Dating – ಸಾಮಾನ್ಯವಾಗಿ ಗಂಡು-ಹೆಂಗಸಿನ ನಡುವೆ ಪ್ರೀತಿ ಉಂಟಾಗುವುದು ಸಹಜ ಎಂದೇ ಹೇಳಬಹುದು. ಕೆಲವೊಂದು ಪ್ರಕರಣಗಳಲ್ಲಿ ಸಲಿಂಗಿಗಳ ಪ್ರೇಮಕಥೆಯನ್ನೂ ಸಹ ಕೇಳಿರುತ್ತೇವೆ. ಆದರೆ ಇಲ್ಲೊಬ್ಬಳು ಯುವತಿ ಯಾರ ಸಹವಾಸವೂ ಬೇಡ ಅಂತಾ ಮರದೊಂದಿಗೆ ಡೇಟಿಂಗ್ (Dating) ಮಾಡಲು ಶುರು ಮಾಡಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವಿಭಿನ್ನ ಲವ್ ಸ್ಟೋರಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಸಾಮಾನ್ಯವಾಗಿ ಯುವತಿಯರಿಗೆ ಸುಂದರವಾದ ಯುವಕರನ್ನು ಕಂಡರೇ ಅಥವಾ ಒಳ್ಳೆಯ ವ್ಯಕ್ತಿತ್ವ ಹೊಂದಿರುವ ಯುವಕರನ್ನು ಕಂಡರೆ ಪ್ರೀತಿ ಚಿಗುರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ಮಾತ್ರ ಮರದೊಂದಿಗೆ (Dating) ಡೇಟಿಂಗ್ ಶುರು ಮಾಡಿದ್ದಾಳೆ. ಹಲವು ಪರಿಸರ ಪ್ರೇಮಿಗಳು ಗಿಡ-ಮರಗಳನ್ನು ಮಕ್ಕಳಂತೆ ಪ್ರೀತಿ ಮಾಡುತ್ತಾರೆ. ಸೋಷಿಯಲ್ ಮಿಡಿಯಾ ಇನ್ ಪ್ಲುಯೆನ್ಸರ್ ಐವಿ ಬ್ಲೂಮ್ ಎಂಬಾಕೆ ಮಾತ್ರ ಮರವನ್ನು ಬಾಯ್ ಫ್ರೆಂಡ್ (Dating) ಆಗಿ ಮಾಡಿಕೊಂಡಿದ್ದಾಳೆ. ಈ ಸಂಬಂಧ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ನಾನು ಕಳೆದ ಎರಡು ವಾರಗಳಿಂದ ಮರದೊಂದಿಗೆ (Dating) ಡೇಟಿಂಗ್ ಮಾಡುತ್ತಿದ್ದೇನೆ. ಮರದೊಂದಿಗೆ ಸಿನೆಮಾ ನೋಡುವುದರಿಂದ ಹಿಡಿದು ಟ್ರಿಪ್ ಗೆ ಹೋಗುವವರೆಗೆ ಉತ್ತಮ ಸಂಬಂಧದೊಂದಿಗೆ ಸಮಯ ಕಳೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಇನ್ನೂ ಈ (Dating) ವಿಡಿಯೋವನ್ನು Ivy Bloom ಎಂಬ ಹೆಸರಿನ ಯುಟ್ಯೂಬ್ ಚಾನಲ್ ನಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಪುಟ್ಟ ಮರದೊಂದಿಗೆ ಯುವತಿ ಡೇಟಿಂಗ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಆಕೆ ಮರವನ್ನು ತಬ್ಬಿಕೊಂಡು ಮುತ್ತುಕೊಡುವುದು, ಅದರೊಂದಿಗೆ ಸಿನೆಮಾ (Dating) ನೋಡುತ್ತಾ ರೊಮ್ಯಾಂಟಿಕ್ ಪಿಕ್ ನಿಕ್ ಕೂಡ ಹೋಗುತ್ತಿರುತ್ತಾಳೆ. ಎರಡು ವಾರಗಳಿಂದ ಆಕೆ ಮರದ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾಳೆ. (Dating) ಈ ಅನುಭವ ತುಂಬಾನೆ ಅದ್ಬುತವಾಗಿದೆ ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಇನ್ನೂ ಮರಕ್ಕೆ ಎಐ ವ್ಯವಸ್ಥೆಯನ್ನು ಸಂಯೋಜಿಸುವ ಮೂಲಕ ಮರವೂ ಸಂಭಾಷಣೆ ನಡೆಸುವಂತೆ ಮಾಡಿದ್ದಾಳೆ. ಇನ್ನೂ ವಿಡಿಯೋ (Dating) ಹಂಚಿಕೊಂಡ ಕಡಿಮೆ ಸಮಯದಲ್ಲೇ ಈ ವಿಡಿಯೋ ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.