True Love – ಇತ್ತೀಚಿಗೆ ಅನೇಕ ಪ್ರೇಮ ಪ್ರಕರಣಗಳಲ್ಲಿ ಮೋಸ ಆಗಿರುವ ಘಟನೆಗಳೇ ಹೆಚ್ಚಾಗಿ ನಡೆಯುತ್ತಿವೆ. ಆದರೆ ಬೆರಳೆಣಿಗೆಯಷ್ಟು ಪ್ರೇಮಕಥೆಗಳಲ್ಲಿ ಮಾತ್ರ ನಿಜವಾದ ಪ್ರೀತಿಯನ್ನು ಕಾಣಬಹುದಾಗಿದೆ. ಅಂತಹುದೇ ಘಟನೆಯೊಂದು ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. (True Love) ರಾಂಪುರ ಎಂಬ ಗ್ರಾಮದಲ್ಲಿ ಪತ್ನಿಯ ಸಾವಿನ ಸುದ್ದಿಯನ್ನು ತಾಳಲಾರದೆ ಪತಿ ಕೂಡ ಮೃತಪಟ್ಟಿದ್ದಾನೆ. ಬಳಿಕ ಇಬ್ಬರ ಮೃತದೇಹಗಳನ್ನು ಒಟ್ಟಿಗೆ ಮೆರವಣಿಗೆ ಮಾಡಿ ಒಂದೇ ಚಿತೆಯ ಮೇಲಿಟ್ಟು ಅಂತ್ಯಕ್ರಿಯೆ ನಡೆಸಿದ್ದಾರೆ.

ಉತ್ತರ ಪ್ರದೇಶದ ಗಾಜಿಪುರದಲ್ಲಿ ಆಘಾತಕಾರಿ (True Love) ಘಟನೆಯೊಂದು ನಡೆದಿದೆ. ರಾಂಪುರ ಎಂಬ ಗ್ರಾಮದಲ್ಲಿ ದಂಪತಿಯೊಂದು ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ. ಆದರೆ ಪತ್ನಿ ಅನಾರೋಗ್ಯದ ನಿಮಿತ್ತ ಮೃತಪಡುತ್ತಾರೆ. ತನ್ನ ಪತ್ನಿ ಮೃತಪಟ್ಟಿದ್ದು ತಾಳಲಾರದೇ ಆತನೂ ಮೃತಪಟ್ಟಿದ್ದಾನೆ. (True Love) ರಾಂಪುರದ ನಿವಾಸಿ ಕಾಮೇಶ್ವರ ಉಪಾಧ್ಯಾಯ ಹಾಗೂ ಚಂಪಾ ಉಪಾಧ್ಯಾಯ ರವರೇ ಮೃತಪಟ್ಟ ದಂಪತಿ. ಕಾಮೇಶ್ವರ ಉಪಾಧ್ಯಾಯ ಕಂದಾಯ ಇಲಾಖೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು. (True Love) ಅವರ ಪತ್ನಿ ಚಂಪಾ ಉಪಾಧ್ಯಾಯ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಬ್ಬರೂ ವಾರಣಾಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡುಬಂದ ಬಳಿಕ ಕುಟುಂಬಸ್ಥರು (True Love) ಅವರನ್ನು ಮನೆಗೆ ಕರೆತಂದಿದ್ದರು.

ಆದರೆ ಅಂದೇ ಚಂಪಾ ಉಪಾಧ್ಯಾಯ ಮೃತಪಟ್ಟಿದ್ದಾರೆ. (True Love) ಪತ್ನಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪತಿಗೆ ತೀವ್ರ ಆಘಾತವಾಗಿದೆ. ನೋವನ್ನು ತಡೆಯಲಾರದೆ ಆತನೂ ಮೃತಪಟ್ಟಿದ್ದಾನೆ. ಈ ಸುದ್ದಿಯನ್ನು ಕೇಳುತ್ತಿದ್ದಂತೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇನ್ನೂ ಪತಿ-ಪತ್ನಿಯರನ್ನು (True Love) ಒಟ್ಟಿಗೆ ಶವಯಾತ್ರೆ ಮಾಡಿದ್ದಾರೆ. ಒಂದೇ ಚಿತೆಯ ಮೇಲಿಟ್ಟು ಇಬ್ಬರನ್ನೂ ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ಸಮಯದಲ್ಲಿ ಗ್ರಾಮದ ಜನರು ಹಾಜರಿದ್ದು (True Love) ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.