Sunday, October 26, 2025
HomeNationalಪತಿಗೆ ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟ ಪತ್ನಿ, ಗಂಡನ ಮರ್ಮಾಂಗವನ್ನು ಸಿಗರೇಟ್ ನಿಂದ ಸುಟ್ಟ...

ಪತಿಗೆ ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟ ಪತ್ನಿ, ಗಂಡನ ಮರ್ಮಾಂಗವನ್ನು ಸಿಗರೇಟ್ ನಿಂದ ಸುಟ್ಟ ಹೆಂಡ್ತಿ….!

ಗಂಡ ಹೆಂಡತಿ ನಡುವೆ ನಡೆದ ಗಲಾಟೆಗಳಂತಹ ಅನೇಕ ಪ್ರಕರಣಗಳಲ್ಲಿ ಪತಿ ತನ್ನ ಪತ್ನಿಗೆ ಚಿತ್ರಹಿಂಸೆ ನೀಡಿದಂತಹ ಸುದ್ದಿಗಳ ಬಗ್ಗೆ ಕೇಳಿರುತ್ತೇವೆ. ಸಿಗರೇಟ್ ಗಳಿಂದ ಪತ್ನಿಗೆ ಸುಟ್ಟಂತಹ ಘಟನೆಗಳ ಬಗ್ಗೆ ಸಹ ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರಕರಣ ಅಂತಹ ಸುದ್ದಿಗಳಿಗೆ ತದ್ವಿರುದ್ದವಾಗಿದೆ.  ಪತ್ನಿಯೊಬ್ಬಳು ತನ್ನ ಪತಿಗೆ ತುಂಬಾ ಚಿತ್ರಹಿಂಸೆ ಕೊಟ್ಟಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

ಉತ್ತರಪ್ರದೇಶದ ಸಿಯೋಹರಾ ಜಿಲ್ಲೆಯಲ್ಲಿ ಈ ಪ್ರಕರಣವೊಂದು ನಡೆದಿದೆ. ಕೌಟುಂಬಿಕ ಕಲಹದಿಂದ ಪತ್ನಿ ತನ್ನ ಪತಿಯ ಮೇಲೆ ಈ ರೀತಿಯ ಕೃತ್ಯ ಎಸಗಿದ್ದಾಳೆ. ಪತಿಯ ಮೇಲೆ ಹಲ್ಲೆ ಮಾಡಿದಂತಹವಳನ್ನು ಮೆಹರ್‍ (30) ಎಂದು ಗುರ್ತಿಸಲಾಗಿದೆ. ಮೆಹರ್‍ ಎಂಬಾಕೆ ತನ್ನ ಪತಿ ಮನ್ನನ್ ಜೈದಿ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾಳೆ. ಕೌಂಟುಂಬಿಕ ಕಲಹದಿಂದಾಗಿ ಪತ್ನಿ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಪತಿಯ ಮೇಲೆ ಕ್ರೌರ್ಯ ಮೆರೆದ ಪತ್ನಿಯ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

wife tortures husband with cigarette burns 1

ಮೆಹರ್‍ ಹಾಗೂ ಮನ್ನನ್ ಜೈದಿ ಜೋಡಿಯ ದಾಂಪತ್ಯದ ನಡುವೆ ಬಿರುಕು ಮೂಡಿದ್ದು, ಈ ಕಾರಣದಿಂದ ಇಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದರು. ಇಬ್ಬರ ನಡುವಣ ಸಂಬಂಧದಲ್ಲಿ ಬಿರುಕು ಬಿಟ್ಟ ಬಳಿಕ ಮೆಹರ್‍ ಮದ್ಯಪಾನ ಹಾಗೂ ಧೂಮಪಾನ ಮಾಡಲು ಶುರು ಮಾಡಿದ್ದಳಂತೆ. ಜೊತೆಗೆ ಮೆಹರ್‍ ತನ್ನನ್ನು ದೈಹಿಕವಾಗಿ ನಿಂದಿಸಿದ್ದಾಳೆ, ಸುಳ್ಳು ಆರೋಪಗಳನ್ನು ಹೊರಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ತನ್ನ ಖಾಸಗಿ ಅಂಗಗಳನ್ನು ಸಿಗರೇಟ್ ನಿಂದ ಸುಟ್ಟಿದ್ದಾಳೆ. ಸುಡುವ ಮುಂಚೆ ಮೆಹರ್‍ ನನ್ನ ಕೈಕಾಲುಗಳನ್ನು ಕಟ್ಟಿಹಾಕಿದ್ದಾಳೆ ಎಂದು ಸಂತ್ರಸ್ತ ಮನ್ನನ್ ಜೈದಿ ಆರೋಪ ಮಾಡಿದ್ದಾನೆ.

ಇನ್ನೂ ಮನ್ನನ್ ತಮ್ಮ ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ಕ್ಯಾಮೆರಾದಲ್ಲಿ ಮೆಹರ್‍ ಮಾಡಿದ ಕೃತ್ಯ ಸೆರೆಯಾಗಿದೆ. ಈ ಸಿಸಿಟಿವಿ ವಿಡಿಯೋ ಮನ್ನನ್ ಪೊಲೀಸರಿಗೆ ನೀಡಿದ್ದಾರೆ. ಪತಿ ನೀಡಿದ ದೂರು ಹಾಗೂ ಸಿಸಿಟಿವಿ ವಿಡಿಯೋ ಆಧರಿಸಿ ಸಿಯೋಹರಾ ಜಿಲ್ಲಾ ಪೊಲೀಸರು ಭಾನುವಾರ ಮಹಿಳೆಯನ್ನು ಬಂಧನ ಮಾಡಿದ್ದಾರೆ. ಮಹಿಳೆಯ ವಿರುದ್ದ ವಿವಿಧ ಸೆಕ್ಷನ್ ಗಳಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular