂಜನ್ ಕುಮಾರ್‍, ಬಾಲಾಜಿ, ಅಭಿರಾಮ್, ಶ್ರೀನಿವಾಸ್ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

Next Post

Kolar News: ಕೋಲಾರದಲ್ಲಿ ನವಜೋಡಿ ಸಾವಿನ ಕೇಸ್ ಗೆ ಟ್ವಿಸ್ಟ್, ವರ ಮಾನಸಿಕ ಅಸ್ವಸ್ಥನಾಗಿದ್ದನಾ?

Sun Aug 11 , 2024
Kolar News- ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆ.7ರ ಬೆಳಿಗ್ಗೆ ಚಂಬರಸನಹಳ್ಳಿ ಗ್ರಾಮದಲ್ಲಿ ಲಿಖೀತಶ್ರೀ (20) ಹಾಗೂ ನವೀನ್ (28) ಎಂಬ ಜೋಡಿಯ ಮದುವೆಯಾಗಿತ್ತು. ಮದುವೆಯಾದ ಕೆಲವೇ ಗಂಟೆಗಳಲ್ಲಿ ಜೋಡಿಯ ನಡುವೆ ಗಲಾಟೆಯಾಗಿದ್ದು, ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರು. ಮೊದಲು ವಧು ಮೃತಪಟ್ಟರೇ, ಬಳಿಕ ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ, ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಒಂದು ಸಿಕ್ಕಿದೆ. ವರನ ಕ್ರೌರ್ಯದಿಂದಲೇ ಈ ಕೃತ್ಯ (Kolar News) […]
Newly married couple quarrel in kolar 0
error: Content is protected !!